More

    ಕರೊನಾಂತಕದ ಮಧ್ಯೆ ಎಸ್ಸೆಸ್ಸೆಲ್ಸಿ ಪರೀಕ್ಷೆ

    ಜಯತೀರ್ಥ ಪಾಟೀಲ ಕಲಬುರಗಿ
    ಕೋವಿಡ್-19 ಆತಂಕದ ಮಧ್ಯೆ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಜೂನ್ 25ರಂದು ಪರೀಕ್ಷೆ ಆರಂಭವಾಗಲಿದ್ದು, ಜುಲೈ 3ರಂದು ಪೂರ್ಣಗೊಳ್ಳಲಿದೆ. ತೊಗರಿ ಕಣಜ ಕಲಬುರಗಿಯಲ್ಲಿ ಕರೊನಾ ಆರ್ಭಟ ದಿನೇದಿನೆ ಹೆಚ್ಚಾಗುತ್ತಿದ್ದು, ಆತಂಕದಲ್ಲಿರುವ ಜನರಿಗೆ ತಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.
    ಕರೊನಾ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಮಕ್ಕಳು ತಾವು ಅಭ್ಯಸಿಸಿರುವ ಶಾಲೆಗಳಿಗೆ ಮರಳುವ ಮತ್ತು ಈಗಾಗಲೇ ಪ್ರವೇಶ ಪತ್ರದಲ್ಲಿ ನಮೂದಾದ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದು ಎಂಬ ಕಾರಣಕ್ಕೆ ತಾವು ಮರಳಿ ಹೋಗಿರುವ ಸ್ವಗ್ರಾಮ/ಪ್ರದೇಶದ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
    ವಸತಿ ಶಾಲೆ, ಹಾಸ್ಟೆಲ್ಗಳನ್ನು ಜಿಲ್ಲೆಗಳಲ್ಲಿ ಕ್ವಾರಂಟೈನ್ ಕೇಂದ್ರಗಳಾಗಿ ಬಳಸಲಾಗುತ್ತಿದ್ದು, ಈ ವಸತಿ ಶಾಲೆ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಿಗೂ ತಮ್ಮ ಮೂಲ ಸ್ಥಾನದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿನ ವಲಸೆ ಕಾರ್ಮಿಕರ ಮಕ್ಕಳು ಮತ್ತು ವಸತಿ ಶಾಲೆ, ಹಾಸ್ಟೆಲ್ ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪಕರ್ಿಸಿ ಅವರು ಮೂಲ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಬದಲಾಗಿ ಮೂಲ ಜಿಲ್ಲೆ/ತಾಲೂಕಿನ ಯಾವ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಇಚ್ಛಿಸಿದ್ದಾರೆ ಎಂಬ ಮಾಹಿತಿ ಪಡೆದು ಶಾಲಾ ಲಾಗ್-ಇನ್ನಲ್ಲಿ ನಮೂದಿಸಲು ಇಲಾಖೆ ಸೂಚಿಸಿದೆ.

    ಥರ್ಮಲ್ ಸಾ್ಕೃನಿಂಗ್, ಮಾಸ್ಕ್ ಕಡ್ಡಾಯ: ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ವಿದ್ಯಾಥರ್ಿಯನ್ನು ಥರ್ಮಲ್ ಸಾ್ಕೃನಿಂಗ್ಗೆ ಒಳಪಡಿಸುವುದು, ಕೈಗಳನ್ನು ಸ್ಯಾನಿಟೈಸರ್ನಿಂದ ಶುದ್ಧೀಕರಿಸುವುದು ಮತ್ತು ಮಾಸ್ಕ್ ಹಾಕಿಕೊಳ್ಳುವುದನ್ನು ಕಡ್ಡಾಯಗೊಳಿಸಿದ್ದರಿಂದ ವಿದ್ಯಾಥರ್ಿಗಳು ಪರೀಕ್ಷಾ ದಿನ ಬೆಳಗ್ಗೆ 9.30ಕ್ಕೆ ಕೇಂದ್ರಕ್ಕೆ ಹಾಜರಾಗುವುದು ಕಡ್ಡಾಯ. ಬೆಳಗ್ಗೆ 10.30ಕ್ಕೆ ಪರೀಕ್ಷೆ ಪ್ರಾರಂಭವಾಗಲಿದೆ.

    ಎಲ್ಲಿ ಎಷ್ಟು ವಿದ್ಯಾಥರ್ಿಗಳು?: ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ 98600 ಬಾಲಕರು, 80991 ಬಾಲಕಿಯರು ಸೇರಿ 179591 ವಿದ್ಯಾಥರ್ಿಗಳು ಪರೀಕ್ಷೆ ಬರೆಯಲಿದ್ದಾರೆ. ಯಾದಗಿರಿ 17208, ಕಲಬುರಗಿ 43082, ಕೊಪ್ಪಳ 21745, ರಾಯಚೂರು 29656, ಬೀದರ್ 26880, ಬಳ್ಳಾರಿ 41020 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವೇಳಾಪಟ್ಟಿ ರೆಡಿಯಾಗಿದೆ. ಕೋವಿಡ್-19 ವೇಳೆ ಪರೀಕ್ಷೆ ನಡೆಯಲಿರುವುದರಿಂದ ಮುಂಜಾಗ್ರತೆ ಕುರಿತು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಕರ್ಾರದ ನಿಯಮಾವಳಿ ಬರುವುದು ಬಾಕಿ ಇದೆ. ಪೂರಕವಾಗಿ ಜಿಲ್ಲಾಧಿಕಾರಿಗಳು ವಿಭಾಗದ ಡಿಡಿಪಿಐಗಳ ಜತೆ ಚಚರ್ಿಸಿ ಎಲ್ಲವೂ ಪಾರದರ್ಶಕವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
    | ನಳೀನ್ ಅತುಲ್ ಆಯುಕ್ತ,
    ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts