More

    ಕರೊನಾ ಸೇನಾನಿಗಳ ಸೇವೆ ಅಮೂಲ್ಯ

    ಅಳ್ನಾವರ: ಕರೊನಾ ಸೋಂಕು ಹಳ್ಳಿಗಳಲ್ಲಿ ಹರಡದಂತೆ ಹಗಲಿರುಳು ಶ್ರಮಿಸುತ್ತಿರುವ ಕರೊನಾ ಸೇನಾನಿಗಳ ಸೇವೆ ಅಮೂಲ್ಯ ಎಂದು ಬೆಣಚಿ ಗ್ರಾಪಂ ಅಧ್ಯಕ್ಷೆ ಅಮೀನಾಬೇಗಂ ನದಾಫ್ ಹೇಳಿದರು. ಸಮೀಪದ ಬೆಣಚಿ ಗ್ರಾಪಂನಲ್ಲಿ ಕರೊನಾ ಸೇನಾನಿಗಳನ್ನು ಸತ್ಕರಿಸಿ ಅವರು ಮಾತನಾಡಿದರು. ಪರ ಊರಿನಿಂದ ಬರುವ ಜನರ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ಸೋಂಕು ತಡೆಗೆ ಕರೊನಾ ಜಾಗ್ರತೆ ಸಮಿತಿ ಸದಸ್ಯರು ಕೂಡ ಸಾಕಷ್ಟು ಶ್ರಮಿಸಿದ್ದಾರೆ ಎಂದರು. ಕಂದಾಯ ನಿರೀಕ್ಷಕ ಲಕ್ಷ್ಮ ಪತ್ತಾರ, ಪೊಲೀಸ್ ಗಂಗಾಧರ ಸಣ್ಣಮೇಟಿ, ರಾಮದಾಸ ಹಕ್ಕರಕಿ, ಪತ್ರಕರ್ತರಾದ ಗುರುರಾಜ ಸಬನೀಸ್, ಮಂಜುನಾಥ ನಂದಿಹಳ್ಳಿ, ಶಶಿಧರ ಪತಂಗೆ, ಬಾಬು ಸೇರಿ ಕರೊನಾ ಜಾಗ್ರತೆ ಸಮಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಸತ್ಕರಿಸಲಾಯಿತು. ಆಶಾ ಕಾರ್ಯಕರ್ತೆಯರಿಗೆ 2000 ರೂ. ನೀಡಲಾಯಿತು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಎ.ಡಿ. ಕೆಂಚಣ್ಣವರ ಮಾತನಾಡಿ, ಲಾಕ್​ಡೌನ್ ಸಡಿಲಿಕೆಯನ್ನು ದುರಪಯೋಗ ಮಾಡಿಕೊಳ್ಳಬಾರದು. ನಿಮ್ಮ ಜೀವ ನಿಮ್ಮ ಕೈಯಲ್ಲಿದೆ. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮದುವೆ ಕುರಿತು ಗ್ರಾಪಂಗೆ ಮಾಹಿತಿ ನೀಡಬೇಕು ಎಂದರು. ಉಪಾಧ್ಯಕ್ಷ ಪ್ರಕಾಶ ಕುಣಕಿಕೊಪ್ಪ, ಸದಸ್ಯರಾದ ಮಹಾದೇವ ಗೋದಗೇರಿಕರ, ರುಕ್ಮಾ ಪಾಟೀಲ, ರುಕ್ಕವ್ವ ದುಬ್ಬನಮರಡಿ, ರಹಿದುನಸಾಬ್ ದೊಡ್ಡಮನಿ, ಸುವರ್ಣಾ ಬೈಲೂರ, ರೇಖಾ ಹರಿಜನ, ಜಗದೀಶ ಜಗದಾಪ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts