More

    ಕಮಿಷನರ್ ಮೆಮೊಗೆ ಡಿಸಿಪಿ ಉತ್ತರ

    ಹುಬ್ಬಳ್ಳಿ: ಪೊಲೀಸ್ ಕಮಿಷನರ್ ಆರ್. ದಿಲೀಪ ಮತ್ತು ಡಿಸಿಪಿ (ಕಾನೂನು ಸುವ್ಯವಸ್ಥೆ) ಪಿ. ಕೃಷ್ಣಕಾಂತ ನಡುವಿನ ಪತ್ರ ಸಮರ ಮುಂದುವರಿದಿದ್ದು, ಕಮಿಷನರ್ ನೀಡಿದ್ದ ಮೆಮೊಗೆ ಡಿಸಿಪಿ ಕೃಷ್ಣಕಾಂತ 2 ಪುಟಗಳ ಉತ್ತರ ನೀಡಿದ್ದು, ಆ ಪತ್ರವೂ ಬಹಿರಂಗವಾಗಿದೆ.

    ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ನಂತರ ಯೂ ಟರ್ನ್ ತೆಗೆದುಕೊಂಡಿರುವುದಾಗಿ ಮೆಮೊದಲ್ಲಿ ನಮೂದಾಗಿದೆ. ಈ ಆರೋಪ ನಿರಾಧಾರವಾದದ್ದು. ಸೂಕ್ಷ್ಮ ವಿಚಾರಗಳ ಕುರಿತು ರ್ಚಚಿಸಲು ತಮಗೆ ಅವಕಾಶ ಕೋರಿ ಪತ್ರ ಬರೆದ ನಂತರವೂ ತಾವು ಭೇಟಿಗೆ ಅವಕಾಶ ನೀಡಲಿಲ್ಲ. ಭೇಟಿಗೇ ಅವಕಾಶ ನೀಡದಿದ್ದಾಗ ನನ್ನ ಸಹೋದ್ಯೋಗಿ ಅಧಿಕಾರಿ ವಿರುದ್ಧ ನಾನು ಹೇಗೆ ಆರೋಪ ಮಾಡಲಿ? ಆಯುಕ್ತರ ಜತೆ ರ್ಚಚಿಸದೇ ಮುಖ್ಯ ವಿಚಾರಗಳ ಕುರಿತು ನಿರ್ಧರಿಸುವುದಾದರೂ ಹೇಗೆ ಎಂದು ಡಿಸಿಪಿ ಪ್ರಶ್ನಿಸಿದ್ದಾರೆ.

    ಹಳೇ ಹುಬ್ಬಳ್ಳಿಯಲ್ಲಿ ನಡೆದ ಶೂಟೌಟ್ ಪ್ರಕರಣದ ಕುರಿತು ವೈರ್​ಲೆಸ್​ನಲ್ಲಿ ರ್ಚಚಿಸಲು ಸಾಧ್ಯವಾಗಲಿಲ್ಲ. ಮುಖ್ಯ ಪ್ರಕರಣದವೊಂದರ ತನಿಖೆ ಹಿನ್ನೆಲೆಯಲ್ಲಿ ನಾನು ಬೆಂಗಳೂರಿಗೆ ಹೋಗಬೇಕಾಗಿತ್ತು. ಆ ಕುರಿತು ಅನುಮತಿ ಪತ್ರವನ್ನು ನಿಮ್ಮ ಸಿಬ್ಬಂದಿ ಕೊಟ್ಟರು. ಆಗಲೂ ತಾವು ಭೇಟಿಗೆ ಅವಕಾಶ ನೀಡಲಿಲ್ಲ. ಆ ಕಾರಣಕ್ಕೆ ಅ.3ರಂದು ಭೇಟಿ ಮಾಡಿ ರ್ಚಚಿಸಲು ಅವಕಾಶ ಕೋರಿ ಪತ್ರ ಬರೆದಿದ್ದೆ. ಭೇಟಿ ಮಾಡದೇ ದೂರವಾಣಿ ಅಥವಾ ವೈರ್​ಲೆಸ್ ಮೂಲಕ ಆರೋಪ ಮಾಡಲು ಹೇಗೆ ಸಾಧ್ಯ. ಇಂತಹ ಆರೋಪಗಳು ಕಮಿಷನರೇಟ್ ಮೇಲೆ ತಪ್ಪು ಅಭಿಪ್ರಾಯ ಮೂಡುತ್ತದೆ ಎಂದು ಪತ್ರದಲ್ಲಿ ವಿವರವಾಗಿ ಬರೆದಿದ್ದಾರೆ. ಇಂತಹ ಆಧಾರ ರಹಿತ ಆರೋಪಗಳನ್ನು ಅಧಿಕಾರಿಗಳು ನಂಬಬಾರದು ಎಂದೂ ನಮೂದಿಸಿದ್ದಾರೆ ಎನ್ನಲಾಗಿದೆ.

    ಅಂತ್ಯ ಯಾವಾಗ :

    10 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ಹು-ಧಾ ಅವಳಿ ನಗರ ಜನತೆಯ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಹು-ಧಾ ಕಮಿಷನರೇಟ್​ನ ಮುಖ್ಯಸ್ಥ, ಸಹ ಮುಖ್ಯಸ್ಥ ಅಧಿಕಾರಿಗಳ ವೈಮನಸ್ಸು ಮುಂದುವರಿದಿದ್ದು, ರ್ತಾಕ ಅಂತ್ಯ ಯಾವಾಗ ಎಂಬ ಪ್ರಶ್ನೆ ಮೂಡಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts