More

    ಕದಂಬೋತ್ಸವದಲ್ಲಿ ಸಂಸ್ಕೃತಿ ಬಿಂಬ

    ಶಿರಸಿ: ಇತಿಹಾಸ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ಬನವಾಸಿಯ ಕದಂಬೋತ್ಸವದಲ್ಲಿ ಈ ಬಾರಿ ಸಾಕಷ್ಟು ವೈವಿಧ್ಯತೆಗಳಿದ್ದು, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆ ಮ್ಯಾರಾಥಾನ್ ಕೂಡ ಸಂಘಟಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕದಂಬೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು. ಕದಂಬ ಜ್ಯೋತಿ ಉದ್ಘಾಟನೆ ನಂತರ ಫೆ.6ರಂದು ಗುಡ್ನಾಪುರದಲ್ಲಿ ಸಂಜೆ 6ಕ್ಕೆ ಶಿರಸಿಯ ಮಿತ್ರಾ ಮ್ಯೂಸಿಕಲ್ಸ್​ನ ಪ್ರಕಾಶ ಹೆಗಡೆ ಅವರಿಂದ ಭಕ್ತಿಗೀತೆ, ಗುಡ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಪರಿಸರದ ಕುರಿತು ಕಿರು ನಾಟಕ, ಶಿರಸಿಯ ಅಭಿಷೇಕ ನೇತ್ರೇಕರ ಅವರಿಂದ ಶಿವತಾಂಡವ ನೃತ್ಯ, ತನುಶ್ರೀ ನಾಯ್ಕ ಅವರಿಂದ ಭರತನಾಟ್ಯ, ಸ್ನೇಹಶ್ರೀ ಹೆಗಡೆ ಅವರಿಂದ ರಿಂಗ್ ಡಾನ್ಸ್, ಸ್ಮಾರ್ಟ್ ಗ್ರುಪ್ ಕಲಾವಿದರಿಂದ ಆಧುನಿಕ ನೃತ್ಯ, ನೈದಿಲೆ ಹೆಗಡೆ ಅವರಿಂದ ಹಿಂದುಸ್ತಾನಿ ಸಂಗೀತ, ದಿವ್ಯಶ್ರೀ ಶೇಟ್ ಅವರಿಂದ ದೇವಿ ನೃತ್ಯ ವೈಭವ ರೂಪಕ, ಶ್ರುತಿ ಭಟ್ಟ ಹಾಗೂ ಸಂಗಡಿಗರಿಂದ ಸುಗಮ ಸಂಗೀತ, ಭಟ್ಕಳದ ಫ್ರೆಂಡ್ಸ್ ಮೆಲೋಡಿಯನ್ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಸಂಘಟಿಸಲಾಗಿದೆ.

    ಫೆ.8ರಂದು ಮಯೂರವರ್ಮ ವೇದಿಕೆಯಲ್ಲಿ ಸಂಜೆ 4ರಿಂದ ಎನ್.ವಿ. ಲಲಿತಾ ಮತ್ತು ತಂಡದವರಿಂದ ಭಕ್ತಿಗೀತೆ, ಅನುಷಾ ಸುರೇಶ ಮತ್ತು ತಂಡದವರಿಂದ ನೃತ್ಯರೂಪಕ, ಉಡುಪಿಯ ದುರ್ಗಾ ಪರಮೇಶ್ವರಿ ಚೆಂಡೆ ಬಳಗದವರಿಂದ ಚಂಡಿ ವಾದ್ಯ, ಬೆಂಗಳೂರಿನ ನಾರಾಯಣ ಭಟ್ಟ ಮತ್ತು ತಂಡದವರಿಂದ ಜಾದೂ ಪ್ರದರ್ಶನ, ಮಂಜುನಾಥ ಭಜಂತ್ರಿ ಅವರ ಶಹನಾಯ್ ವಾದನ, ಚಿತ್ರದುರ್ಗದ ನಾಗಶ್ರೀ ಎಂ.ಪಿ. ಮತ್ತು ತಂಡದಿಂದ ಮೋಹಿನಿ ಅಟ್ಟಂ ಡಾನ್ಸ್, ಶಿರಸಿಯ ಯಕ್ಷಗೆಜ್ಜೆ ಸಂಘಟನೆ ಸದಸ್ಯರಿಂದ ಯಕ್ಷ ರೂಪಕ, ಯಲ್ಲಾಪುರದ ಭಾರತೀಯ ನೃತ್ಯ ಕಲಾ-ಕೇಂದ್ರದವರಿಂದ ಭಾರತೀಯ ನೃತ್ಯ ರೂಪಕ, ಬಳ್ಳಾರಿಯ ಜಿ. ಚಂದ್ರಕಾಂತ ಅವರಿಂದ ಗಜಲ್ ಗಾಯನ ನಡೆಯಲಿದೆ. ನಂತರ ಮುಂಬೈನ ಎಂಜೆ5 ಕಲಾವಿದರಿಂದ ನೃತ್ಯ, ರಾತ್ರಿ 8.30ರಿಂದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಹಾಗೂ ತಂಡದವರಿಂದ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಫೆ.9ರಂದು ಸಂಜೆ 6ರಿಂದ ಪ್ರವೀಣ ಗೋಡ್ಕಿಂಡಿ ಅವರಿಂದ ಕೊಳಲು ವಾದನ, 8ರಿಂದ ಅಂತಾರಾಷ್ಟ್ರೀಯ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ಸಂಘಟನೆಯಾಗಿದೆ ಎಂದು ತಿಳಿಸಿದರು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಉಪತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಇತರರಿದ್ದರು.

    ಮ್ಯಾರಥಾನ್ 8ರಂದು
    ಕದಂಬೋತ್ಸವದ ಅಂಗವಾಗಿ ಫೆ.8ರ ಬೆಳಗ್ಗೆ 6 ಗಂಟೆಗೆ ಗುಡ್ನಾಪುರ ರಾಣಿ ನಿವಾಸದಿಂದ ಬನವಾಸಿ ಮಧುಕೇಶ್ವರ ದೇವಸ್ಥಾನದವರೆಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಬಡ್ಡಿ ಪಟು ಹರೀಶ ನಾಯ್ಕ ಅವರು ಮ್ಯಾರಥಾನ್ ಉದ್ಘಾಟಿಸುವರು. ಸ್ಪರ್ಧೆಯು ಮುಕ್ತವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ಆಕರ್ಷಕ ಬಹುಮಾನವಿದ್ದು, ಆಸಕ್ತರು ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ ಮಾಹಿತಿಗಳಿಗೆ ಪೂರಕ ದಾಖಲೆ ಜತೆ ಬಿ.ವಿ. ಗಣೇಶ (9448893933) ಅವರನ್ನು ಸಂರ್ಪಸಿ ಹೆಸರು ನೋಂದಾಯಿಸಬಹುದು.
    ಆದೇಶ ಹಿಂಪಡೆದ ಇಲಾಖೆ
    ಕಾರವಾರ: ದೇವಸ್ಥಾನಗಳ ಆಡಳಿತ ಮಂಡಳಿಗಳ, ವಿವಿಧ ಹಿಂದು ಸಂಘಟನೆಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯು ಕದಂಬೋತ್ಸವ ಆಚರಣೆಗಾಗಿ ದೇವಸ್ಥಾನಗಳ ಹಣ ಪಡೆಯುವ ಆದೇಶವನ್ನು ಹಿಂಪಡೆದಿದೆ. ಫೆ. 8 ಹಾಗೂ 9ರಂದು ಬನವಾಸಿಯಲ್ಲಿ ಸರ್ಕಾರದಿಂದ ಆಯೋಜಿಸಿರುವ ಕದಂಬೋತ್ಸವಕ್ಕೆ ಮುಜರಾಯಿ ಇಲಾಖೆಗಳ ಬಿ ದರ್ಜೆಯ ದೇವಸ್ಥಾನಗಳಿಂದ ತಲಾ 1 ಲಕ್ಷ ರೂ. ನೀಡಬೇಕು. ಸಿ ದರ್ಜೆಯ ದೇವಸ್ಥಾನಗಳಿಂದ ತಲಾ 10 ಸಾವಿರ ರೂ. ನೀಡಬೇಕು ಎಂದು ಹಿಂದು ಧಾರ್ವಿುಕ ದತ್ತಿ ಮತ್ತು ಧರ್ವದಾಯ ಇಲಾಖೆಯ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದರು. ಈ ಆದೇಶದಲ್ಲಿರುವ ಲೋಪದೋಷಗಳ ಕುರಿತು ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳ ಆಡಳಿತ ಮಂಡಳಿಗಳ ಸದಸ್ಯರು ಹಾಗೂ ಸಾರ್ವಜನಿಕರಿಂದ ಈ ಆದೇಶಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸರ್ಕಾರ ನಡೆಸುವ ಉತ್ಸವಕ್ಕೆ ದೇವಸ್ಥಾನದ ಹುಂಡಿ ಹಣ ಬಳಸುವ ಜಿಲ್ಲಾಡಳಿತದ ಉದ್ದೇಶಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ಈ ಆದೇಶವನ್ನು ಹಿಂಪಡೆದಿರುವುದಾಗಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕ್ರೀಡಾ ಸ್ಪರ್ಧೆಗಳಿಗೆ ನಾಳೆ ಚಾಲನೆ
    ಫೆ. 6ರಂದು ಮಧ್ಯಾಹ್ನ 3ಕ್ಕೆ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಶಾಸಕ ಶಿವರಾಮ ಹೆಬ್ಬಾರ ಚಾಲನೆ ನೀಡುವರು. ನಂತರ ಪುರುಷರ ಕಬಡ್ಡಿ, ಪುರುಷ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಮಹಿಳೆಯರಿಗೆ ಮಡಿಕೆ ಒಡೆಯುವ ಸ್ಪರ್ಧೆ, ಸಂಗೀತ ಖುರ್ಚಿ, ಸ್ಲೋ ಮೊಪೆಡ್ ಸ್ಪರ್ಧೆ, ತಲೆಯ ಮೇಲೆ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ಕಿರಣ ನಾಯ್ಕ (9449801404) ಅವರನ್ನು ಸಂರ್ಪಸಿ ಹೆಸರು ನೋಂದಾಯಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts