More

    ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದ ಪುರಂದರ ದಾಸರು

    ಮುಳಬಾಗಿಲು: ಆಧ್ಯಾತ್ಮಿಕ ಕ್ಷೇತ್ರದಲ್ಲಿ ಶ್ರೀ ಹರಿದಾಸ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದ್ದು, ಅದನ್ನು ಶ್ರೀ ಪುರಂದರ ಆರಾಧನೋತ್ಸವ ಸಮಿತಿ ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಶ್ರೀಪಾದರಾಜ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದರು ಹೇಳಿದರು.

    ನಗರದ ವೀರಭದ್ರ ನಗರದ ಹರಿದಾಸ ಪೀಠದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 49ನೇ ವರ್ಷದ ಪುರಂದರದಾಸರ ಆರಾಧನೋತ್ಸವದಲ್ಲಿ ಮಾತನಾಡಿ, ಪುರಂದರದಾಸರು ಆಧ್ಯಾತ್ಮಿಕವಾಗಿ 5 ಲಕ್ಷಕ್ಕೂ ಹೆಚ್ಚು ಕೀರ್ತನೆಗಳನ್ನು ರಚನೆ ಮಾಡಿ ಅವರೇ ಹಾಡುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

    ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಆಲಂಗೂರು ಶಿವಣ್ಣ ಮಾತನಾಡಿ, ಹರಿದಾಸ ಪೀಠದಲ್ಲಿ 49 ವರ್ಷಗಳಿಂದ ಶ್ರೀಪುರಂದರದಾಸರ ಆರಾಧನೋತ್ಸವ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

    ವಿದ್ವಾನ್‌ಗಳಾದ ಬಿ.ಕೆ.ಶೇಷಾದ್ರಿ, ಸೇತುಮಾಧವ, ಸತ್ಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮಧುಸೂದನ್ ತಂಡದವರಿಂದ ಹೋಮಾದಿ ದೇವತಾ ಕಾರ್ಯಕ್ರಮ ನೆರವೇರಿತು. 18 ಅಡಿ ಎತ್ತರದ ಶ್ರೀ ಪುರಂದರ ವಿಠಲ ವಿಗ್ರಹಕ್ಕೆ ಕ್ಷೀರಾಭಿಷೇಕ, ವಿಶೇಷ ಪೂಜೆಗಳೊಂದಿಗೆ ಆರಾಧನೋತ್ಸವ ಆರಂಭಗೊಂಡಿತು. ಶ್ರೀವಾರಿ ಸಮೃದ್ಧಿ ಭಜನಾ ಮಂಡಳಿ, ಶ್ರೀ ಗೋಪಿನಾಥ ಪ್ರಿಯಾ ಭಜನಾ ಮಂಡಳಿ, ಛಾಯಸಂಜ್ಞಾ ಭಜನಾ ಮಂಡಳಿ, ಶ್ರೀ ರಂಗವಿಠಲಪ್ರಿಯ ಭಜನಾ ಮಂಡಳಿ, ಶ್ರೀವಾಸವಿ ಭಜನಾ ಮಂಡಳಿ, ಶ್ರೀನಾದಪ್ರಿಯ ಭಜನಾ ಮಂಡಳಿ ಸದಸ್ಯರಿಂದ ಕೀರ್ತನೆ, ಭಜನೆ ಕಾರ್ಯಕ್ರಮ ನಡೆಯಿತು.

    ಪುರಂದರದಾಸರ ಕೀರ್ತನೆಗಳನ್ನು ವಿದ್ವಾನ್‌ಗಳಾದ ಟಿ.ಎಸ್.ವಸುಂಧರಾ, ಇಂದಿರಾಶರ್ಮ, ಎಚ್.ಎನ್.ಮೀರಾ, ಎಸ್.ಶಂಕರ್, ದೀಪ್ತಿನಾಗೇಂದ್ರಪ್ರಸಾದ್, ಉಷಾಕೇಸರಿ ಮತ್ತು ನಿಲಾಂಬರಿ ತಂಡ, ಅದಿತಿ ಪ್ರಹ್ಲಾದ್, ಮಾರುತಿಪ್ರಸಾದ್, ಬಿ.ಎಸ್.ಆನಂದ್, ವಾಗೇಶ್ ಭಟ್ ಹಾಡಿದರು.

    ಶ್ರೀನಿವಾಸ್ ಪ್ರಸನ್ನ ದಾಸಕೃತಿ ಗಾಯನ, ಉದಯರಾಜ್ ಕರ್ಪೂರ್ ಶಿಷ್ಯ ಮಂಡಳಿಯಿಂದ ತಾಳಸಮ್ಮಿಲನ, ವಂಶಿ ಅಕಾಡೆಮಿ ಮ್ಯೂಜಿಕಲ್ ಟ್ರಸ್ಟ್‌ನ ಬಿ.ಕೆ.ಅನಂತರಾಮ್ ಅವರಿಂದ ವೇಣುವಾದನ, ಶ್ರೀ ನರಹರಿಶಾಸಿ ಸೂತ್ರಮೇಳ ತಂಡದಿಂದ ಗೊಂಬೆಯಾಟ, ಶ್ರೀಕೃಷ್ಣ ತುಲಾಭಾರ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts