More

    ಕಪ್ಪತಗುಡ್ಡದ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸೂಕ್ತ ಕ್ರಮ

    ಮುಂಡರಗಿ: ಪರಿಸರಕ್ಕೆ ಪ್ಲಾಸ್ಟಿಕ್ ಮಾರಕ. ಪ್ರತಿಯೊಬ್ಬರೂ ಉತ್ತಮ ಪರಿಸರ ನಿರ್ವಣಕ್ಕೆ ಕೈಜೋಡಿಸಬೇಕು. ಮುಂಬರುವ ದಿನಗಳಲ್ಲಿ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರ್​ಎಫ್​ಒ ಪ್ರದೀಪ ಪವಾರ ಹೇಳಿದರು.

    ತಾಲೂಕಿನ ಕಪ್ಪತಗುಡ್ಡ ಅರಣ್ಯ ಪ್ರದೇಶದ ಶ್ರೀ ಮಲ್ಲೇಶ್ವರ ದೇವಸ್ಥಾನ ಬಳಿ ವಿಶ್ವ ಪರಿಸರ, ಕಪ್ಪತಗುಡ್ಡ ಸಂರಕ್ಷಣಾ ವೇದಿಕೆ, ಅರಣ್ಯ ಇಲಾಖೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಪ್ಪತಗುಡ್ಡದಲ್ಲಿ ಪ್ಲಾಸ್ಟಿಕ್ ನಿಷೇಧ ಅಭಿಯಾನದಲ್ಲಿ ಅವರು ಮಾತನಾಡಿದರು.

    ಕಪ್ಪತಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ಪ್ಲಾಸ್ಟಿಕ್ ತರುವುದನ್ನು ನಿಲ್ಲಿಸಬೇಕು. ತಂದರೆ ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಳ್ಳಲಿದ್ದಾರೆ. ಜನರು ಅರಣ್ಯದೊಳಗೆ ಪ್ಲಾಸ್ಟಿಕ್ ತರದಂತೆ ಮುಂಜಾಗ್ರತೆ ಕ್ರಮಕ್ಕೆ ಮುಂದಾಗುತ್ತೇವೆ. ದೇವಸ್ಥಾನ ಭಾಗದ ಎಲ್ಲ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಮಾರಾಟ ಮಾಡಬಾರದು ಎಂದರು.

    ಶ್ರೀ ಮಲ್ಲೇಶ್ವರ ದೇವಸ್ಥಾನ ಧರ್ಮಾಧಿಕಾರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಗುರುಶಾಂತಯ್ಯ ಗಂಗಿಭಾವಿಮಠ, ಕಪ್ಪತಗುಡ್ಡ ಸಂರಕ್ಷಣಾ ವೇದಿಕೆ ಅಧ್ಯಕ್ಷ ಭರಮಪ್ಪ ಕಿಲಾರಿ, ಶ್ರೀನಿವಾಸ ಕೊರ್ಲಗಟ್ಟಿ, ಹಾಲಪ್ಪ ಅರಹುಣಸಿ, ಮನೋಜ್ ರಾಠೋಡ, ಸಲ್ಮಾನ್ ಚಿಕ್ಕೊಪ್ಪ, ರತ್ನಾ ಪಾಟೀಲ, ರಾಮನಗೌಡ ಹಳೇಮನಿ, ಪ್ರಧಾನಿ ಕರಿ, ನೀಲಕಂಠ ಪರಂಗಿ, ಮಲ್ಲೇಶ ಚಿಗರಿ, ಮಂಜುನಾಥ ವಾಲ್ಮೀಕಿ, ಮಲ್ಲಪ್ಪ ಶಿವಶಿಂಪರ, ಮುತ್ತು ತಳವಾರ, ಹಾಲಯ್ಯ ಮಠದ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts