More

    ಕತಗಾಲದಲ್ಲಿ ಭೀತಿ ಮೂಡಿಸಿದ ಹುಲಿ ಹೆಜ್ಜೆ !

    ಕುಮಟಾ: ತಾಲೂಕಿನ ಕತಗಾಲ ಸುತ್ತಮುತ್ತಲ ಭಾಗದಲ್ಲಿ ಕಾಡುಪ್ರಾಣಿಗಳು ಬೆಳೆ ಹಾನಿಗೆ ಕಾರಣವಾಗಿವೆ. ಇಂಥದ್ದರಲ್ಲಿ ಬುಧವಾರ ರಾತ್ರಿ ಹುಲಿಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ. ಅಲ್ಲದೆ, ಸಾಕು ನಾಯಿ ಮೇಲೆ ದಾಳಿ ನಡೆಸಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

    ಸ್ಥಳೀಯ ಪಂಚಾಯಿತಿ ಸದಸ್ಯ ಮಹೇಶ ದೇಶಭಂಡಾರಿ ಅವರ ಮನೆಗೆ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಹುಲಿಯೊಂದು ಆಗಮಿಸಿ ಸಾಕು ನಾಯಿಯ ಮೇಲೆ ದಾಳಿ ಮಾಡಿದೆ. ನಾಯಿ ಕೂಗಿದ್ದರಿಂದ ಮನೆ ಮಂದಿ ಹೊರಬಂದು ದೀಪ ಬೆಳಗಿಸಿದ್ದರಿಂದ ಹುಲಿ ನಾಯಿ ಬಿಟ್ಟು ಓಡಿ ಹೋಗಿದೆ ಎಂದು ‘ವಿಜಯವಾಣಿ’ಗೆ ಅವರು ತಿಳಿಸಿದ್ದಾರೆ.

    ವಿಷಯ ತಿಳಿದು ಗುರುವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಕೆಡಿಸಿಸಿ ಬ್ಯಾಂಕ್ ಸದಸ್ಯ ಗಜಾನನ ಪೈ, ಅಳಕೋಡ ಪಂಚಾಯಿತಿ ಉಪಾಧ್ಯಕ್ಷ ಶ್ರೀಧರ ಪೈ, ಮಂಜುನಾಥ ಹೆಗಡೆ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಈ ವೇಳೆ ಮಾತನಾಡಿದ ಗಜಾನನ ಪೈ, ಅಳಕೋಡ ಗ್ರಾಪಂ ವ್ಯಾಪ್ತಿಯಲ್ಲಿ ನಾಯಿ, ದನಕರುಗಳ ಮೇಲೆ ಹುಲಿ ದಾಳಿ ಆಗಾಗ ನಡೆಸುತ್ತಿದೆ. ರೈತರ ಬೆಳೆಗಳ ಮೇಲೆ ಮಂಗ, ಕಾಡುಹಂದಿ, ಮುಳ್ಳು ಹಂದಿ, ಕೆಶಅಳಿಲು, ನರಿ, ಕಾಡುಬೆಕ್ಕು, ಜಿಂಕೆ, ನವಿಲು, ಮೊಲ ಮುಂತಾದವುಗಳ ದಾಳಿ ಹೆಚ್ಚಾಗಿದೆ. ಇದರಿಂದಾಗಿ ಕಾಡು ಪ್ರಾಣಿಗಳ ಉಪಟಳಕ್ಕೆ ರೈತರು ಹೈರಾಣಾಗಿ ಹೋಗಿದ್ದಾರೆ. ಅರಣ್ಯ ಇಲಾಖೆಯವರು ಬೆಟ್ಟಗಳಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ಜನ್ಯ ಗಿಡಮರಗಳನ್ನು ಬೆಳೆಸಬೇಕು, ಇಲ್ಲವೇ ಕಾಡು ಪ್ರಾಣಿಗಳನ್ನು ನಿಯಂತ್ರಿಸಲು ರೈತರಿಗೆ ಅನುಮತಿ ನೀಡಿದರೆ ಯೋಗ್ಯ ಎಂದರು.

    ನಾಯಿ ಮೇಲೆ ಕಾಡು ಪ್ರಾಣಿ ದಾಳಿ ಸಂಬಂಧಿಸಿ ಅರಣ್ಯ ಇಲಾಖೆ ಯಿಂದ ಸ್ಥಳ ಪರಿಶೀಲಿಸಿ ಮಾಹಿತಿ ಸಂಗ್ರಹಿಸಲಾಗಿದೆ. ದಟ್ಟ ಅಡವಿಯ ಅಂಚಿನಲ್ಲಿರುವ ಮಹೇಶ ದೇಶಭಂಡಾರಿ ಅವರ ಮನೆ ಬಳಿ ಕಂಡುಬಂದಿದ್ದು ಚಿರತೆಯಾಗಿ ರಬಹುದು. ಈಬಗ್ಗೆ ಕ್ಯಾಮರಾ ಅಳವಡಿಸಿ ಕಾಡುಪ್ರಾಣಿಯ ಚಲನೆ ಖಚಿತಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಇಲಾಖೆ ನಿಯಮಾ ವಳಿಯಡಿ ಸೂಕ್ತ ಕ್ರಮ ಕೈಗೊಳ್ಳ ಲಾಗುವುದು. ಕತಗಾಲ ಅರಣ್ಯ ಭಾಗದಲ್ಲಿ ಕಾಡುಪ್ರಾಣಿ, ಮಂಗ ಮುಂತಾದವುಗಳಿಂದ ಕೆಲವೆಡೆ ಬೆಳೆ ಹಾನಿಯಾಗಿದ್ದಕ್ಕೆ ಪರಿಹಾರ ನೀಡಲಾಗಿದೆ. ಜಾನುವಾರುಗಳ ಮೇಲೆ ದಾಳಿ ಪ್ರಕರಣಗಳು ತೀರಾ ಕಡಿಮೆ ಇದ್ದು ಅಪಾಯಕಾರಿ ಪ್ರಕರಣ ಒಂದೂ ಇಲ್ಲ.

    | ದೀಪಕ್ ಆರ್​ಎಫ್​ಒ ಕತಗಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts