More

    ಕರಪತ್ರ, ಬ್ಯಾನರ್ ಮುದ್ರಣ ಮಾಹಿತಿ ಕೊಡಿ

    ಸೊರಬ: ಚುನಾವಣೆಗೆ ಸಂಬಂ„ಸಿದಂತೆ ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದ್ದು, ಕರಪತ್ರ, ಬ್ಯಾನರ್, ಪೆÇೀಸ್ಟರ್‍ಗಳನ್ನು ಮುದ್ರಿಸಿದ ಸಂದರ್ಭದಲ್ಲಿ ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಮಾಹಿತಿ ಒದಗಿಸಬೇಕು ಎಂದು ಚುನಾವಣಾ„ಕಾರಿ ಪ್ರವೀಣ್ ಜೈನ್ ತಿಳಿಸಿದರು.
    ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕರೆದಿದ್ದ ರಾಜಕೀಯ ಪಕ್ಷಗಳ ಸಭೆಯಲ್ಲಿ ಮಾಹಿತಿ ನೀಡಿ, ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮದುವೆ ಸೇರಿದಂತೆ ಸಭೆ ಸಮಾರಂಭ ನಡೆಸುವವರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ನೀತಿ ಸಂಹಿತೆ ಉಲ್ಲಂಘಟನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
    ಈಗಾಗಲೇ ನೆರೆಯ ಜಿಲ್ಲೆಗಳ ಗಡಿ ಭಾಗದ ತಾಲೂಕಿನ ಹರೀಶಿ, ಅಗಸನಹಳ್ಳಿ, ಬಾರಂಗಿ, ಶಕುವಳ್ಳಿಯಲ್ಲಿ ಚೆಕ್‍ಪೆÇೀಸ್ಟ್‍ಗಳನ್ನು ತೆರೆಯಲಾಗಿದೆ. ಚುನಾವಣೆಗೆ ಸಂಬಂ„ಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನುಕೂಲ ಕಲ್ಪಿಸುವ ಉದ್ದೇಶದಿಂದ ಏಕಗವಾಕ್ಷಿ ಕೇಂದ್ರವನ್ನು ತೆರೆಯಲಾಗಿದ್ದು ಎಲ್ಲಾ ಮಾಹಿತಿಗಳು ಒಂದೆ ಸೂರಿನಡಿ ದೊರೆಯಲಿದೆ. ಅಕ್ರಮಗಳು ಕಂಡುಬಂದರೆ ಸಾರ್ವಜನಿಕರು ಕಂಟ್ರೋಲ್ ರೂಮ್ ಸಂಖ್ಯೆ 08184-272241ಗೆ ಕರೆ ಮಾಡಬಹುದು ಎಂದರು.
    ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿ ಸೇರಿದಂತೆ ಒಟ್ಟು 239 ಮತಗಟ್ಟೆಗಳಿದ್ದು ಅವುಗಳಲ್ಲಿ 19 ಸೂಕ್ಷ್ಮ ಮತ್ತು 6 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 1,93,584 ಮತದಾರರಿದ್ದು, 97,670 ಪುರುಷ, 95,910 ಮಹಿಳಾ ಮತದಾರರಿದ್ದಾರೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ 21 ಸೆಕ್ಟರ್ ಆಫೀಸರ್‍ಗಳು, -É್ಲಯಿಂಗ್ ಸ್ಮಾರ್ಟ್ ಸೆಂಟರ್ 7 ತಂಡಗಳನ್ನು ನೇಮಕ ಮಾಡಲಾಗಿದೆ. 7 ವಿಡಿಯೋ ಸಕ್ರ್ಯೂಲೇಷನ್ ಟೀಂಗಳಿದ್ದು, ಎಸ್‍ಎಸ್‍ಟಿ 4, ಬಿಎಸ್‍ಟಿ 7, ಅಕೌಂಟೆಂಟ್ ಒಬ್ಬರರನ್ನು ನೇಮಿಸಲಾಗಿದೆ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಸ್ಟರಿಂಗ್ ಮತ್ತು ಡಿಮಾಸ್ಟರಿಂಗ್ ನಡೆಯಲಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
    ರಾಜಕೀಯ ಪಕ್ಷಗಳ ಮುಖಂಡರಾದ ಶಿವಕುಮಾರ ಕಡಸೂರು, ಪರಶುರಾಮ ಸಣ್ಣಬೈಲ್, ರಶೀದ್ ಆಹ್ಮದ್, ಸುಜಾತಾ ಜೋತಾಡಿ, ಯು.-Àಯಾಜ್ ಆಹ್ಮದ್, ಹುಚ್ಚಪ್ಪ ಚಿಮಣೂರು, ಗಣಪತಿ, ಲಕ್ಷ್ಮಣಪ್ಪ, ತಾಪಂ ಇಒ ನಾಗರಾಜ ಅನ್ವೇಕರ್, ಪಿಎಸ್‍ಐ ನಾಗರಾಜ್, ಶಿರಸ್ತೇದಾರ್ ನಾಗರಾಜ್, ಪುರಸಭೆ ಮುಖ್ಯಾ„ಕಾರಿ ಗಿರೀಶ್, ಆನವಟ್ಟಿ ಪಪಂ ಮುಖ್ಯಾ„ಕಾರಿ ಅಕ್ಷತಾ, ಕಂದಾಯ ಇಲಾಖೆಯ ಬಿ.ಜೆ.ವಿನೋದ್ ಇತರರಿದ್ದರು.
    ಹಣ ವಶಪಡಿಸಿಕೊಂಡರೆ ಏನು ಮಾಡೋದು?: ಕ್ಷೇತ್ರದಲ್ಲಿ ರೈತರು ಹಾಗೂ ಸಾರ್ವಜನಿಕರು ಮನೆ ಹಬ್ಬ, ಮದುವೆ ಇತರ ಶುಭಸಮಾರಂಭ ಅಥವಾ ಆಸ್ಪತ್ರೆ ಮತ್ತಿತರಡೆ ತೆರಳುವವರು ಚುನಾವಣಾ ಆಯೋಗ ತಿಳಿಸಿದ್ದಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಅ„ಕಾರಿಗಳು ವಶಕ್ಕೆ ಪಡೆದರೆ ಜನತೆಗೆ ಸಾಕಷ್ಟು ಸಮಸ್ಯೆಯಾಗಲಿದೆ. ಕೈಗಡ ಸಾಲ ಪಡೆದವರು ಹಾಗೂ ರೈತರು ಬೆಳೆಗಳನ್ನು ಮಾರಾಟ ಮಾಡಿ ಬಂದ ಹಣಕ್ಕೆ ದಾಖಲೆಗಳನ್ನು ಪ್ರದರ್ಶಿಸುವುದು ಕಷ್ಟವಾಗುತ್ತದೆ ಎಂದು ಸಾರ್ವಜನಿಕರು ಸಭೆಯ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಚುನಾವಣಾ„ಕಾರಿಗಳು ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಮಾಹಿತಿ ನೀಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts