More

    ಕರೊನಾ ಸೇನಾನಿ ಮನೆ ಖಾಲಿ ಮಾಡಿಸಿದ ಮಾಲೀಕ

    ನರಗುಂದ: ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕರೊನಾದಿಂದ ಗುಣ ಹೊಂದಿದರೂ ಬಾಡಿಗೆ ನೀಡಿದ ಮನೆ ಮಾಲಿಕ ಮನೆಯನ್ನು ಖಾಲಿ ಮಾಡಿಸಿದ ಅಮಾನವೀಯ ಘಟನೆ ಇಲ್ಲಿ ಜರುಗಿದೆ.

    ತಾಲೂಕಿನ ಕಲಕೇರಿ ಗ್ರಾಮದ ನಿವಾಸಿ, ಸಿದ್ದಾಪೂರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾಗಿರುವ ಶಾರದಾ ಹಳೇಮನಿ ಕಳೆದ 7 ವರ್ಷಗಳಿಂದ ನರಗುಂದ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಪಡೆದು ಮರಳಿ ಬಂದಾಗ ಮನೆ ಮಾಲೀಕರು ಮನೆ ಖಾಲಿ ಮಾಡುವಂತೆ ಸೂಚಿಸಿದ್ದಾರೆ. ಇದರಿಂದ ಕಂಗಾಲಾದ ಕುಟುಂಬ ಬಾಡಿಗೆ ಮನೆಗಾಗಿ ಪಟ್ಟಣವೆಲ್ಲ ಸುತ್ತಾಡಿದರೂ ಯಾರೂ ಮನೆ ಕೊಡದ ಪರಿಣಾಮ ಕಲಕೇರಿ ಗ್ರಾಮದಲ್ಲಿನ ವಿದ್ಯುತ್, ಶೌಚಗೃಹವಿಲ್ಲದ ಮನೆಯಲ್ಲಿ ವಾಸವಾಗಿದ್ದಾರೆ.

    ಅಂಗನವಾಡಿ ಕಾರ್ಯಕರ್ತೆಗೆ ಜು. 2ರಂದು ಕರೊನಾ ದೃಢಪಟ್ಟಿತ್ತು. ಅಲ್ಲದೆ, ಇವರು ಬಾಡಿಗೆಯಲ್ಲಿದ್ದ ಮನೆಯ ಮಾಲೀಕ ಹಾಗೂ ಆತನ ಕುಟುಂಬದ ಸದಸ್ಯರಿಗೂ ಪಾಸಿಟಿವ್ ಬಂದಿದೆ. ಗದಗ ಜಿಮ್ಸ್​ನಲ್ಲಿ ಚಿಕಿತ್ಸೆ ಪಡೆದಿರುವ ಇವರೆಲ್ಲರೂ ಇದೀಗ ಸಂಪೂರ್ಣ ಗುಣಮುಖರಾಗಿ ಜು. 13ರಂದು ಬಿಡುಗಡೆಗೊಂಡಿದ್ದರು.

    ನಾನು ಮತ್ತು ನನ್ನ ಕುಟುಂಬಕ್ಕೆ ಕರೊನಾ ಪಾಸಿಟಿವ್ ದೃಢಪಟ್ಟ ನಂತರ ಚಿಕಿತ್ಸೆ ಪಡೆದು ಗುಣಮುಖರಾಗಿದ್ದೇವೆ. ಈ ವೇಳೆ ನನ್ನ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಸಹೋದ್ಯೋಗಿಗಳಾಗಲಿ ನನಗೆ ಧೈರ್ಯ ತುಂಬಿಲ್ಲ. ಸಹಾಯವನ್ನೂ ಮಾಡಲಿಲ್ಲ. ಇಲಾಖೆಯಿಂದ ನನಗೆ 2 ತಿಂಗಳಿನ ಸಂಬಳ ಕೊಟ್ಟಿಲ್ಲ. ಈಗ ವಾಸಿಸಲು ಬಾಡಿಗೆ ಮನೆ ಕೊಡದ ಕಾರಣ ಬಹಳ ನೊಂದಿದ್ದೇವೆ. | ಶಾರದಾ ಹಳೇಮನಿ ಅಂಗನವಾಡಿ ಕಾರ್ಯಕರ್ತೆ

    ಅಂಗನವಾಡಿ ಕಾರ್ಯಕರ್ತೆಗೆ ಬಾಡಿಗೆ ಮನೆ ಕೊಟ್ಟಿದ್ದ ಮನೆಯ ಮಾಲೀಕನೊಂದಿಗೆ ನಾವು ಮಾತನಾಡಲು ಬರುವುದಿಲ್ಲ. ಬೇಕಾದ್ರೆ ನರಗುಂದ ನೀರಾವರಿ ಇಲಾಖೆಯ ಕ್ವಾರ್ಟರ್ಸ್​ಗಳಲ್ಲಿ ಖಾಲಿ ಮನೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿ ಅಂಗನವಾಡಿ ಕಾರ್ಯಕರ್ತೆಯ ಕುಟುಂಬಕ್ಕೆ ತಾಲೂಕು ಆಡಳಿತದಿಂದ ಮನೆಯ ವ್ಯವಸ್ಥೆ ಮಾಡಿಕೊಡಲಾಗುವುದು. | ಎ.ಎಚ್. ಮಹೇಂದ್ರ ನರಗುಂದ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts