More

    ಕಲಬುರಗಿ, ಯಾದಗಿರಿಯಲ್ಲಿ 2781 ಔಷಧ ಮಳಿಗೆಗಳು

    ಕಲಬುರಗಿ: ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಔಷಧ ನಿಯಂತ್ರಣ ಇಲಾಖೆ ವ್ಯಾಪ್ತಿಗೆ ಒಟ್ಟು 2781 ಸರ್ಕಾರಿ ಹಾಗೂ ಖಾಸಗಿ ಔಷಧಿ ಮಳಿಗೆಗಳು ಬರುತ್ತವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.

    ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಲಬುರಗಿಯಲ್ಲಿ ಸರ್ಕಾರಿ ಸಗಟು ಮಳಿಗೆ-1, ಖಾಸಗಿ ಚಿಲ್ಲರೆ ಮಳಿಗೆ- 1467, ಖಾಸಗಿ ಸಗಟು ಮಳಿಗೆ- 651 ಇವೆ. ಇನ್ನು ಯಾದಗಿರಿಯಲ್ಲಿ ಸರ್ಕಾರಿ ಸಗಟು ಮಳಿಗೆ-1, ಖಾಸಗಿ ಚಿಲ್ಲರೆ- 548, ಖಾಸಗಿ ಸಗಟು- 113 ಔಷಧಿ ಮಳಿಗೆಗಳಿವೆ. ಔಷಧ ಮಾರಾಟ ಮಳಿಗೆಗಳನ್ನು ಆರಂಭಿಸಲು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940 ಮತ್ತು ಅದರ ನಿಯಮಾವಳು-1945 ನಿಯಮ 64 ಮತ್ತು 65ರ ಅಡಿಯಲ್ಲಿ ವಿಧಿಸಲಾದ ಷರತ್ತುಗಳು ಅನ್ವಯವಾಗುತ್ತದೆ ಎಂದರು.

    ಕಲಬುರಗಿಯಲ್ಲಿ 6 ಔಷಧ ಪರಿವೀಕ್ಷಕರ ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದ್ದು, ಎಲ್ಲವೂ ಖಾಲಿ ಉಳಿದಿವೆ. ಯಾದಗಿರಿಗೆ ಒಂದು ಹುದ್ದೆ ಮಂಜೂರು ಮಾಡಲಾಗಿದ್ದು, ಯಾರನ್ನು ನಿಯೋಜಿಸಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts