More

    ಕಲಬುರಗಿ ಲಾಕ್ಡೌನ್ ಹಿಂದಕ್ಕೆ

    ಕಲಬುರಗಿ: ಕರೊನಾ ಹಿಮ್ಮೆಟ್ಟಿಸಲು ಜಾರಿಗೊಳಿಸಿದ್ದ ಲಾಕ್ಡೌನ್ 27ರವರೆಗೆ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಬಿ.ಶರತ್ ಭಾನುವಾರ ಹೊರಡಿಸಿದ್ದ ಆದೇಶವನ್ನು ಮಂಗಳವಾರ ರಾತ್ರಿ ಹಿಂತೆಗೆದುಕೊಂಡಿದ್ದಾರೆ. ಇದರೊಂದಿಗೆ ಬುಧವಾರದಿಂದ ಸನ್ ಸಿಟಿ ಅನ್ಲಾಕ್ ಆಗಲಿದೆ. ಆದರೆ ಹಲವು ಬೀಗಿ ಕ್ರಮಗಳು ಜಾರಿಯಲ್ಲಿರಲಿವೆ.
    ಮಹಾನಗರ, ಎಲ್ಲ ತಾಲೂಕು ಮತ್ತು ಸ್ಥಳೀಯ ಸಂಸ್ಥೆಗಳ ನಗರ ಪ್ರದೇಶಕ್ಕೆ ಸೀಮಿತವಾಗಿ ಅನ್ವಯಿಸುವಂತೆ 27ರವರೆಗೆ ಲಾಕ್ಡೌನ್ ಇತ್ತು. ಮಂಗಳವಾರ ಸಂಜೆ ರಾಜ್ಯದ ಜನರನ್ನುದ್ದೇಶಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಎಲ್ಲೆಡೆ ಲಾಕ್ಡೌನ್ ತೆರವುಗೊಳಿಸಲಾಗುವುದು ಎಂದು ಪ್ರಕಟಿಸಿದ ಬೆನ್ನಲ್ಲೇ ಡಿಸಿ ವಿಸ್ತರಣೆ ರದ್ದುಗೊಳಿಸಿದ್ದಾರೆ.
    ಲಾಕ್ಡೌನ್ ಜಾರಿಗೆ ಮುನ್ನ ಜಾರಿಯಲ್ಲಿದ್ದ ಎಲ್ಲ ಸೇವೆಗಳು ಮುಂದುವರಿಯಲಿವೆ ಎಂದು ಜಿಲ್ಲಾಧಿಕಾರಿ ಶರತ್ ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯವೆನಿಸಿದರೆ ಹಲವು ನಿಯಮಗಳನ್ನು ರೂಪಿಸುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.
    ಲಾಕ್ಡೌನ್ ಹಿಂಪಡೆದಿದ್ದರೂ ಎಲ್ಲ ವ್ಯವಹಾರ ಮಾಡುವ ವೇಳೆ ದೈಹಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಕೆ ಮಾಡಬೇಕು. ಕರೊನಾ ಹರಡುವಿಕೆ ತಡೆಯುವಂತಹ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಎಲ್ಲಿಯಾದರೂ ಉಗುಳಿದರೆ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts