More

    ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ

    ಲೋಕಾಪುರ: ಕರ್ನಾಟಕ ಸುವರ್ಣ ಸಂಭ್ರಮ 50ರ ಜ್ಯೋತಿ ರಥಯಾತ್ರೆಗೆ ಪಟ್ಟಣದಲ್ಲಿ ಸಾಂಪ್ರದಾಯಿಕವಾಗಿ ಅದ್ದೂರಿ ಸ್ವಾಗತ ಕೋರಲಾಯಿತು.

    ಗ್ರೇಡ್-2 ತಹಸೀಲ್ದಾರ್ ಎ.ಕೆ.ಇಂಡಿಕರ ಅವರು ಕಲಶ ಹೊತ್ತ ಜ್ಯೋತಿಯಾತ್ರೆಯನ್ನು ಸ್ವಾಗತಿಸಿದರು. ನಾಡದೇವತೆ ತಾಯಿ ಭುವನೇಶ್ವರಿಗೆ ಮಾಲಾರ್ಪಣೆ ಮಾಡಿ, ಆರತಿ ಬೆಳಗಿ ಬರಮಾಡಿಕೊಂಡರು. ಮಹಿಳೆಯರು ಪೂರ್ಣ ಕುಂಭದೊಂದಿಗೆ ರಥಯಾತ್ರೆಗೆ ಸ್ವಾಗತ ಕೋರಿದರು.

    ಉಪತಹಸೀಲ್ದಾರ್ ಸತೀಶ ಬೇವೂರ ಮಾತನಾಡಿ, 1973 ರಲ್ಲಿ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ವಿಶಾಲಾರ್ಥದಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವರ್ಷ ಗತಿಸಿದ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಇಡೀ ವರ್ಷ ನಾಡು-ನುಡಿ ಕುರಿತು ಯುವ ಪೀಳಿಗೆಗೆ ಪರಿಚಯಿಸಲು ಈ ರಥ ಯಾತ್ರೆ ಹಮ್ಮಿಕೊಂಡಿದೆ ಎಂದರು.

    ರಥಯಾತ್ರೆ ಮೆರವಣಿಗೆಯುದ್ದಕ್ಕೂ ಕನ್ನಡ ಹಾಡಿಗೆ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಶಾಲಾ ಮಕ್ಕಳು, ಸಾಹಿತಿಗಳು, ಸಾರ್ವಜನಿಕರು ವಿಶೇಷವಾಗಿ ಕೆಂಪು-ಹಳದಿ ಶಾಲು ಧರಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹೆಜ್ಜೆ ಹಾಕುತ್ತ, ಕುಣಿದು ಸಂಭ್ರಮಿಸಿದರು. ಯಾದವಾಡ ರಸ್ತೆ ಮುಖಾಂತರ ಹಲಕಿ ಗ್ರಾಮಕ್ಕೆ ರಥವನ್ನು ಬೀಳ್ಕೊಡಲಾಯಿತು.

    ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಸಿಆರ್‌ಪಿ ಕೃಷ್ಣಾ ಮಾಳೇದ, ಚಂದ್ರಕಾಂತ ರಂಗಣ್ಣವರ, ಶಿಕ್ಷಕರಾದ ಎಸ್.ಎಂ.ರಾಮದುರ್ಗ, ರವಿ ಕೊಲ್ಹಾರ, ಶ್ರೀನಂದ ವಜ್ಜಮಟ್ಟಿ, ಸಿದ್ದು ವಿರಕ್ತಮಠ, ಎಚ್.ಎ್.ಖವಾಸ್ತೆ, ಮಲ್ಲಿಕಾರ್ಜುನ ತಲ್ಲೂರ, ರಾಜಶೇಖರ ಮುತ್ತಿನಮಠ, ಸುಜಾತಾ ಜೋಶಿ, ಕೃಷ್ಣಾ ಭಜಂತ್ರಿ, ಮಂಜು ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts