More

    ಕಲಾವಿದರು ಸಂಸ್ಕೃತಿಯ ಪ್ರತೀಕ

    ವಿಜಯಪುರ : ಕಲಾವಿದರು ದೇಶದ ಸಂಸ್ಕೃತಿಯ ಪ್ರತೀಕ ಎಂದು ಉದ್ಯಮಿ ನಾಗೇಶ ಶೆಟ್ಟಿ ಹೇಳಿದರು.

    ನಗರದ ಪ್ರವಾಸೋದ್ಯಮ ಇಲಾಖೆಯ ಕಲಾ ಗ್ಯಾಲರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ದೃಶ್ಯ ಕಲಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕಲಾವಿದರಿಗೆ ಮೊದಲು ರಾಜಾಶ್ರಯವಿತ್ತು. ಆದರೆ, ಇಂದು ಸರ್ಕಾರ, ಕಾರ್ಪೋರೇಟ್ ಸಂಸ್ಥೆಗಳು, ಉದ್ಯಮಿಗಳು ಕಲಾವಿದರಿಗೆ ಸಹಕಾರ ನೀಡುತಿದ್ದಾರೆ. ಅದು ಹೀಗೆ ಮುಂದುವರಿಯಲಿ ಎಂದು ತಿಳಿಸಿದರು.

    ಪತ್ರಕರ್ತ ಈರಣ್ಣ ಗೌಡರ ಮಾತನಾಡಿ, ದೃಶ್ಯ ಭಾಷೆ ಜಾಗತಿಕವಾಗಿ ಎಲ್ಲರೂ ಪ್ರೀತಿ ಗೌರವದಿಂದ ಕಾಣುವ ಭಾಷೆಯಾಗಿದೆ. ವಿಜಯಪುರದ ಕಲಾವಿದರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆ. ಕಲಾವಿದರು ಒಂದೆಡೆ ಸೇರಿ ಕಲಾಕೃತಿ ರಚಿಸುವುದು ಪ್ರದರ್ಶನ ಮಾಡುವುದು ಶ್ಲಾಘನೀಯ ಕಾರ್ಯ ಎಂದರು.

    ಪ್ರಾಚಾರ್ಯ ಡಾ. ಸದಾಶಿವ ಪವಾರ ಮಾತನಾಡಿ, ವಿಜಯಪುರದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಅತ್ಯಂತ ಸಂಪತ್ಭ್ಬರಿತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ರಾಜ್ಯ ಲಲಿತಕಲಾ ಅಕಾಡೆಮಿ ಸದಸ್ಯ ರಮೇಶ ಚವ್ಹಾಣ ಮಾತನಾಡಿ, ದೃಶ್ಯಕಲೆ ವಿಶ್ವ ಭಾಷೆಯಾಗಿದೆ. ವಿಶ್ವ ವಿಖ್ಯಾತ ಕಲಾವಿದ ಲಿಯೊನಾರ್ಡೋ ಡ ವಿಂಚಿ ಅವರ ಜನ್ಮದಿನವನ್ನು ವಿಶ್ವ ದೃಶ್ಯಕಲಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.

    ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವೇಶ್ವರಯ್ಯ ಮಠಪತಿ ಮಾತನಾಡಿ, ಸರ್ಕಾರ ಎಲ್ಲ ಪ್ರಾಥಮಿಕ ಮತ್ತು ಪೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಾತಿ ಮಾಡಬೇಕು. ಬಾಲ್ಯದಲ್ಲೇ ಮಕ್ಕಳಿಗೆ ಶಿಕ್ಷಣದಲ್ಲಿ ಕಲೆಯ ಮನವರಿಕೆಯಾಗಬೇಕು. ಅದಕ್ಕೆ ಸರ್ಕಾರ ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.

    ಕಲಾವಿದರಾದ ಸುಭಾಸ ಕೆಂಭಾವಿ, ಡಾ.ಜಿ.ಎಸ್. ಭೂಸಗೊಂಡ, ಕೆ.ಗಂಗಾಧರ, ವಿ.ವಿ. ಹಿರೇಮಠ, ಶಿವಣ್ಣ ಗೊಳಸಂಗಿ, ಯಾಮಿನಿ ಶಹಾ, ಶಿವಾನಂದ ಅಥಣಿ, ವಿ.ಜಿ. ಪಟ್ಟಣಶೆಟ್ಟಿ, ಪರಶುರಾಮ ಅಳಗುಂಡಗಿ, ಮಹಾದೇವ ಕೋರಿಶೆಟ್ಟಿ, ಲಿಂಗರಾಜ ಕಾಚಾಪುರ, ದಯಾನಂದ ಪರಮಾಜ, ಗಂಗಾಧರ ಮಾಯಾಚಾರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts