More

    ಕಣ್ಣೀರು ಸುರಿಸಿದರೂ ಸರ್ಕಾರ ಅನುದಾನ ನೀಡುತ್ತಿಲ್ಲ

     

    ಕಣ್ಣೀರು ಸುರಿಸಿದರೂ ಸರ್ಕಾರ ಅನುದಾನ ನೀಡುತ್ತಿಲ್ಲ

    ಕೆಜಿಎಫ್
    ಆಡಳಿತ ಪಕ್ಷದ ಶಾಸಕರು ಎಷ್ಟು ಅನುದಾನ ಕೇಳಿದರೂ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಬಿಡುಗಡೆ ಮಾಡುತ್ತದೆ. ಆದರೆ ಪ್ರತಿಪಕ್ಷದ ಶಾಸಕರು ಕಣ್ಣೀರಲ್ಲ, ರಕ್ತ ಸುರಿಸಿದರೂ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಶಾಸಕಿ ಎಂ.ರೂಪಕಲಾ ಆರೋಪಿಸಿದರು. ನಗರದ ಹೊರವಲಯದ ಬೆಮೆಲ್​ ಕಾರ್ಖಾನೆ ಬಳಿ ನಡೆಯುತ್ತಿದ್ದ ಡಬಲ್​ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದರು. ಪ್ರತಿಯೊಂದಕ್ಕೂ ಸರ್ಕಾರದಲ್ಲಿ ಕಾಡಿ ಬೇಡಿಕೊಂಡರೂ ಅನುದಾನವನ್ನು ಬಿಡುಗಡೆ ಮಾಡುವ ಗೋಜಿಗೆ ಹೋಗುವುದಿಲ್ಲ. ಈ ಸರ್ಕಾರದಲ್ಲಿ ಅನುದಾನಗಳನ್ನು ತೆಗೆದುಕೊಂಡು ಬರುವುದು ಅಷ್ಟು ಸುಲಭದ ಮಾತಲ್ಲ ಎಂದು ವಿಷಾದಿಸಿದರು.
    ಬೆಮೆಲ್​ ಉದ್ದಿಮೆದಾರರಿಂದ ನ್ಯಾಯಾಲಯದ ಆದೇಶ ಧಿಕ್ಕಾರ: ಹೀಗಿರುವಾಗಿ ೇತ್ರದಲ್ಲಿರುವ ಒಂದೇ ಒಂದು ಸಾರ್ವಜನಿಕ ವಲಯದ ಬೆಮೆಲ್​ ಉದ್ದಿಮೆಯವರು 20&25 ವರ್ಷಗಳಿಂದ ಸುಮಾರು 45 ಕೋಟಿ ರೂಪಾಯಿ ತೆರಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಪಾವತಿಸುವಂತೆ ಕೇಳಿದರೆ ನ್ಯಾಯಾಲಯಕ್ಕೆ ಹೋಗಿದ್ದು, ನ್ಯಾಯಾಲಯವೂ ಸಹ ತೀರ್ಪು ನಮ್ಮ ಪರವಾಗಿ ನೀಡಿ, ತೆರಿಗೆ ಪಾವತಿ ಮಾಡುವಂತೆ ಆದೇಶಿಸಿದ್ದರೂ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಶಾಸಕಿ ರೂಪಕಲಾ ಹರಿಹಾಯ್ದರು.
    ಬೆಮೆಲ್​ನವರಲ್ಲದೇ ಬಿಜಿಎಂಎಲ್​ನವರು ಕಳೆದ 25 ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಕಟ್ಟಬೇಕಾಗಿರುವ ರಾಯಲ್ಟಿ ಹಣವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದು, ಇದನ್ನು ಪಾವತಿಸಿದಲ್ಲಿ 100 ವರ್ಷಗಳ ಕಾಲ ಗಣಿಯಲ್ಲಿ ದುಡಿದ ಕಾರ್ಮಿಕರಿಗೆ 25 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ 52 ಕೋಟಿ ರೂಪಾಯಿ ಹಣವನ್ನು ಎಲ್ಲರಿಗೂ ಪಾವತಿಸಬಹುದಾಗಿತ್ತು.

    ಕೆಜಿಎಫ್​​ ​ಗೆ ಬೆಮಲ್​ ಕೊಡುಗೆ ಏನು?
    ಸಿಎಸ್​ಆರ್​ ಯೋಜನೆಯಡಿಯಲ್ಲಿ ಬೇರೆ ಎಲ್ಲೆಲ್ಲೋ ಅಭಿವೃದ್ಧಿ ಕಾಮಗಾರಿಗಳನ್ನು ಬೆಮೆಲ್​ನವರು ಮಾಡುತ್ತಾರೆ ಆದರೆ ಕೆಜಿಎಫ್​ ನಗರಕ್ಕೆ ಅವರ ಕೊಡುಗೆ ಏನು? ಪ್ರತಿ ವರ್ಷ ಬರುವ ಲಾಭದಿಂದ ಶೇ.10ರಷ್ಟು ಇಲ್ಲವೇ ಶೇ.15ರಷ್ಟು ಹಣವನ್ನು ಮೀಸಲಿರಿಸಿ ಕೆಜಿಎಫ್​ ನಗರದ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಏಕೆ ಬಳಸಿಲ್ಲ? ಎಂದು ಶಾಸಕಿ ರೂಪಕಲಾ ಪ್ರಶ್ನಿಸಿದರು.

    ಬಿಡಿಗಾಸೂ ತೆರಿಗೆ ಕಟ್ಟಿಲ್ಲ
    ನಗರಸಭೆಗೆ ಪೌರಾಯುಕ್ತರಾಗಿ ಯಾರೇ ನೂತನವಾಗಿ ಬಂದು ಅಧಿಕಾರ ವಹಿಸಿಕೊಂಡರೂ ಅವರೆಲ್ಲರೂ ಬಂದು ಬೆಮೆಲ್​ ಆಡಳಿತ ಮಂಡಳಿಯವರೊಂದಿಗೆ ಕಂತುಗಳಲ್ಲಿ ಬಾಕಿ ಇರುವ ತೆರಿಗೆ ಹಣ ಪಾವತಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಡ್ಡಿ 75 ಕೋಟಿ ರೂಪಾಯಿಯಷ್ಟಾಗುವುದರಿಂದ ಬಡ್ಡಿಯನ್ನು ಮನ್ನಾ ಮಾಡುತ್ತೇವೆ ಎಂದು ತಿಳಿಸಿದರೂ ಇದುವರೆಗೆ ಬಿಡಿಗಾಸು ತೆರಿಗೆ ಕಟ್ಟಿಲ್ಲ ಎಂದು ಶಾಸಕಿ ರೂಪಕಲಾ ಹೇಳಿದರು.

    23 ಶುದ್ಧನಿರಿನ ಟಕಗಳನ್ನು ಆರಂಭಿಸಿ

    ಕೋಲಾರ
    ಬೇಸಿಗೆ ಬೇಗೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕೂಡಲೇ ಅಮೃತ್​ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿರುವ
    23 ಶುದ್ಧ ನೀರಿನ ಟಕಗಳನ್ನು ಲೋಕಾರ್ಪಣೆ ಮಾಡಲು ಕ್ರಮವಹಿಸಿ ಎಂದು ಶಾಸಕಿ ಎಂ.ರೂಪಕಲಾ
    ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
    ಕೆಜಿಎಫ್​ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ನಗರಸಭೆ ಹಾಗೂ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳ ಸಭೆ ಆಯೋಜಿಸಲು ಶಾಸಕರು ಮಾಡಿದ್ದ ಮನವಿಯಂತೆ ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ಮಂಗಳವಾರ ನಡೆಸಿದ ಸಭೆಯಲ್ಲಿ ಮಾತನಾಡಿದರು.
    ಅಮೃತ್​ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ ಶುದ್ಧ ನೀರಿನ ಟಕಗಳ ಪೈಕಿ 23 ಟಕಗಳು ಬಳಸಲು ಸಿದ್ಧವಿದ್ದು, ಬಾಕಿ 7 ಟಕಗಳು ಸಣ್ಣಪುಟ್ಟ ಕಾಮಗಾರಿ ಬಾಕಿ ಇರುವುದಾಗಿ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಶಾಸಕಿ ರೂಪಕಲಾ ಮಾತನಾಡಿ, ಬೇಸಗೆ ಕಾಲ
    ಹತ್ತಿರವಿದ್ದು ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವುದು ಅತಿ ಅಗತ್ಯವಾಗಿದೆ ಎಂದರು.
    ಇದೇ ಸಂದರ್ಭ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಟಕದ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಮತ್ತು ಕೆಜಿಎಫ್​ ನಗರದಲ್ಲಿ ನೀರು ಸರಬರಾಜು ವ್ಯವಸ್ಥೆಯ ಉಸ್ತುವಾರಿ ಬಗ್ಗೆ ಶಾಸಕರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು. ನಗರ ಯೋಜನಾ ನಿರ್ದೇಶಕ ಖಲೀಲ್​ ಸಾಬ್​, ಕಾರ್ಯಪಾಲಕ ಅಭಿಯಂತ ಶ್ರೀನಿವಾಸ್​, ಕೆಜಿಎಫ್​ ನಗರಸಭೆ ಅಧ್ಯಕ್ಷ ವಿ.ಮುನಿಸ್ವಾಮಿ, ಪೌರಾಯುಕ್ತೆ ಅಂಬಿಕಾ, ನಗರ ನೀರು ಸರಬರಾಜು ಮಂಡಳಿ ಎಇಇ ಶಿವಕುಮಾರ್​, ನಗರಸಭೆ ಎಇಇ ಮಂಜುನಾಥ್​, ನಗರ ನೀರು ಸರಬರಾಜು ಮಂಡಳಿಯ ಇಂಜಿನಿಯರಾದ ರಶ್ಮೀ, ಸುಮಶ್ರೀ ಹಾಜರಿದ್ದರು.

    ಒಳಚರಂಡಿ ಕಾಮಗಾರಿ ಅಪೂರ್ಣ
    ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಟಕದ ನಿರ್ಮಾಣ ಕಾಮಗಾರಿ ಸುಮಾರು ದಿನಗಳಿಂದ ಬಾಕಿ ಇದ್ದು, ಇದರಿಂದ ಒಳಚರಂಡಿಗೆ ಮನೆಗಳಿಂದ ಅಳವಡಿಸಿರುವ ಪೈಪ್​ಗಳಿಂದ ಹಲವು ಕಡೆ ತ್ಯಾಜ್ಯ ಹೊರಬರುತ್ತಿರುವುದಾಗಿಯೂ, ಇದರಿಂದ ಪರಿಸರ ನಾಶವಾಗುತ್ತಿರುವ ಕುರಿತು ಸಭೆಯಲ್ಲಿ ವಿಷಯ ಶಾಸಕಿ ರೂಪಕಲಾ ಪ್ರಸ್ತಾಪಿಸಿದರು. ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಟಕದ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮಾ.20 ರೊಳಗೆ ಪ್ರಾಯೋಗಿಕ ಪರೀಕ್ಷೆ ಮಾಡುವುದಾಗಿ ಅಧಿಕಾರಿಗಳು
    ತಿಳಿಸಿದರು. ಒಳಚರಂಡಿ ಕಾಮಗಾರಿ ಅಪೂರ್ಣವಾಗಿರುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು ಮಾ.10 ರೊಳಗೆ ಪ್ರಾಯೋಗಿಕ ಪರೀಕ್ಷೆ  ಮಾಡಿ ಅಂತಿಮಗೊಳಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts