More

    ಕನ್ನಡ ಭಾಷಾಭಿಮಾನವಿರಲಿ

    ಚಿಕ್ಕೋಡಿ: ಭಾರತದಲ್ಲಿ ಹಲವು ಧರ್ಮ ಹಾಗೂ ಸಂಸ್ಕೃತಿಗಳಿದ್ದರೂ ಕನ್ನಡ ನೆಲದ ಭಾಷಾ ಸಂಸ್ಕೃತಿ ಬಗ್ಗೆ ಕನ್ನಡಿಗರಿಗೆ ಅಭಿಮಾನವಿರಬೇಕೆಂದು ಸುಕ್ಷೇತ್ರ ಯಡೂರ ಶ್ರೀಶೈಲಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


    ಸುಕ್ಷೇತ್ರ ಯಡೂರ ಗ್ರಾಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಕಾರ, ಉಮರಾಣಿ ದುರ್ಗಾದೇವಿ ರಂಗಾರಾಧನಾ ಸೇವಾ ಸಮಿತಿ, ಗ್ರಾಪಂ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರುನಾಡಿನ ಶ್ರೀಮಂತ ಭಾಷೆ ಬೆಳೆಸುವಲ್ಲಿ ಕಲಾವಿದರ ಕೊಡುಗೆ ಮಹತ್ತರವಾಗಿದೆ ಎಂದರು. ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ.ಎಸ್.ಎಸ್.ಗಡೇದ ಮಾತನಾಡಿ, ಕನ್ನಡ ಮನೆ-ಮನಗಳ ಭಾಷೆಯಾಗಬೇಕು. ನಾವು ಯಾವುದೇ ಕ್ಷೇತ್ರದಲ್ಲಿ ಮುಂದುವರಿದರೂ ಕನ್ನಡ ಜೀವನಕ್ಕೆ ಅಮೃತವಿದ್ದಂತೆ ಎಂದರು.


    ಹಿರಿಯ ಸಾಹಿತಿ ಎಸ್.ವೈ. ಹಂಜಿ ಮಾತನಾಡಿ, ಕನ್ನಡ ಭಾಷೆ, ನಾಡಿನ ಕಲೆಗಳನ್ನು ಜನಮಾನಸದಲ್ಲಿ ಬಿತ್ತುವ ಕೆಲಸವಾಗಬೇಕು. ಪರಭಾಷೆಯ ವ್ಯಾಮೋಹ ತೊರೆದು ಕನ್ನಡ ಕಲಿತು ಸಾಧನೆ ಮಾಡಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗಾವಿ ಜತೆಗೆ ಇನ್ನೆರಡು ಜಿಲ್ಲೆಗಳಾಗಿ ಒಡೆಯಬೇಕು ಎಂದರು. ವಿಚಾರಣ ಸಂಕಿರಣ, ಕವನ ವಾಚನ, ಸುಗಮ ಸಂಗೀತ, ಜನಪದ ಗಾಯನ, ವೀರಗಾಸೆ ಕುಣಿತ, ತತ್ತ್ವಪದ, ಭಜನಾ ಪದ, ಸಮೂಹ ನೃತ್ಯ, ಸಂಗ್ಯಾ-ಬಾಳ್ಯಾ, ಸಣ್ಣಾಟದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಪ್ರೇಕ್ಷಕರಿಗೆ ಮುದ ನೀಡಿದವು. ಸಾಧಕರನ್ನು ಗೌರವಿಸಲಾಯಿತು.


    ಗ್ರಾಪಂ ಅಧ್ಯಕ್ಷೆ ಶ್ರೀದೇವಿ ವರಾಳೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಹುಲ ದೇಸಾಯಿ, ಎಸ್.ಆರ್.ಡೊಂಗರೆ, ಡಾ. ಪೂರ್ಣಿಮಾ ದಾಮನ್ನವರ, ಬಿ.ಆರ್.ಪಾಟೀಲ, ಬಾಬು ಸನದಿ, ಸುಜಾತಾ ಮಗದುಮ್ಮ, ಸುಪ್ರಿಯಾ ಕಲಾಚಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts