More

    ಕಲಬುರಗಿ ಬಂದ್ ಶಾಂತಿಯುತ

    ಕಲಬುರಗಿ: ರೈತವಿರೋಧಿ ಮತ್ತು ಸದನದಲ್ಲಿ ಚರ್ಚಿಸದೆ ಜಾರಿಗೆ ತಂದಿರುವ ಎಪಿಎಂಸಿ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ಬಂದ್ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಸಂಪೂರ್ಣ ಶಾಂತಿಯುತವಾಗಿತ್ತು.
    ಖಾಸಗಿ ವಾಹನ, ಆಟೋಗಳ ಓಡಾಟ ಎಂದಿನಂತೆ ಇತ್ತು. ಸಾರಿಗೆ ಬಸ್ಗಳು ಮಧ್ಯಾಹ್ನ 12ರವರೆಗೆ ರಸ್ತೆಗಿಳಿಯಲಿಲ್ಲ. ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ತುರ್ತು ಸೇವೆಗಳಿಗೆ ತೊಂದರೆ ಆಗಲಿಲ್ಲ. ಟ್ರ್ಯಾಕ್ಟರ್​ಗಳಲ್ಲಿ ನಡೆದ ಮೆರವಣಿಗೆ ಗಮನ ಸೆಳೆಯಿತು.
    ಬೆಳಗ್ಗೆಯಿಂದಲೇ ನಗರದ ವಿವಿಧೆಡೆ ಪ್ರತಿಭಟನೆ ನಡೆಸಿದ ನಂತರ ನಗರೇಶ್ವರ ಶಾಲೆಯಿಂದ ಮೆರವಣಿಗೆ ಮೂಲಕ ಜಗತ್ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
    ಬೆಳಗ್ಗೆ ಕೇಂದ್ರ ಬಸ್ ನಿಲ್ದಾಣ ಎದುರು ಹೋರಾಟಗಾರರು ಮಾರುತಿ ಮಾನ್ಪಡೆ ನೇತೃತ್ವದಲ್ಲಿ ನಾಲ್ಕು ತಾಸು ರಸ್ತೆತಡೆ ನಡೆಸಿದರು. ಇದರಿಂದಾಗಿ 10ರವರೆಗೂ ನಗರದಿಂದ ಹೊರಹೋಗಬೇಕಿದ್ದ ಬಸ್ಗಳು ನಿಲ್ದಾಣ ಬಿಟ್ಟು ಹೊರಬರಲಿಲ್ಲ. ಜಿಲ್ಲಾಧಿಕಾರಿ ಕಚೇರಿ ಎದುರು, ಎಸ್ವಿಪಿ ವೃತ್ತ ಮತ್ತು ನೆಹರು ಗಂಜ್ನಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಲಾಯಿತು.
    ರೈತ ಸಂಘ ಸೇರಿ ಎಲ್ಲ ರೈತಪರ, ಕನ್ನಡಪರ ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್, ರಿಪಬ್ಲಿಕನ್ ಪಕ್ಷ, ಸಿಪಿಐ, ಸಿಪಿಎಂ, ಎಸ್ಯುಸಿಐ, ಆರ್ಕೆಎಸ್, ಎಐಎಂಎಸ್ಎಸ್, ಕಿಸಾನ ಸಂಘರ್ಷ ಸಮಿತಿ, ದಲಿತ ಸಂಘರ್ಷ ಸಮಿತಿ, ಐಎನ್ಟಿಯುಸಿ, ಎಸ್ಎಫ್ಐ, ಎಐಟಿಯುಸಿ, ಎಐಕೆಎಸ್, ಕೆಪಿಆರ್ಎಸ್, ಎಐಕೆಕೆಎಂಎಸ್, ವಿದ್ಯುತ್ ಗುತ್ತಿಗೆದಾರರ ಸಂಘ, ಎಐಡಿಎಸ್ಒ, ಎಐಡಿವೈಒ, ಗ್ರಾಪಂ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ, ಕರ್ನಾಟಕ ಪೀಪಲ್ಸ್ ಫೋರಂ, ವೆಲ್ಫೇರ್ ಪಾಟರ್ಿ ಆಫ್ ಇಂಡಿಯಾ ಸೇರಿ 60ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಬಂದ್ನಲ್ಲಿ ಭಾಗಿಯಾದರು. ಲಾರಿ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ವಾಣಿಜ್ಯೋದ್ಯಮಿ ಸಂಸ್ಥೆ, ಕಿರಾಣಾ ವ್ಯಾಪಾರಿಗಳು, ಗಂಜ್ ವರ್ತಕರು ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರಿಂದ ಅಹಿತಕರ ಘಟನೆಗಳು ನಡೆಯಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts