More

    ಕರೊನಾ ಜತೆ ಬದುಕು ಅನಿವಾರ್ಯ

    ಹಳಿಯಾಳ: ಕರೊನಾ ರೋಗಕ್ಕೆ ಲಸಿಕೆ ಸಿಗುವವರೆಗೂ ನಾವು ಅದರ ಜೊತೆಯಲ್ಲಿ ಬದುಕನ್ನು ಸಾಗಿಸುವುದು ಅನಿವಾರ್ಯ. ಈ ವಾಸ್ತವಿಕ ಸತ್ಯವನ್ನು ಜನರಿಗೆ ಮನವರಿಕೆ ಮಾಡಿ ಅವರಲ್ಲಿ ಕರೊನಾ ಕುರಿತಾಗಿ ಮೂಡಿರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಿ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಹೇಳಿದರು.

    ತಾಲೂಕಿನ ಹವಗಿ ಗ್ರಾಮದಲ್ಲಿ ಬುಧವಾರ ಹಳಿಯಾಳ- ದಾಂಡೇಲಿ ತಾಲೂಕಿನ ಕರೊನಾ ಸೇನಾನಿಗಳ ಸಭೆ ನಡೆಸಿ ಮಾರ್ಗದರ್ಶನ ಮಾಡಿದರು.

    ಲಾಕ್ ಡೌನ್ ಮೊದಲಿನ ಹಂತದಲ್ಲಿ ಸಮುದಾಯವನ್ನು ಮನೆಯೊಳಗೆ ಇಟ್ಟು, ರೋಗ ನಿಯಂತ್ರಣದ ಜವಾಬ್ದಾರಿಯನ್ನು ಆಡಳಿತ ಯಂತ್ರವು ವಹಿಸಿತು. ಈಗ ಈ ಗುರುತರ ಜವಾಬ್ದಾರಿಯನ್ನು ಸಮುದಾಯಕ್ಕೆ ವಹಿಸಬೇಕಾಗಿದೆ. ಅದಕ್ಕಾಗಿ ಅವರನ್ನು ಮಾನಸಿಕವಾಗಿ ಅಣಿಗೊಳಿಸಬೇಕಾಗಿದೆ ಎಂದರು.

    ವಿದೇಶದಿಂದ ಹೊರ ರಾಜ್ಯದಿಂದ ಬಂದವರ ಶೇ. 90 ರಷ್ಟು ಮಾಹಿತಿಯು ಜಿಲ್ಲಾಡಳಿತದ ಬಳಿಯಿರುತ್ತದೆ. ಆದರೆ, ಇದು ನಿಜವಾದ ಮಾಹಿತಿಯಲ್ಲ, ಬದಲಾಗಿ ಕಳ್ಳಮಾರ್ಗದಿಂದ ಗುಪ್ತವಾಗಿ ಬರುವರ ಬಗ್ಗೆ ನಿಗಾ ವಹಿಸಿ ಸ್ಪಷ್ಟ ಮಾಹಿತಿಯನ್ನು ನೀಡುವ ಕಾರ್ಯ ಕರೊನಾ ಸೇನಾನಿಗಳದ್ದಾಗಿದೆ ಎಂದರು.

    ಸಭೆಯಲ್ಲಿ ಹಳಿಯಾಳ ತಹಸೀಲ್ದಾರ ವಿದ್ಯಾಧರ ಗುಳಗುಳೆ, ದಾಂಡೇಲಿ ತಹಸೀಲ್ದಾರ್ ಶೈಲೇಶ ಪರಮಾನಂದ, ಹಳಿಯಾಳ ಇ.ಒ ಪ್ರವೀಣಕುಮಾರ ಸಾಲಿ, ದಾಂಡೇಲಿ ಇಒ ಪರಶುರಾಮ ಗಸ್ತಿ, ದಾಂಡೇಲಿ ನಗರ ಸಭೆ ಆಯುಕ್ತ ಡಾ. ಸೈಯದ್ ಅಲಿ, ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಕದಂ, ಸಿಪಿಐ ಬಿ.ಎಸ್.ಲೋಕಾಪುರ, ಸಿಡಿಪಿಒ ಡಾ. ವಿಜಯಲಕ್ಷ್ಮಿ ಎಸ್, ಬಿಇಒ ಸಮೀರ ಮುಲ್ಲಾ, ಶಿರಸ್ತೇದಾರ್ ಅನಂತ ಚಿಪ್ಪಲಗಟ್ಟಿ ಇದ್ದರು. ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ಪಿಡಿಒ, ಉಪ ತಹಸೀಲ್ದಾರ್​ಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಬಿಲ್ ಸಂಗ್ರಾಹಕರು, ಆಶಾ, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. ಹವಗಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚಂದ್ರಶೇಖರ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.

    ತಪ್ಪು ತಿಳಿವಳಿಕೆಯನ್ನು ದೂರ ಮಾಡಿ: ಕರೊನಾ ನಿಯಂತ್ರಿಸಲು ಪ್ರಾಮಾಣಿಕವಾಗಿ ಕೆಲಸಮಾಡಿದ ತಾಲೂಕಿನ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಎಲ್ಲ ಸಿಬ್ಬಂದಿಯ ಸಹಕಾರವನ್ನು ಜಿಲ್ಲಾಧಿಕಾರಿ ಹರೀಶಕುಮಾರ ಕೆ. ಮುಕ್ತಕಂಠದಿಂದ ಶ್ಲಾಘಿಸಿದರು.

    ಕೋವಿಡ್19 ನಿಯಂತ್ರಣ ಸಂಬಂಧ ಬುಧವಾರ ಜೊಯಿಡಾ ಕುಣಬಿ ಭವನದಲ್ಲಿ ತಾಲೂಕಿನ ಎಲ್ಲ ಪಿಡಿಒ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾಯಕರ್ತೆಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಜ್ಞಾನ ಇದ್ದು ಅನ್ಯಾಯ ಮಾಡುವುದು ತಪ್ಪು. ತಿಳಿವಳಿಕೆ ಇಲ್ಲದೆ ಮಾಡುವುದು ತಪ್ಪಲ್ಲ. ಜನರಲ್ಲಿರುವ ಕೋವಿಡ್ ಬಗ್ಗೆ ಇರುವ ತಪ್ಪು ತಿಳಿವಳಿಕೆಯನ್ನು ದೂರ ಮಾಡಬೇಕಾಗಿದೆ. ಜೀವ ಮತ್ತು ಜೀವನ ಜತೆ ಜತೆಯಾಗಿ ಹೋಗಬೇಕು. ಈಗ ಎರಡನೇ ಹಂತದ ಕಾರ್ಯಯೊಜನೆಯಲ್ಲಿ ಕರೊನಾ ಸೇನಾನಿಗಳಾದ ಪಿಡಿಒ,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾಯಕರ್ತೆಯರು ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಆರೋಗ್ಯ ಸಂಬಂಧಿ ವಿಷಯಗಳ ಮಾಹಿತಿ ಪಡೆದು ಸಮುದಾಯಕ್ಕೆ ಕರೊನಾ ಹರಡದಂತೆ ತಡೆಕಟ್ಟುವಲ್ಲಿ ಮಹತ್ತರ ಕಾರ್ಯ ವಹಿಸಬೇಕಾಗಿದೆ ಎಂದರು.

    ಜೊಯಿಡಾ ತಹಸೀಲ್ದಾರ್ ಸಂಜಯ ಕಾಂಬ್ಳೆ, ತಾ.ಪಂ ಇಒ ಆನಂದ ಬಡಕುಂದ್ರಿ, ಜೊಯಿಡಾ ಸಿಪಿಐ ಬಾಬಾ ಸಾಹೇಬ ಹುಲ್ಲಣ್ಣವರ ತಾಲೂಕು ಆರೋಗ್ಯಾಧಿಕಾರಿ ಸುಜಾತಾ ಉಕ್ಕಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts