More

    `ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆ’ಗೆ ಸಿದ್ಧತೆ: ಎಂ.ಎಸ್.ದಿವಾಕರ್

    ಹೊಸಪೇಟೆ: `ಕರ್ನಾಟಕ ೫೦ರ ಸಂಭ್ರಮ ಜ್ಯೋತಿ ರಥಯಾತ್ರೆ' ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಎಂದು ನಾಮಕರಣಗೊಂಡು ನವಂಬರ್ ೧ಕ್ಕೆ ೫೦ ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲಾಡಳಿತದ ಸಹಯೋಗದಲ್ಲಿಕರ್ನಾಟಕ ಸಂಭ್ರಮ-೫೦ರ’ ವಿಶೇಷ ಕಾರ್ಯಕ್ರಮವನ್ನು ನವಂಬರ್ ೨ರಂದು ಹಂಪಿಯ ಎದುರು ಬಸವಣ್ಣ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುಖ್ಯ ಮಂತ್ರಿ, ಸಚಿವರು, ಶಾಸಕರು ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

    ಕರ್ನಾಟಕ ಸಂಭ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದ್ದು, ಶ್ರೀ ವಿರೂಪಾಕ್ಷ ದೇವಾಲಯದಲ್ಲಿ ಮುಖ್ಯಮಂತ್ರಿಗಳು ಹಾಗೂ ಗಣ್ಯಮಾನ್ಯರಿಂದ ವಿಶೇಷ ಪೂಜೆ, ಭುವನೇಶ್ವರಿ ದೇವಿಗೆ ಪೂಜೆ, ಶ್ರೀ ವಿರೂಪಾಕ್ಷ ದೇವಾಲಯದಿಂದ ಎದುರು ಬಸವಣ್ಣ ಮಂಟಪದತ್ತ ಜನಪದ ಕಲಾತಂಡಗಳೊAದಿಗೆ ಕಾಲ್ನಡಿಗೆ ಮೂಲಕ ಮುಖ್ಯ ಮಂತ್ರಿಗಳು ಹಾಗೂ ಗಣ್ಯಮಾನ್ಯರ ಆಗಮನ, ಎದುರು ಬಸವಣ್ಣ ಮಂಟಪದ ಮುಂಭಾಗದ ದೀಪ ಸ್ತಂಭಕ್ಕೆ ದೀಪ ಬೆಳಗುವ ಕಾರ್ಯಕ್ರಮ ಹಾಗೂ ಕರ್ನಾಟಕ ಸಂಭ್ರಮ-೫೦ರ ಜ್ಯೋತಿ ರಥದ ದೀಪ ಬೆಳಗಿಸುವ ಕಾರ್ಯಕ್ರಮ, ಉದ್ಘಾಟನೆ ಕಾರ್ಯಕ್ರಮದ ಬಳಿಕ ಆಯ್ದ ಕನ್ನಡ ಗೀತೆಗಳ ಗಾಯನ, ‘ವೇದ, ಬೈಬಲ್, ಕುರಾನ್, ಧಮ್ಮಪದಾಲಿ ಹಾಗೂ ಜೈನ ಧರ್ಮಗಳ’ ಸಂದೇಶ ಕಾರ್ಯಕ್ರಮ,
    ಕರ್ನಾಟಕ ಸಂಭ್ರಮ-೫೦ರ ಜ್ಯೋತಿ ರಥಯಾತ್ರೆಗೆ ಚಾಲನೆ ಕಾರ್ಯಕ್ರಮ, ಸಿದ್ದರಾಮನ ಹುಂಡಿಯ ಕಲಾವಿದರಿಂದ ವೀರ ಮಕ್ಕಳ ಕುಣಿತ, ಹಾಗೂ ರಾತ್ರಿ ೭.೩೦ ರಿಂದ ರಾತ್ರಿ ೧೦.೩೦ ಗಂಟೆಯವರೆಗೆ ಸಾಧುಕೋಕಿಲಾ ಮತ್ತು ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

    ಅಲ್ಲದೆ ಸ್ಥಳೀಯ ಕಲಾವಿದರರಿಂದ ಕರಡಿ ಮಜಲು, ನಂದಿಧ್ವಜ, ಚಮ್ಮಾಳ ಮೇಳ, ನಾದಸ್ವರ, ಡೊಳ್ಳು, ಯಕ್ಷಗಾನ, ತಾಷಾರಾಮ್ ಡೋಲ್, ಹಗಲು ವೇಷ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

    ರಾಜ್ಯದ ಭಾಷೆ, ಸಂಸ್ಕೃತಿಯನ್ನು ಎತ್ತಿಹಿಡಿಯುವಂತಹ ಕಾರ್ಯಕ್ರಮ ಇದಾಗಿದ್ದು, ಜಿಲ್ಲೆಯ ಎಲ್ಲಾ ಸಾರ್ವಜನಿಕರು, ವಿಶೇಷವಾಗಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts