More

    ಕರೊನಾಕ್ಕೆ ಆಳಂದ ವ್ಯಕ್ತಿ ಬಲಿ

    ಕಲಬುರಗಿ: ಅಟ್ಟಹಾಸ ಮುಂದುವರಿಸಿರುವ ಕರೊನಾ ಸೋಂಕಿಗೆ ಸೋಮವಾರ ಜಿಲ್ಲೆಯಲ್ಲಿ ಇನ್ನೊಂದು ಬಲಿಯಾಗಿದ್ದು, ಮೃತರ ಸಂಖ್ಯೆ ಐದಕ್ಕೆ ಏರಿದಂತಾಗಿದೆ.
    ತೀವ್ರ ಉಸಿರಾಟದಿಂದ ಬಳಲುತ್ತಿದ್ದ ಆಳಂದದ ಶರಣ ನಗರ ನಿವಾಸಿ 57 ವರ್ಷದ ವ್ಯಕ್ತಿ (ಪಿ422) ಮೃತಪಟ್ಟವ. ಈತ ಸೋಂಕಿತನಾಗುವುದಕ್ಕಿಂತ ಮೊದಲು ನಾನಾ ರೋಗಗಳಿಂದ ಬಳಲುತಿದ್ದ ಎನ್ನಲಾಗಿದೆ. 22ರಂದು ಕಲಬುರಗಿ ಇಎಸ್ಐ ಐಸೋಲೇಷನ್ ವಾರ್ಡಗೆ ಸೇರಿಸಲಾಗಿತ್ತು. ಆತನ ರಕ್ತ ಮತ್ತು ಗಂಟಲು ದ್ರವ ಪರೀಕ್ಷಿಸಿದಾಗ ಕರೊನಾ ಸೋಂಕು ದೃಢಪಟ್ಟಿತು. ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
    ತಂದೆ, ತಾಯಿ, ಪತ್ನಿ ಮತ್ತು ಇಬ್ಬರು ಪುತ್ರರಿದ್ದಾರೆ. ಇವರೂ ಸೇರಿ ಸಂಬಂಧಿಕರು ಮತ್ತು ಈತನ ಜತೆ ನೇರ ಸಂಪರ್ಕಕ್ಕೆ ಬಂದವರು ಸೇರಿ 43 ಜನ ಮುಂಜಾಗ್ರತಾ ಕ್ರಮವಾಗಿ ಇಎಸ್ಐಸಿ ಐಸೋಲೇಷನ್ ವಾರ್ಡ್​ನಲ್ಲಿ ನಿಗಾದಲ್ಲಿದ್ದಾರೆ. ಇವರಲ್ಲಿ ಮೃತನ ತಾಯಿಗೂ ಕರೊನಾ ಸೋಂಕು ದೃಢಪಟ್ಟಿದೆ.
    ಸೆಂಟ್ರಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಈತ ಆಳಂದದ ವಾರ್ಡ 7ರ ನಿವಾಸಿ. ಹೀಗಾಗಿ 7, 8 ಮತ್ತು 9 ವಾರ್ಡಗಳನ್ನು ಈಗಾಗಲೇ ಸೀಲ್ಡೌನ್ ಮಾಡಿ ಜನಸಂಚಾರ ನಿಷೇಧಿಸಲಾಗಿದೆ.
    ಕಾಮಾಲೆ ರೋಗದಿಂದ ಬಳಲುತ್ತಿದ್ದ ಈತನನ್ನು ಕೆಲದಿನ ಹಿಂದೆ ಮಹಾರಾಷ್ಟ್ರದ ಉಮರ್ಗಾ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು. ಆರೋಗ್ಯದಲ್ಲಿ ಬದಲಾವಣೆ ಕಾಣದಿದ್ದಾಗ ಕಲಬುರಗಿ ಖಾಸಗಿ ಆಸ್ಪತ್ರೆಗೆ ಮಾ.29ರಂದು ದಾಖಲಾಗಿ ಮೂರು ದಿನ ಚಿಕಿತ್ಸೆ ಪಡೆದ. ಆದರೂ ಆರೋಗ್ಯದಲ್ಲಿ ಏರುಪೇರಾದಾಗ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ. ಆರೋಗ್ಯ ಪರೀಕ್ಷಿಸಿದ ಅಲ್ಲಿಯ ವೈದ್ಯರು ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೇಳಿದ್ದರು. ಆದರೆ ಆತ ಕಲಬುರಗಿಗೆ ತೆರಳುವ ಬದಲು ನೇರವಾಗಿ ಆಳಂದಕ್ಕೆ ಬಂದು ಖಾಸಗಿ ವೈದ್ಯರ ಹತ್ತಿರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ.
    ಬಳಿಕ ಕಲಬುರಗಿಗೆ ತೆರಳುವ ಮುನ್ನ ರಾತ್ರಿ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು. ಇಲ್ಲಿ ಆತನ ರಕ್ತ ಮತ್ತು ಗಂಟಲು ದ್ರವ ಪರೀಕ್ಷಿಸಿದಾಗ ಕರೊನಾ ಸೋಂಕು ಖಚಿತವಾಗಿದೆ. ಆಸ್ಪತ್ರೆಗೆ ಸೇರಿದಾಗಿನಿಂದಲೂ ಈತನ ಸ್ಥಿತಿ ಗಂಭೀರವಾಗಿತ್ತು ಎಂದು ಮೂಲಗಳು ಹೇಳಿವೆ.
    ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಹೆಚ್ಚು ಸಾವು ಸಂಭವಿಸಿದ್ದು ಕಲಬುರಗಿಯಲ್ಲೇ. ಸಾವಿನ ಸರಣಿ ಮುಂದುವರಿದಿರುವುದು ಜನರಲ್ಲಿ ಭಯ ಹೆಚ್ಚಿಸಿದೆ.

    ಆಳಂದಕ್ಕೆ ಸಹಾಯಕ ಆಯುಕ್ತರ ಭೇಟಿ ಆಳಂದ

    ವ್ಯಕ್ತಿ ಮೃತಪಟ್ಟ ವಿಷಯ ಅರಿಯುತ್ತಲೇ ಸಹಾಯಕ ಆಯುಕ್ತ ರಾಮಚಂದ್ರ ಗಡದೆ ಸೋಮವಾರ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ಸೀಲ್ಡೌನ್ ಇನ್ನಷ್ಟು ಬಿಗಿಗೊಳಿಸುವಂತೆ ಆದೇಶಿಸಿದ್ದಾರೆ. ಈ ಪ್ರದೇಶದ ಜನರು ಹೊರಗೆ ಹೋಗುವಂತಿಲ್ಲ. ಹೊರಗಿನವರು ಒಳಗಡೆ ಪ್ರವೇಶಿಸುವಂತಿಲ್ಲ. ರಸ್ತೆಗಳಲ್ಲಿ ವಿನಾಕಾರಣ ತಿರುಗಾಡಬಾರದು. ಸೋಂಕು ಹರಡದಂತೆ ಇನ್ನಷ್ಟು ವಾರ್ಡಗಳನ್ನು ಸೀಲ್ಡೌನ್ ಮಾಡಿ ಕಟ್ಟಿನ ಕ್ರಮ ಕೈಗೊಳ್ಳಿ. ಬಸ್ ನಿಲ್ದಾಣ ಎದುರು ಮತ್ತು ತಹಸಿಲ್ ರಸ್ತೆಯಿಂದ ಮಾಕರ್ೆಟ್ಗೆ ಬರುವ ಹಾದಿಗೆ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಬೇಕು ಎಂದು ಸೂಚಿಸಿದರು. ತಹಸೀಲ್ದಾರ್ ದಯಾನಂದ ಪಾಟೀಲ್, ಗ್ರೇಡ್-2 ತಹಸೀಲ್ದಾರ್ ಬಿ.ಜಿ.ಕುದುರಿ, ಸಿಪಿಐ ಶಿವಾನಂದ ಗಾಣಗೇರ, ಟಿಎಚ್ಒ ಡಾ.ಅಭಯಕುಮಾರ, ಪುರಸಭೆ ಮುಖ್ಯಾಧಿಕಾರಿ ಬಾಬುರಾವ ವಿಭೂತೆ, ಸುಭಾಷ ಮೇತ್ರೆ ಇತರರಿದ್ದರು.

    ಮುಂದುವರಿದ ಸಾವಿನ ಸರಣಿ

    • ಕರೊನಾ ಸೋಂಕಿಗೆ ದೇಶದಲ್ಲೇ ಮೊದಲ ಬಲಿಯಾಗಿದ್ದು ಮಾಚರ್್ 10ರಂದು ಕಲಬುರಗಿಯಲ್ಲಿ. ಸೌದಿ ಪ್ರವಾಸ ಮುಗಿಸಿ ನಗರಕ್ಕೆ ಆಗಮಿಸಿದ್ದ 76 ವರ್ಷದ ವೃದ್ಧ ಅಸುನೀಗಿದ್ದ.
    • ಏ.8ರಂದು 65 ವರ್ಷದ ಹಣ್ಣಿನ ವ್ಯಾಪಾರಿ ಮೃತ.
      *ಏ.13ರಂದು ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದವನ ಜತೆ ನೇರ ಸಂಪರ್ಕ ಹೊಂದಿದ್ದ 55 ವರ್ಷದ ಬಟ್ಟೆ ವ್ಯಾಪಾರಿ(ಪಿ205) ಸಾವು.
    • ಏ.20ಕ್ಕೆ 80 ವರ್ಷದ ವೃದ್ಧ (ಪಿ414) ಸಾವು. ನಾಲ್ಕು ವರ್ಷಗಳಿಂದ ಪಾಕರ್ಿನ್ಸನ್ ರೋಗದಿಂದ ಬಳಲುತ್ತಿದ್ದ. ಮೂರು ವರ್ಷಗಳಿಂದ ಬೆಡ್ ರೆಸ್ಟ್ನಲ್ಲಿದ್ದ. ಆದರೆ ಸೋಂಕಿತ ವ್ಯಕ್ತಿ ಜತೆ ಸಂಪರ್ಕ ಹೊಂದಿರಲಿಲ್ಲ.
    • ಏ.27ಕ್ಕೆ ಆಳಂದದ ಶರಣ ನಗರ ನಿವಾಸಿ 57 ವರ್ಷದ ವ್ಯಕ್ತಿ(ಪಿ422) ಸಾವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts