More

    ಕನ್ನಡ ಕಲಿಕೆಗೆ ವಿನೂತನ ಯೋಜನೆ

    ಬೀದರ್: ರಾಜ್ಯದ ಗಡಿ ಭಾಗದಲ್ಲಿ ಕನ್ನಡಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸಾಹಿತ್ಯ ಅಕಾಡೆಮಿಯಿಂದ ಸಾಂಸ್ಕೃತಿಕ ಚಟುವಟಿಕೆ ಮೂಲಕ ಮಾತೃ ಭಾಷೆ ಕಲಿಸಲು ಕನ್ನಡ ಕಲಿಕೆ ಎಂಬ ವಿನೂತನ ಯೋಜನೆ ಆರಂಭಿಸಲಾಗಿದೆ ಎಂದು ಕನರ್ಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ ಹೇಳಿದರು.

    ಸಾಹಿತ್ಯ ಅಕಾಡೆಮಿ, ಗಡಿ ಪ್ರದೇಶ ಅಭಿವದ್ಧಿ ಪ್ರಾಧಿಕಾರ ಹಾಗೂ ಮಾತಭೂಮಿ ಸೇವಾ ಪ್ರತಿಷ್ಠಾನದಿಂದ ಶುಕ್ರವಾರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕಲಿಕೆ- ಕನ್ನಡ ಸ್ವಯಂ ಶಿಕ್ಷಕ ಯೋಜನೆ ಹತ್ತು ದಿನಗಳ ಕಾಯರ್ಾಗಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಮಾದರಿಯಲ್ಲಿ ಗಡಿಯಲ್ಲಿ ಕನ್ನಡ ಸ್ವಯಂ ಶಿಕ್ಷಕರ ಮೂಲಕ ಕನ್ನಡ ಕಲಿಸುವ ಉದ್ದೇಶ ಹೊಂದಲಾಗಿದೆ. ಪೈಲಟ್ ಯೋಜನೆಯಾಗಿ ಬೀದರ್ ಜಿಲ್ಲೆಯಿಂದ ಇದಕ್ಕೆ ಚಾಲನೆ ನೀಡಲಾಗಿದೆ ಎಂದರು.

    ಜಿಲ್ಲೆಯ ಗಡಿ ಭಾಗದ ಬಸವಕಲ್ಯಾಣ, ಭಾಲ್ಕಿ, ಔರಾದ್ ಹಾಗೂ ಬೀದರ್ ತಾಲೂಕಿನ ಆಯ್ದ 50 ಹಳ್ಳಿಗಳಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಗಡಿ ಭಾಗದ ಜನರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಕಸಾಪ ರಾಜ್ಯದಲ್ಲಿ ಕನ್ನಡ ಬೆಳವಣಿಗೆಗೆ ವಿಶೇಷ ಒತ್ತು ಕೊಟ್ಟಿದೆ. ಕನ್ನಡ ಕೆಲಸಕ್ಕಾಗಿ ನಾನಾ ಯೋಜನೆ ಜಾರಿಗೆ ತರುತ್ತಿದೆ. ಕನ್ನಡ ಭಾಷೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸಾಹಿತ್ಯ ಅಕಾಡೆಮಿ ವಿನೂತನ ಯೋಜನೆ ಜಾರಿಗೆ ತಂದಿದ್ದು ಖುಷಿ ತಂದಿದೆ ಎಂದರು.

    ಮಾತಭೂಮಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಗುರುನಾಥ ರಾಜಗೀರಾ ಮಾತನಾಡಿದರು. ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕಮ್ಮಟ ನಿರ್ದೇಶಕ ಡಾ.ಎಚ್.ಎಸ್. ಸತ್ಯನಾರಾಯಣ, ಶಂಭಯ್ಯ ಹಿರೇಮಠ, ರಂಗ ನಿರ್ದೇಶಕಿ ದಾಕ್ಷಾಯಿಣಿ ಭಟ್, ಗುರುರಾಜ ಎಲ್., ನಟರಾಜ್ ಇತರರಿದ್ದರು. ಕರಿಯಪ್ಪ ಸ್ವಾಗತಿಸಿದರು. ಛಾಯಾ ಭಗವತಿ ನಿರೂಪಣೆ ಮಾಡಿದರು. ಈಶ್ವರ ರುಮ್ಮಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts