More

    ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಣೆ

    ಬಂಕಾಪುರ: ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಹೊರ ಗುತ್ತಿಗೆ ನೌಕರರು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮಂಗಳವಾರ ಕಾರ್ಯ ನಿರ್ವಹಿಸಿದರು.

    ಡಾ. ಎಸ್.ವಿ. ವಸ್ತ್ರದ ಮಾತನಾಡಿ, ಆಯುಷ್ ವೈದ್ಯಾಧಿಕಾರಿಗಳು, ಶುಶ್ರೂಷಕಿಯರು, ಲ್ಯಾಬ್ ಟೆಕ್ನಿಷಿಯನ್, ಆರೋಗ್ಯಮಿತ್ರ, ಡಿ ದರ್ಜೆ ನೌಕರರು, ಐಸಿಟಿಸಿ ಸಮಾಲೋಚಕರು ಸೇರಿ ಇತರ ಹೊರ ಗುತ್ತಿಗೆ ಸಿಬ್ಬಂದಿಗೆ ಸರ್ಕಾರದಿಂದ ನೇರ ವೇತನ ಸಿಗುವಂತಾಗಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಜ್ಯೋತಿ ಸಂಜೀವಿನಿ ಯೋಜನೆಯನ್ನು ಹೊರ ಗುತ್ತಿಗೆ ನೌಕರರಿಗೂ ವಿಸ್ತರಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್-19 ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆ ನೌಕರರಿಗೆ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದರು.

    ಮೇ 12ರಿಂದ 21ರ ವರೆಗೆ ಕಪ್ಪುಪಟ್ಟಿ ಧರಿಸಿ ಸೇವೆ ಸಲ್ಲಿಸಲು ತೀರ್ವನಿಸಲಾಗಿದೆ. ಅಷ್ಟರೊಳಗೆ ಸರ್ಕಾರ ಸ್ಪಂದಿಸದಿದ್ದರೆ ಎಲ್ಲ ಸಿಬ್ಬಂದಿ ಸಾಮೂಹಿಕ ರಾಜಿನಾಮೆ ಸಲ್ಲಿಸಿ ಕೋವಿಡ್-19 ಮುಗಿಯುವವರೆಗೂ ಸಂಬಳವಿಲ್ಲದೆ ಸೇವೆ ಸಲ್ಲಿಸಲಾಗುವುದು ಎಂದರು.

    ಡಾ. ಅನಿಲ ಹೊಸಳ್ಳಿ, ಅಬ್ದುಲ್ ಹಲಗೇರಿ, ವಿಜಯ ರಾಣೋಜಿ, ವಿಜಯ ಬ್ಯಾಡಗಿ, ಶುಶ್ರೂಕಿಯರಾದ ಗಿರಿಜಾ ಹಳವಳ್ಳಿ, ಶಶಿಕಲಾ ಚನ್ನದಾಸರ, ಶೈಲಾ, ವನಿತಾ, ನಾಗಶ್ರೀ, ಮಾಲತೇಶ ಗುಡ್ಡಪ್ಪನವರ, ಗಂಗಾಧರ ಬನ್ನಿಕೊಪ್ಪ, ರವಿ ಹರಿಜನ, ವಿನಾಯಕ ಅವತಾಡೆ, ಕಸ್ತೂರೆವ್ವ ಮಾಳಗಿಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts