More

    ಕನಕದಾಸರ ಜಯಂತಿ ಆಚರಣೆಗೆ ಸಕಲ ಸಿದ್ಧತೆ

    ಚಿತ್ರದುರ್ಗ: ಜಿಲ್ಲಾಡಳಿತದಿಂದ ನ. 30ರಂದು ನಡೆಯಲಿರುವ ಕನಕದಾಸರ ಜಯಂತ್ಯುತ್ಸವಕ್ಕೆ ನಗರವನ್ನು ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಿ, ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕುರುಬರ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್ ತಿಳಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಯಂತಿ ವೇಳೆ ಕುರುಬ ಸಮುದಾಯದವರನ್ನು ಸನ್ಮಾನಿಸಲಾಗುತ್ತಿತ್ತು. ಆದರೆ, ಈ ಬಾರಿ ಅನ್ಯ ಸಮಾಜದವರಿಗೂ ಆದ್ಯತೆ ನೀಡಲಾಗಿದೆ. ವಿವಿಧ ಕ್ಷೇತ್ರದ ಸಾಧಕರಾದ ಆರೋಗ್ಯ ಇಲಾಖೆಯ ಮಲ್ಲಣ್ಣ, ಸಾಮಾಜಿಕ ಕಾರ್ಯಕರ್ತರಾದ ದುರುಗೇಶಪ್ಪ, ಮಹ್ಮದ್ ನೂರುಲ್ಲಾ, ಸಿದ್ದೇಶ್ ಜೋಗಿ, ದೀಪು ಅವರಿಗೆ ಕನಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಮೂಲಕ ಮಾದರಿಯಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.

    ಸಮಾಜ ತಿದ್ದುವ ಕಾರ್ಯ ಮಾಡಿದ ಕನಕದಾಸರ ಜಯಂತಿಯನ್ನು ಎಲ್ಲಾ ಸಮುದಾಯದವರು ಸೇರಿ ಒಟ್ಟಾಗಿ ಆಚರಿಸಬೇಕಿದೆ. ಅದಕ್ಕಾಗಿ ಎಲ್ಲಾ ಜನಾಂಗದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ ಎಂದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಮಾತನಾಡಿ, ಜಯಂತಿ ಅಂಗವಾಗಿ 29ರ ಬೆಳಗ್ಗೆ 9.30ಕ್ಕೆ ಬೈಕ್ ರ‌್ಯಾಲಿ, 30ರಂದು ಕನಕದಾಸರ ಪ್ರತಿಮೆಯೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಅದ್ದೂರಿ ಮೆರವಣೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಸಮಾಜದ ಸಾಧಕರಾದ ನಿಶಾನಿ ಎಂ.ಜಯಣ್ಣ, ವೈದ್ಯ ಡಾ.ದೇವರಾಜ್, ಛತ್ತೀಸ್ ಗಡ್‌ನ ಶರತ್ ಬಿ.ಶ್ರೀನಿವಾಸ್ ಕೋರಿ, ಕೃಷಿ ಕ್ಷೇತ್ರದಲ್ಲಿ ಬಿ.ಎಚ್.ಹನುಮಂತಪ್ಪ ಗೌಡ, ಎಂಕಾಂನಲ್ಲಿ ಬಂಗಾರದ ಪದಕ ಪಡೆದಿರುವ ಸಿ.ಎಂ.ಚೈತನ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು. ಅಂದು ಸಂಜೆ 6.30ಕ್ಕೆ ಕನಕ ವೃತ್ತದಲ್ಲಿ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

    ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಮಾಜಿ ಸದಸ್ಯ ರವಿಶಂಕರ್ ಬಾಬು, ಸಂಘದ ರಾಜ್ಯ ಉಪಾಧ್ಯಕ್ಷ ಲೇಪಾಕ್ಷಿ, ಪದಾಧಿಕಾರಿಗಳಾದ ಕೆ.ಓಂಕಾರಪ್ಪ, ಮಲ್ಲಿಕಾರ್ಜುನ್, ಪುಷ್ಪವಲ್ಲಿ, ನಿಶಾನಿ ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts