More

    ಕರೊನಾ ತಡೆಗೆ ಹೋಮಿಯೋಪತಿ ಮಾತ್ರೆ ಪೂರಕ

    ಬಸವಕಲ್ಯಾಣ: ಹೋಮಿಯೋಪತಿ ಮಾತ್ರೆ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಇದರಿಂದ ಕರೊನಾ ರೋಗ ಬರುವುದನ್ನು ತಡೆಯಲು ಪೂರಕವಾಗಲಿದೆ. ಸಾರ್ವಜನಿಕರು ಮಾಸ್ಕ್ ಇಲ್ಲದೆ ಹೊರಗೆ ಬರಬಾರದು ಎಂದು ಜಿಪಂ ಪ್ರತಿಪಕ್ಷದ ನಾಯಕ ಸುಧೀರ ಕಾಡಾದಿ ಹೇಳಿದರು.
    ಕರೊನಾ ತಡೆಯುವ ನಿಟ್ಟಿನಲ್ಲಿ ಪಟ್ಟಣದ ಸಿಡಿಪಿಒ ಕಾರ್ಯಾಲಯದ ಆವರಣದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ವಿತರಿಸಿ ಮಾತನಾಡಿದ ಅವರು, ಜನರು ತಂಪು ಆಹಾರ, ನೀರು ಸೇವಿಸಬಾರದು ಎಂದರು. ಆರೋಗ್ಯವಂತರಾಗಿರಲು ಯೋಗ ಮತ್ತು ದೈಹಿಕ ವ್ಯಾಯಾಮ ಮಾಡುವುದು ಅವಶ್ಯ. ನಮ್ಮ ಆರೋಗ್ಯದ ಜತೆಗೆ ಕುಟುಂಬದ ಸದಸ್ಯರ ಆರೋಗ್ಯ ಕಾಪಾಡುವುದು ಅವಶ್ಯ. ಹೋಮಿಯೋಪತಿ ಹೊರ ತಂದಿರುವ ರೋಗ ನಿರೋಧಕ ಶಕ್ತಿ ಮಾತ್ರೆ ಆರೋಗ್ಯಕ್ಕೆ ಪೂರಕವಾಗಿದ್ದು, ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದರು.
    ಡಾ.ಶಿವಶರಣ ಝಳಕೆ ಮಾತನಾಡಿ, ಪ್ರತಿಯೊಬ್ಬರಿಗೆ 10 ಹೋಮಿಯೋಪತಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ನೀಡಲಾಗುತ್ತಿದ್ದು, ಮೂರು ದಿನ ನಿತ್ಯ ಖಾಲಿ ಹೊಟ್ಟೆಯಲ್ಲಿ ಮೂರು ಮಾತ್ರೆ ಬೆಳಗ್ಗೆ ನುಂಗಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿ, ಕರೊನಾ ರೋಗ ಹರಡುವಿಕೆ ತಡೆಗಟ್ಟಬಹುದು ಎಂದು ತಿಳಿಸಿದರು.
    ಸಿಡಿಪಿಒ ಶಾಹರ್ದ್​ ಕಲ್ಲಮೇಕರ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಬಿಜೆಪಿ ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣಿ, ಜಿಲ್ಲಾ ಉಪಾಧ್ಯಕ್ಷ ರವಿ ಚಂದನಕೇರೆ, ಪ್ರಮುಖರಾದ ಅರವಿಂದ ಮುತ್ಯಾ, ದೀಪಕ ಗಾಯಕವಾಡ, ಶೋಭಾವತಿ ತೆಲಂಗ, ಅಶೋಕ ತೆಲಂಗ, ಹಣಮಂತ ದರ್ಜೆ, ಉಜ್ವಲ ಶಾಸ್ತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts