More

    ಕರೊನಾ ತಡೆಗೆ ವಾಹನ ಚಾಲಕನ ವಿನಮ್ರ ಸೇವೆ

    ಧಾರವಾಡ: ಕರೊನಾ ಹಾವಳಿ ಸಮಯದಲ್ಲಿ ಅನೇಕರು ಜನರಿಗೆ ಸಹಾಯ ಮಾಡುವ ಮೂಲಕ ಸಾಕಷ್ಟು ಪ್ರಚಾರ ಪಡೆದಿದ್ದಾರೆ. ಆದರೆ, ಈ ಸಾಮಾನ್ಯ ವ್ಯಕ್ತಿ ತೆರೆಮರೆಯಲ್ಲೇ ಜನರಿಗೆ ತನ್ನ ಕೈಲಾದ ಸಹಾಯ ಮಾಡುವ ಮೂಲಕ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದಾರೆ.

    ಇಲ್ಲಿನ ಕಲ್ಯಾಣನಗರ ಭಾಗದಲ್ಲಿ ನಿತ್ಯ ಕಸ ವಿಲೇವಾರಿಗೆ ತೆರಳುವ ವಾಹನದ ಚಾಲಕ ಮಲ್ಲಪ್ಪ ಯಮೋಜಿ ಎಂಬುವವರು, ಆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೌರದ ಅಂಗಡಿಗಳು ಇರುವುದನ್ನು ಮನಗಂಡಿದ್ದಾರೆ. ಅವರು ಸುರಕ್ಷಿತವಾಗಿರಲಿ ಎಂಬ ಕಾರಣಕ್ಕೆ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಸ್ವಂತ ಖರ್ಚಿನಲ್ಲಿ ಮುಖಗವಸು, ಕೈಗವಸು ಹಾಗೂ ಸ್ಯಾನಿಟೈಸರ್ ನೀಡಿ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಜಾಗೃತಿ ಮೂಡಿಸುತ್ತಿದ್ದಾರೆ.

    ಕಲ್ಯಾಣನಗರ, ನಿರ್ಮಲನಗರ, ನವೋದಯನಗರ, ಮಹಾಮನೆ ಬಡಾವಣೆ ಮತ್ತಿತರ ಪ್ರದೇಶಗಳಲ್ಲಿ, ದೈಹಿಕ ಅಂತರ ಕಾಪಾಡಿಕೊಳ್ಳುವ ಕುರಿತು ಸಾರ್ವಜನಿಕರಿಗೂ ಮನವಿಪೂರ್ವಕವಾಗಿ ತಿಳಿಹೇಳುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಮಲ್ಲಪ್ಪ ಯಮೋಜಿ, ‘ಕೆಲ ದಿನಗಳಿಂದ ನನ್ನ ಕೈಲಾದಷ್ಟು ಸೇವೆ ಮಾಡುತ್ತಿದ್ದೇನೆ. ನಾವು ಒಬ್ಬರಿಗೆ ಸಹಾಯ ಮಾಡಿದರೆ ನಮಗೆ ಮತ್ತೊಬ್ಬರು ಸಹಾಯ ಮಾಡುತ್ತಾರೆ. ಇದೇ ನಂಬಿಕೆಯಿಂದ ಈ ಸೇವೆ ಮಾಡುತ್ತಿದ್ದೇನೆ’ ಎಂದು ವಿನಮ್ರತೆಯಿಂದ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts