More

    ಕನ್ನಡ ಪರ ನಿಲುವು ಮತ್ತಷ್ಟು ಬಲಗೊಳ್ಳಲಿ

    ಅರಕಲಗೂಡು: ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡದ ಒಲವು ಗಟ್ಟಿಗೊಳ್ಳುವ ಜತೆಗೆ ತಂತ್ರಾಂಶಗಳ ಬಳಕೆಯಲ್ಲೂ ಗಮನಾರ್ಹ ಬೆಳವಣಿಗೆಯಾದರೆ ಭವಿಷ್ಯದ ಕನ್ನಡಕ್ಕೆ ಯಾವುದೇ ಕುತ್ತು ಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟರು.

    ಪಟ್ಟಣದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

    ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಪರ ನಿಲುವುಗಳು ಮತ್ತಷ್ಟು ಬಲಗೊಳ್ಳಬೇಕು. ಆಗ ತಂತಾನೇ ಕನ್ನಡಿಗರ ಉದ್ಯೋಗ ಮತ್ತು ಬದುಕು ಗಟ್ಟಿಗೊಳ್ಳುತ್ತದೆ. ಕನ್ನಡ ಶಕ್ತಿ ಹೆಚ್ಚಿಸಲು ಒಂದು ಕೊರತೆ ಕಾಡುತ್ತಿದೆ. ಅನ್ಯ ಭಾಷಿಕರನ್ನು ಬಹುಬೇಗ ಒಪ್ಪಿಕೊಳ್ಳುವ ಮೂಲಕ ಕನ್ನಡದ ಮೇಲೆ ನಿರಾಭಿಮಾನ ತೋರುತ್ತಿರುವ ಪರಿಣಾಮವೇ ಭಾಷಾ ಬೆಳವಣಿಗೆಗೆ ತೊಡಕಾಗಿದೆ ಎಂದು ವಿಶ್ಲೇಷಿಸಿದರು.

    ಮಾಜಿ ಸಚಿವ ಎ. ಮಂಜು ಮಾತನಾಡಿ, ಕನ್ನಡದ ಉನ್ನತಿಗಾಗಿ ತಾಲೂಕು ಮಟ್ಟದಲ್ಲಿ ಇಂತಹ ಸಾಹಿತ್ಯ ಸಮ್ಮೇಳನ ನಡೆಸುವ ಅವಶ್ಯಕತೆ ಇದೆ ಎಂದರು.
    ಸಾಹಿತಿ ರತ್ನಜ ಅವರು ರಚಿಸಿದ ದಿವ್ಯ ಪುರುಷರ ದಿವ್ಯ ವಾಣಿ ಪುಸ್ತಕ ಬಿಡುಗಡೆ ಮಾಡಿದ ಚಲನಚಿತ್ರ ನಟ ವಸಿಷ್ಠ ಸಿಂಹ, ಹೊ.ರಾ. ಪರಮೇಶ್ ಅವರ ಬೆಳಕಿನೂರಿನ ದಾರಿಗಳು ಪುಸ್ತಕ ಬಿಡುಗಡೆ ಮಾಡಿದ ತಾಪಂ ಅಧ್ಯಕ್ಷೆ ವೀಣಾ ಮಂಜುನಾಥ್, ಉದ್ಯಮಿಗಳಾದ ಡಾ.ಸಿ.ಕೆ. ಮೂರ್ತಿ, ಎಂ.ಆರ್. ರಂಗಸ್ವಾಮಿ, ಪಪಂ ಸದಸ್ಯ ರಮೇಶ್ ವಾಟಾಳ್, ಮಾಜಿ ಅಧ್ಯಕ್ಷ ಮಂಜು ಶೆಟ್ಟಿಗೌಡ ಮಾತನಾಡಿದರು. ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕ ಪುತ್ರ ಶ್ರೀನಿವಾಸ್, ಉದ್ಯಮಿ ಕಳ್ಳಿ ಮುದ್ದನಹಳ್ಳಿ ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು. ಸಮ್ಮೇಳನಾಧ್ಯಕ್ಷಾ ಎ. ಸೂರ್ಯನಾರಾಯಣ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.

    ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ:
    ಕೆಎಎಸ್ ಸಾಧಕರಾದ ಎಂ.ಎನ್. ಮಧುರಾ, ಚನ್ನಕೇಶವ, ಪೂರ್ಣಿಮಾ, ಸಂಗೀತ ವಿಭಾಗದಲ್ಲಿ ತ್ಯಾಗರಾಜು ಕಟ್ಟೇಪುರ, ಸಾಹಿತ್ಯ ವಿಭಾಗದಲ್ಲಿ ರಾ.ನಂ. ಚಂದ್ರಶೇಖರ್, ಪರಮೇಶ್ ಹೊಡೆನೂರು, ಪತ್ರಿಕೋದ್ಯಮ ವಿಭಾಗದಲ್ಲಿ ಜಿ. ಚಂದ್ರಶೇಖರ್, ಶಿಕ್ಷಣ ಕ್ಷೇತ್ರದಲ್ಲಿ ಗಣೇಶ್ ಹೆಣ್ಣೂರು ಕೊಂಗಳಲೆ, ವೈದ್ಯಕೀಯ ವಿಭಾಗದಲ್ಲಿ ಡಾ.ರೇವಣ್ಣ, ಡಾ.ನಮ್ರತಾ, ಕ್ರೀಡಾ ಕ್ಷೇತ್ರದಲ್ಲಿ ಕೆ.ಆರ್. ಶಾಂತಕುಮಾರ್, ಜಾನಪದ ಕ್ಷೇತ್ರದಲ್ಲಿ ದೇವಾನಂದ ವರಪ್ರಸಾದ್, ಕೃಷಿ ಕ್ಷೇತ್ರದಲ್ಲಿ ಕಟ್ಟೇಪುರ ವೆಂಕಟೇಶ್, ಮಾಗೋಡು ಲಲಿತಮ್ಮ, ದೇಶ ಸೇವೆ ಕುಮಾರ್, ರಂಗಭೂಮಿ ರಾಜೇಗೌಡ ಅಲಿಯಾಸ್ ರವಿಕುಮಾರ್, ಸಮಾಜ ಸೇವೆ ಡಾ.ಎಂ.ಎನ್. ಕುಮಾರಸ್ವಾಮಿ, ಕಲೆ ಸೋಮಶೇಖರ್, ಪೌರ ಕಾರ್ಮಿಕರಾದ ಮುರುಗೇಶ್, ಮಂಜುಳಮ್ಮ ಅವರನ್ನು ಮಾಜಿ ಸಚಿವ ಎ. ಮಂಜು ಸನ್ಮಾನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts