More

    ಕರೊನಾ ತೊಲಗಿಸಲು ಕಂಕಣಬದ್ಧರಾಗೋಣ

    ಚನ್ನಮ್ಮನ ಕಿತ್ತೂರ: ಪ್ರಾಥಮಿಕ ಹಂತದಲ್ಲೇ ಕರೊನಾ ವೈರಸ್‌ಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಶಾಸಕ ಮಹಾಂತೇಶ ದೊಡಗೌಡರ ಹೇಳಿದರು. ಪಟ್ಟಣದ ಕೋಟೆ ಸಭಾಭವನದಲ್ಲಿ ಭಾನುವಾರ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಪಟ್ಟಣ, ಗ್ರಾಮಗಳಲ್ಲಿ ರಾಸಾಯನಿಕ ದ್ರಾವಣ ಸಿಂಪಡಣೆ ಆರಂಭಿಸಬೇಕು ಎಂದು ಸೂಚಿಸಿದ ಅವರು, ಕರೊನಾ ತೊಲಗಿಸಲು ಕಂಕಣಬದ್ಧರಾಗೋಣ ಎಂದರು.

    ತಾಲೂಕು ವೈದ್ಯಾಧಿಕಾರಿ ಎಸ್.ಎಸ್.ಸಿದ್ದಣ್ಣವರ ಮಾತನಾಡಿ, ಕರೊನಾ ಸರಪಳಿ ತುಂಡರಿಸಲು ಎಲ್ಲರೂ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು. ವೈದ್ಯರ ಸಂಘದ ಅಧ್ಯಕ್ಷ ವೆಂಕಟೇಶ ಉಣಕಲಕರ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಸೆಂಟರ್ ತೆರೆದಿರುವುದರಿಂದ ಇತರ ಕಾಯಿಲೆ ಪೀಡಿತರ ಚಿಕಿತ್ಸೆಗೆ ತೊಂದರೆಯಾಗಿದೆ. ಆದ್ದರಿಂದ ಶಾಸಕರ ಮಾದರಿ ಶಾಲೆಯಲ್ಲಿ ಎರಡು ಬೆಡ್ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು. ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಪಪಂ ಮುಖ್ಯಾಧಿಕಾರಿ ಪ್ರಕಾಶ ಮಠದ, ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ದೇವರಾಜ ಉಳ್ಳಾಗಡ್ಡಿ, ಪಪಂ ಅಧ್ಯಕ್ಷ ಹನುಮಂತ ಲಂಗೋಟಿ, ಸ್ಥಾಯಿ ಸಮೀತಿ ಅದ್ಯಕ್ಷ ಕಿರಣ ವಾಳದ, ಅಭಿಯಂತ ರವೀಂದ್ರ ಗಡಾದ, ಡಾ. ವೆಂಕಟೇಶ ಉಣಕಲಕರ, ಡಾ.ಮಹಾಂತೇಶ ಕಲ್ಮಠ, ಡಾ.ಬಸವರಾಜ ಪರವಣ್ಣವರ ಉಪಸ್ಥಿತರಿದ್ದರು.

    ನೇಸರಗಿ ವರದಿ: ಕರೊನಾ ತಡೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಸದಸ್ಯರು ಮನೆ ಮನೆಗೆ ತೆರಳಿ ಜನರ ಯೋಗಕ್ಷೇಮ ವಿಚಾರಿಸಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಸೂಚಿಸಿದರು. ಸಮೀಪದ ಮೇಕಲಮರ್ಡಿ ಗ್ರಾಪಂ ಸಭಾಭವನದಲ್ಲಿ ಸೋಡಿಯಂ ಹೈಪೋಕ್ಲೋರೈಡ್ ಸಿಂಪಡಣೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯಿತಿಗೆ 25 ಲೀಟರ್ ಸೋಡಿಯಂ ಹೈಪೋಕ್ಲೋರೈಡ್ ನೀಡಿದ್ದು, ಎಲ್ಲ ವಾರ್ಡ್‌ಗಳಲ್ಲಿ ಸಿಂಪಡಿಸಬೇಕು ಎಂದರು. ತಹಸೀಲ್ದಾರ್ ಬಸವರಾಜ ನಾಗರಾಳ, ವಿಜಯಕುಮಾರ ಪಾಟೀಲ, ನೋಡಲ್ ಅಧಿಕಾರಿ ಆರ್.ಜಿ.ಎಲಿಗಾರ, ಪಿಡಿಒ ಶಶಿಕಲಾ ಅನಿಗೋಳ, ಗ್ರಾಪಂ ಅಧ್ಯಕ್ಷ ಚಂದ್ರಯ್ಯ ಹಿರೇಮಠ, ಬಿ.ಎಸ್.ಚೋಬಾರಿ, ಭಾರತಿ ತಿಗಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts