More

    ಕರೂರು, ಭಾರಂಗಿಯಲ್ಲಿ ಚರ್ಮಗಂಟು ರೋಗ ಉಲ್ಬಣ; ಮೂರು ದಿನದಲ್ಲಿ ಎರಡು ದನ ಸಾವು; ಶರಾವತಿ ಕಣಿವೆಯಲ್ಲಿ ವೈದ್ಯರು, ಔಷಧ ಕೊರತೆ

    ಬ್ಯಾಕೋಡು: ಸಾಗರ ತಾಲೂಕಿನ ಕರೂರು, ಭಾರಂಗಿ ಹೋಬಳಿಯಲ್ಲಿ ಜಾನುವಾರು ಚರ್ಮಗಂಟು ರೋಗ ವ್ಯಾಪಕವಾಗಿದ್ದು ವೈದ್ಯರು ಮತ್ತು ಔಷಧಕೊರತೆ ರೈತರ ನೋವಿನ ಮೇಲೆ ಬರೆ ಹಾಕಿದಂತೆ ಆಗಿದೆ.
    ಕರೂರು, ಬಾರಂಗಿ ಅವಳಿ ಹೋಬಳಿಯ ಏಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜಾನುವಾರುಗಳು ಸರ್ಕಾರಿ ಲೆಕ್ಕದ ಪ್ರಕಾರವೇ ಇದ್ದು ಅವಿನಹಳ್ಳಿ ಹೋಬಳಿ ಸೇರಿದರೆ ಒಟ್ಟು ಈ ಸಂಖ್ಯೆ 28 ಸಾವಿರಕ್ಕೆ ಹೆಚ್ಚುತ್ತದೆ. ಈ ವ್ಯಾಪ್ತಿಯಲ್ಲಿ ಒಟ್ಟು 10 ಪಶು ಆಸ್ಪತ್ರೆ ಇದ್ದರೂ ಕೇವಲ ಇಬ್ಬರು ವೈದ್ಯರು ಸೇವೆಯಲ್ಲಿ ಇದ್ದಾರೆ. ಅತಿ ದುರ್ಗಮವಾದ ಇಲ್ಲಿನ 200ಕ್ಕೂ ಹೆಚ್ಚು ಹಳ್ಳಿಗಳನ್ನು ಕೇವಲ ಇಬ್ಬರು ವೈದ್ಯರಿಗೆ ಸಮರ್ಪಕ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.
    ಈ ನಡುವೆ ದ್ವೀಪದಲ್ಲಿ ಜಾನುವಾರುಗಳ ಚರ್ಮಗಂಟು ರೋಗ ತೀವ್ರಗೊಂಡಿದೆ. ತುಮರಿ ಗ್ರಾಮ ಪಂಚಾಯಿತಿ ನಾಗರಾಜ್ ಮಡಿವಾಳ ಅವರ ಮನೆಯಲ್ಲಿ ಮೂರು ಹಸುವಿಗೆ ರೋಗ ತಗುಲಿದ್ದು ಮೂರು ದಿನದಲ್ಲಿ ಎರಡು ಜನವಾರು ರೋಗಕ್ಕೆ ಬಲಿಯಾಗಿವೆ.
    ಎರಡು ದನಗಳು ರೋಗದಿಂದ ಸತ್ತು ಹೋದವು. ವೈದ್ಯರು ಲಭ್ಯ ಇಲ್ಲದ ಕಾರಣ ಮರಣೋತ್ತರ ಪರೀಕ್ಷೆ ಮಾಡಲು ಹೋಗಲಿಲ್ಲ, ಜಾನುವಾರು ಉಳಿಸಿಕೊಳ್ಳಲು ಇಂಜೆಕ್ಷನ್, ಮಾತ್ರೆ, ನಾಟಿ ಔಷದ ಮಾಡಿದರೂ ಪ್ರಯೋಜನ ಆಗಲಿಲ್ಲ ಎನ್ನುತ್ತಾರೆ ನಾಗರಾಜ್
    ತುಮರಿ ಪಂಚಾಯಿತಿ ವಳಗೆರೆ, ಚದರವಳ್ಳಿ, ಕಳೂರು, ತುಮರಿ, ಅರಬಳ್ಳಿ ಗ್ರಾಮದಲ್ಲಿ ಹೆಚ್ಚಿನ ಜಾನುವಾರುಗಳಿಗೆ ರೋಗ ಕಾಣಿಸಿ ಕೊಂಡಿದ್ದು ಕುದುರೂರು ಪಂಚಾಯಿತಿಯ ಬೊಬ್ಬಿಗೆ, ಕುದುರೂರು, ಕೊಡಸರ, ಹೊಸೂರು, ಸುಳ್ಳಳ್ಳಿ ಭಾಗದಲ್ಲಿ ಕೂಡ ಹೆಚ್ಚಳಗೊಂಡಿದೆ. ಈ ನಡುವೆ ವೈದ್ಯರ ಕೊರತೆ ಜತೆಗೆ ರೋಗಕ್ಕೆ ನಿರ್ದಿಷ್ಟ ಚುಚ್ಚುಮದ್ದು ಇಲ್ಲದೆ ಇರುವುದು ರೈತರ ಆತಂಕ ಹೆಚ್ಚಿಸಿದೆ. ಇದೇ ರೀತಿ ರೋಗ ಉಲ್ಬಣವಾದರೆ ಕೊಟ್ಟಿಗೆ ಖಾಲಿ ಆಗುವ ಆತಂಕ ರೈತರನ್ನ ಕಾಡಿದೆ.
    ನಮ್ಮ ಮುಂದೆ ಜಾನುವಾರು ನರಳುವುದು ನೋಡಲಿಕ್ಕೆ ಆಗುತ್ತಿಲ್ಲ, ಖಾಸಗಿ ಮೆಡಿಕಲ್ನಿಂದ ಸಾಮಾನ್ಯ ರೋಗ ನಿರೋಧಕ ಚುಚ್ಚುಮದ್ದು ತಂದು ನೀಡುವುದು ಅನಿವಾರ್ಯ ಆಗಿದೆ ಎನ್ನುತ್ತಾರೆ ಬ್ಯಾಕೋಡಿನ ಒಕ್ಕೋಡಿ ಊರಿನ ರೈತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts