More

    ಕರೊನಾ ಜಾಗೃತಿ ಅಭಿಯಾನ ಶುರು

    ಕಲಬುರಗಿ: ಕರೊನಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಂಸದ ಡಾ.ಉಮೇಶ ಜಾಧವ್ ಜಾಗೃತಿ ಅಭಿಯಾನ ವಾಹನಕ್ಕೆ ಶುಕ್ರವಾರ ಚಾಲನೆ ನೀಡಿದರು.
    14ರವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿ ಮತ್ತು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಸಂಚರಿಸುವ ಈ ವಾಹನ ಕರೊನಾ ಕುರಿತು ತಿಳಿವಳಿಕೆ ನೀಡಲಿದೆ. ಎಲ್ಲರೂ ಮನೆಯಲ್ಲೇ ಇರುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಚೀನಾ, ಅಮೆರಿಕ, ಬ್ರಿಟನ್, ಜರ್ಮನಿ, ಸ್ಪೇನ್, ನೆದರ್ಲೆಂಡ್ ಕರೊನಾ ಪ್ರಭಾವಕ್ಕೆ ತತ್ತರಿಸಿವೆ. ಭಾರತದಲ್ಲೂ ವೈರಸ್ ಕಾಣಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮುಂದಾಲೋಚನೆ, ದಿಟ್ಟ ನಿರ್ಧಾರದಿಂದ ಕರೊನಾ ಕಟ್ಟಿಹಾಕಲು ಪ್ರಯತ್ನಿಸಲಾಗುತ್ತಿದೆ ಎಂದರು.
    ಕೇಂದ್ರದಿಂದ 1.75 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಕಾರ್ಮಿಕರಿಗೆ, ಜನಧನ ಖಾತೆ ಹೊಂದಿರುವ ಮಹಿಳೆಯರಿಗೆ ಹಣ, ಉಚಿತ ಸಿಲಿಂಡರ್ ಸೇರಿ ಅನೇಕ ಸೌಲಭ್ಯ ಘೋಷಿಸಲಾಗಿದೆ. ರಾಜ್ಯ ಸರ್ಕಾರ ಎರಡು ತಿಂಗಳು ಉಚಿತ ಪಡಿತರ ಒದಗಿಸುತ್ತಿದೆ. ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಲಾಖೆ, ಮಾಧ್ಯಮಗಳು ಶ್ರಮಿಸುತ್ತಿರುವುದಕ್ಕೆ ಅಭಿನಂದಿಸುವುದಾಗಿ ಹೇಳಿದರು.

    ಇಂದು ನಗರಕ್ಕೆ ಕಪಿಲ್ ಮೋಹನ್
    ಕಲಬುರಗಿ: ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಕರ್ಾರದ ಪ್ರಧಾನ ಕಾರ್ಯದಶರ್ಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಕಪಿಲ್ ಮೋಹನ್ ಬೆಂಗಳೂರಿನಿಂದ ರಸ್ತೆ ಮೂಲಕ ಶನಿವಾರ ಬೆಳಗ್ಗೆ 5.30ಕ್ಕೆ ನಗರಕ್ಕೆ ಆಗಮಿಸುವರು. ಮಧ್ಯಾಹ್ನ 3ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೊನಾ ವೈರಸ್ (ಕೋವಿಡ್-19) ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ತುತರ್ು ಸಭೆ ನಡೆಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts