More

    ಕನ್ನಡ ರಾಜ್ಯೋತ್ಸವ ಸರಳವಾಗಿರಲಿ

    ಮುಂಡರಗಿ: ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪಿಯು ಕಾಲೇಜ್ ಆವರಣದಲ್ಲಿ ಸಾಂಕೇತಿಕ, ಸರಳವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಆಶಪ್ಪ ಪೂಜಾರಿ ತಿಳಿಸಿದರು.

    ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶುಕ್ರವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ಪ್ರಾಚಾರ್ಯ ಡಾ.ಬಿ.ಜಿ. ಜವಳಿ ಉಪನ್ಯಾಸ ನೀಡುವರು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದು ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.

    ಕೋಟೆಗುಡ್ಡದ ಮೇಲೆ ಮತ್ತು ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುವುದು. ಎಲ್ಲರೂ ಕನ್ನಡಾಭಿಮಾನ ಹೊಂದಬೇಕು. ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾಂಕೇತಿಕವಾದರೂ ಮನದಾಳದ ಮೂಲಕ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ ಎಂದರು.

    ಸಭೆಯಲ್ಲಿ ಬಿಇಒ ಗಂಗಾಧರ ಅಣ್ಣಿಗೇರಿ, ಡಾ.ಬಿ.ಜಿ. ಜವಳಿ, ಎಸ್.ಆರ್. ಚಿಗರಿ, ವಿಠ್ಠಲ ಗಣಾಚಾರಿ, ವಿ.ಎಸ್. ಗಟ್ಟಿ, ಎಸ್.ಬಿ.ಹಿರೇಮಠ, ಮಂಜುನಾಥ ಮುಧೋಳ, ಪವನ ಮೇಟಿ, ರಾಜಾಬಕ್ಷೀ ಬೆಟಗೇರಿ, ಸಂತೋಷ ಹಿರೇಮನಿ, ನಾಗರಾಜ ಹೊಂಬಳಗಟ್ಟಿ, ಭರತ್ ಮೇಟಿ, ಸುರೇಶ ಹಲವಾಗಲಿ, ಉಮೇಶ ಹಿರೇಮಠ, ಮಲ್ಲೇಶ ಹರಿಜನ, ಎಸ್.ಎಸ್. ಬಿಚ್ಚಾಲಿ, ಆರ್.ಎ. ಹೊಸಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts