More

    ಕರೋನಾ ಸೋಂಕಿಗೆ ವಾರಿಯರ್ ಮೃತ

    ಯಾದಗಿರಿ: ಹೆಮ್ಮಾರಿ ಕರೊನಾ ಸೋಂಕಿಗೆ ಜಿಲ್ಲೆಯಲ್ಲಿ ವಾರಿಯರ್ ಒಬ್ಬರು ಬಲಿಯಾದ ಘಟನೆ ಗುರುವಾರ ನಡೆದಿದಿದೆ.
    ಗೀತಾ ಮಹೇಶ (32) ಸೋಂಕು ತಗುಲಿ ಮೃತಪಟ್ಟ ದುರ್ಧೈವಿ, . ಇವರು ತಾಲೂಕಿನ ಕೌಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಎಂಟು ದಿನಗಳ ಹಿಂದೆ ಅವರ ಪತಿಗೆ ಕರೊನಾ ಪಾಸಿಟಿವ್ ದೃಢಪಟ್ಟಿತ್ತು.

    ನಂತರ ಗೀತಾ ಅವರಿಗೂ ಸೋಂಕು ತಗುಲಿತ್ತು. ಈ ದಂಪತಿಗಳು ನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 2 ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ ಅಸ್ತಮಾದಿಂದ ಬಳಲುತ್ತಿದ್ದ ಗೀತಾ ಅವರನ್ನ ಅನಾರೋಗ್ಯ ನಿಮಿತ್ತ ಬುಧವಾರ ರಾತ್ರಿ ಮತ್ತೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮೊದಲ ಬಾರಿಗೆ ವಾರಿಯರ್ ಬಲಿಯಾದಂತಾಗಿದೆ.

    ಸಚಿವ ರಾಮುಲು ಟ್ವಿಟ್: ಕರೊನಾ ಸೋಂಕಿನಿಂದ ಮೃತಪಟ್ಟ ಗೀತಾ ಅವರ ನಿಧನಕ್ಕೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟರ್ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಗೀತಾ ಅವರು ಕೋವಿಡ್ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದರು. ಅವರ ನಿಧನದಿಂದ ಕುಟುಂಬಗ್ಗೆ ಆದ ನೋವಿನ ಶಕ್ತಿಯನ್ನು ಭಗವಂತ ಭರಿಸಲಿ ಎಂದು ಪ್ರಾರ್ಥಿಸಿರುವ ಸಚಿವರು, ಸರ್ಕಾರದಿಂದ ಗೀತಾ ಕುಟುಂಬಗ್ಗೆ ಸಿಗುವ ಸೌಲಭ್ಯವನ್ನು ಶೀಘ್ರ ಕೊಡಿಸುವುದಗಿ ಭರವಸೆ ನೀಡಿದ್ದಾರೆ.

    ಗೀತಾ ನಿಧನಕ್ಕೆ ಕಂದಕೂರ ಸಂತಾಪ: ಕರೊನಾ ಸೋಂಕು ತಗುಲಿ ಮೃತಪಟ್ಟ ಸ್ಟಾಫ್ ನರ್ಸ್ ಗೀತಾ ಅವರಿಗೆ ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟರ್ ಮೂಲಕ ಗೀತಾ ಅವರು ಕರೊನಾ ಸೋಂಕಿನಿಂದ ನಿಧನ ಹೊಂದಿದ ಸುದ್ದಿ ತಿಳಿದು ಸಾಕಷ್ಟು ನೋವಾಗಿದೆ. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಚೈತನ್ಯ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts