More

    ಕಣ್ಮನ ಸೆಳೆವ ಮಾಚಿದೇವರ ಹೊಂಡ

    ಮಾರ್ಥಂಡ ಜೋಶಿ ಬಸವಕಲ್ಯಾಣ
    ಭವ್ಯ ಸ್ಮಾರಕ, ಸುತ್ತಲೂ ನೀರಿನಿಂದ ಒಡಲು ತುಂಬಿಕೊಂಡ ಹೊಂಡ, ಬಗೆಬಗೆಯ ಗಿಡಗಳಿಂದ ಕಣ್ಮನ ಸೆಳೆಯುವ ಉದ್ಯಾನ, ಬಣ್ಣ-ಬಣ್ಣದ ದೀಪಗಳು, ಗಿಡ-ಮರಗಳಿಂದ ಕೂಡಿದ ಹಸಿರಸಿರಿಯ ಸೊಬಗು. ಇದು ಇಲ್ಲಿಯ ಶರಣ ಶ್ರೀ ಮಡಿವಾಳ ಮಾಚಿದೇವರ ಹೊಂಡ ಪರಿಸರದಲ್ಲಿ ಕಂಡುಬರುವ ಮನಮೋಹಕ ದೃಶ್ಯ.

    ಬಸವಕಲ್ಯಾಣ ಅಭಿವೃದ್ಧಿ ಮಂಡಳಿ(ಬಿಕೆಡಿಬಿ)ಯಿಂದ ಪ್ರಥಮ ಹಂತದಲ್ಲಿ ಶ್ರೀ ಮಡಿವಾಳ ಮಾಚಿದೇವರ ಹೊಂಡ ಅಭಿವೃದ್ಧಿಪಡಿಸಿದ್ದು, ಹೊಂಡದ ಮಧ್ಯ ಭಾಗದಲ್ಲಿ ಸ್ಮಾರಕ (ದೇವಸ್ಥಾನ) ನಿಮರ್ಿಸಲಾಗಿದೆ. ಸುತ್ತಲೂ ಅಷ್ಟಕೋನ ಆಕೃತಿಯಲ್ಲಿ ಪುನಶ್ಚೇತನಗೊಳಿಸಲಾಗಿದ್ದು, ಆಕರ್ಷಕ ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿದೆ.

    ಐತಿಹಾಸಿಕ ಸ್ಥಳವಾಗಿರುವ ಶ್ರೀ ಮಡಿವಾಳ ಮಾಚಿದೇವರ ಹೊಂಡವು ತ್ರಿಪುರಾಂತ ಕೆರೆಯಲ್ಲಿ ನೀರಿದ್ದಾಗ ಮೈದುಂಬಿ ನಳನಳಿಸುತ್ತದೆ. ಇದರಲ್ಲಿ ಮೊದಲು ಕಮಲದ ಹೂವುಗಳು ಅರಳುತ್ತಿದ್ದವು. ಮಳೆ ಅಭಾವದಿಂದ ಬೇಸಿಗೆಯಲ್ಲಿ ನೀರಿಲ್ಲದೆ ಒಣಗುತ್ತಿತ್ತು. 2011ರಲ್ಲಿ ಬಿಕೆಡಿಬಿಯಿಂದ ಕಾಮಗಾರಿ ಕೈಗೆತ್ತಿಕೊಂಡು ಹೊಸ ರೂಪ ನೀಡಲಾಗಿದೆ. ಮೂರು ವರ್ಷದಿಂದ ತ್ರಿಪುರಾಂತ ಕೆರೆಯಲ್ಲಿ ನೀರು ಬತ್ತಿಲ್ಲ. ಹೀಗಾಗಿ ಹೊಂಡ ನೀರಿನಿಂದ ತುಂಬಿಕೊಂಡಿದೆ.

    ಹೊಂಡದ ಸುತ್ತ ನಿಮರ್ಿಸಿರುವ ಉದ್ಯಾನದಲ್ಲಿ ಮೂರು ವರ್ಷದ ಹಿಂದೆ ಬಣ್ಣ-ಬಣ್ಣದ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಿದ್ದರಿಂದ ಪರಿಸರಕ್ಕೆ ಮತ್ತಷ್ಟು ಕಳೆ ಬಂದಿದೆ. ಸಂಜೆ 6ರಿಂದ ರಾತ್ರಿ 9ರವರೆಗೆ ಇಲ್ಲಿಯ ಸಂದರ ನೋಟ ಕಣ್ಮನ ಸೆಳೆಯುತ್ತದೆ. ಕಾಲುದಾರಿ ಬದಿಯಲ್ಲಿ ಅಳವಡಿಸಿದ ಸಣ್ಣ ವಿದ್ಯುತ್ ಕಂಬಗಳಲ್ಲಿ ಸ್ಪೀಕರ್ ಅಳವಡಿಸಿದ್ದು, ಸಂಜೆಯ ತಂಪು ಗಾಳಿಯಲ್ಲಿ ಕಂಬಗಳಿಂದ ಸಣ್ಣದಾಗಿ ಸೂಸಿಬರುವ ವಚನಗಳ ಇಂಪು ಮನಸ್ಸಿಗೆ ಮುದ ನೀಡುವುದರ ಜತೆಗೆ ಹರಿಸಿನಿಂದ ಕೂಡಿದ ಸುಂದರ ಪರಿಸರ ಜನರನ್ನು ತನ್ನತ್ತ ಆಕಷರ್ಿಸುತ್ತಿದೆ.

    ವಾಯು ವಿಹಾರಕ್ಕೆ ಈ ಸ್ಥಳ ಹೇಳಿಮಾಡಿಸಿದಂತಿದ್ದು, ಮೊದಲಿಂದಲೂ ಬೆಳಗ್ಗೆ ಸಾಕಷ್ಟು ಜನ ಬರುತ್ತಾರೆ. ಇತ್ತೀಚೆಗೆ ಸಂಜೆಯೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಡೆ ಮುಖ ಮಾಡುತ್ತಿದ್ದಾರೆ. ಆದರೆ ಕತ್ತಲೆಯಾದರೆ ಹದಗೆಟ್ಟ ದಾರಿ ಮತ್ತು ವಿದ್ಯುತ್ ದೀಪಗಳಿಲ್ಲದೆ ಸಮಸ್ಯೆ ಎದುರಿಸಬೇಕಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts