More

    ಕರೊನಾ ಸೋಂಕಿತನಿಗೆ ಗ್ಯಾಂಗ್ರಿನ್ ಶಸ್ತ್ರ ಚಿಕಿತ್ಸೆ

    ಹುಬ್ಬಳ್ಳಿ: ಗ್ಯಾಂಗ್ರಿನ್​ನಿಂದ ಬಳಲುತ್ತಿದ್ದ ದಾವಣಗೆರೆ ಮೂಲದ 69 ವರ್ಷದ ಕರೊನಾ ಸೋಂಕಿತ ವ್ಯಕ್ತಿಗೆ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ಕಿಮ್ಸ್) ಭಾನುವಾರ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

    ದಾವಣಗೆರೆಯಲ್ಲೇ ಶಸ್ತ್ರಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಇಲ್ಲದ ಕಾರಣ ಅಲ್ಲಿಯ ಜಿಲ್ಲಾಧಿಕಾರಿ ಸಲಹೆ ಮೇರೆಗೆ ಮೂರು ದಿನದ ಹಿಂದೆ ರೋಗಿಯನ್ನು ಕಿಮ್್ಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಆತನಿಗೆ ಮಧುಮೇಹವೂ ಇದ್ದುದರಿಂದ ಸಮಸ್ಯೆ ಸಂಕೀರ್ಣವಾಗಿತ್ತು.

    ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗುರುಶಾಂತಪ್ಪ ಯಲಗಚ್ಚಿನ ಹಾಗೂ ತಜ್ಞ ಡಾ. ನಾರಾಯಣ ಹೆಬಸೂರು ಅವರ ಮಾರ್ಗದರ್ಶನದಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದೆ. ಡಾ. ಎಸ್.ವೈ. ಮುಲ್ಕಿಪಾಟೀಲ, ಡಾ. ವಿಕಾಸ, ಡಾ. ಉಲ್ಲಾಸ, ಡಾ. ರಾಕೇಶ, ಡಾ. ಜಿ.ಸಿ. ಪಾಟೀಲ ಅವರು ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕರೊನಾ ಸೋಂಕಿತ ವ್ಯಕ್ತಿಗೆ (ಗ್ಯಾಂಗ್ರಿನ್ ಪೀಡಿತ) ಕಾಲಿನ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಕೀರ್ತಿ ಕಿಮ್ಸ್ಗೆ ಪ್ರಾಪ್ತವಾಗಿದೆ ಎಂದು ವೈದ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

    ಮಗ, ಸೊಸೆ ಕ್ವಾರಂಟೈನ್​ನಲ್ಲಿ: 69 ವರ್ಷದ ವ್ಯಕ್ತಿಯ ಪತ್ನಿ 25 ದಿನಗಳ ಹಿಂದೆ ತೀರಿಕೊಂಡಿದ್ದಾರೆ. ವೃದ್ಧನಲ್ಲಿ ಕರೊನಾ ವೈರಸ್ ಕಂಡುಬಂದಿದ್ದರಿಂದ ಆತನ ಮಗ ಹಾಗೂ ಸೊಸೆಯನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಸದ್ಯ ಕಿಮ್ಸ್ ಆಡಳಿಯ ಮಂಡಳಿಯೇ ಎಲ್ಲ ಜವಾಬ್ದಾರಿ ಹೊತ್ತು ಕರ್ತವ್ಯ ನಿರ್ವಹಿಸಿದೆ. ಇದೊಂದು ಸಂಕೀರ್ಣ ಪ್ರಕರಣವಾಗಿತ್ತು. ಆದರೆ, ನಮ್ಮ ತಂಡ ಯಶಸ್ವಿಯಾಗಿ ನಿಭಾಯಿಸಿದೆ. ಕರೊನಾ ಚಿಕಿತ್ಸೆಯೊಂದಿಗೆ ಬೇರೆ ಶಸ್ತ್ರಚಿಕಿತ್ಸೆಯನ್ನೂ ನಡೆಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಮೂರು ದಿನದ ಹಿಂದೆ ಬಂದಿದ್ದ ವ್ಯಕ್ತಿಗೆ ಗ್ಯಾಂಗ್ರಿನ್ ಆಗಿತ್ತು. ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕರೊನಾ ಸೋಂಕಿನ ಮೂಲಕವೂ ಗ್ಯಾಂಗ್ರಿನ್ ಆಗಬಹುದೆ ಎಂಬುದರ ಕುರಿತು ಅಧ್ಯಯನ ಮಾಡಲಾಗುತ್ತಿದೆ. | ಡಾ.ಎಸ್.ವೈ. ಮುಲ್ಕಿಪಾಟೀಲ ಶಸ್ತ್ರಚಿಕಿತ್ಸೆ ನಡೆಸಿದ ತಂಡದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts