More

    ಕಡಲೆ ಖರೀದಿ ಅಕ್ರಮಕ್ಕೆ ಕಡಿವಾಣ ಹಾಕಿ

    ಗಜೇಂದ್ರಗಡ: ಸಮೀಪದ ಸೂಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೈತರಿಗೆ ವಂಚಿಸಿ ನಡೆಸಲಾಗುತ್ತಿದ್ದ ಹಗಲು ದರೋಡೆಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.

    ಬೆಂಬಲ ಬೆಲೆಯಡಿ ಕಡಲೆ ಮಾರಾಟ ಮಾಡಲು ಹೆಸರು ನೋಂದಾಯಿಸುವ ಪ್ರತಿಯೊಬ್ಬ ರೈತರಿಂದ 300 ರೂ. ವಸೂಲಿ ಮಾಡುತ್ತಿರುವ ಖರೀದಿ ಕೇಂದ್ರದ ಕ್ರಮವನ್ನು ಸಿಎಂ ಖಂಡಿಸಿದ್ದು, ಈ ಕುರಿತು ಪರಿಶೀಲಿಸಿ ಸಹಕಾರಿ ಸಂಘದ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಚಿವಾಲಯವು ಗದಗ ಜಿಲ್ಲಾಧಿಕಾರಿಗೆ ಸೂಚಿಸಿದೆ.

    ರೈತರಿಂದ ಅಕ್ರಮವಾಗಿ 300 ರೂ. ವಸೂಲಿ ಹಾಗೂ ದಲ್ಲಾಳಿಗಳು ರೈತರ ಪಹಣಿ ನೀಡಿ, ತಾವು ಖರೀದಿಸಿದ್ದ ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ವಿಷಯದ ಕುರಿತು ‘ವಿಜಯವಾಣಿ’ಯಲ್ಲಿ ಏ. 18ರಂದು ವಿಸõತ ವರದಿ ಪ್ರಕಟವಾಗಿತ್ತು.

    ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿ ವಿಶ್ವನಾಥ ಪಿ.ಹಿರೇಮಠ ಅವರು, ‘ಸೂಡಿ ಗ್ರಾಮದ ಸಹಕಾರಿ ಸಂಘದಲ್ಲಿ ಬೆಂಬಲ ಬೆಲೆ ಖಡಲೆ ಖರೀದಿ ಪ್ರಾರಂಭಗೊಂಡಿದೆ. ಆದರೆ, ಉಚಿತ ನೊಂದಣಿ ಮಾಡಿಕೊಳ್ಳಬೇಕಾದ ಸಿಬ್ಬಂದಿ 300 ರೂ. ಪಡೆದು ವಂಚಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಸಹಕಾರಿ ಸಂಘದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರಿಂದ ಆದೇಶಿತನಾಗಿದ್ದೇನೆ’ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

    ಖರೀದಿ ಪ್ರಕ್ರಿಯೆ ಸ್ಥಗಿತ

    ‘ವಿಜಯವಾಣಿ’ಯಲ್ಲಿ ವರದಿ ಪ್ರಕಟವಾದ ನಂತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಖರೀದಿ ಕೇಂದ್ರವನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ಸಹಕಾರಿ ಸಂಘದ ಕಾರ್ಯದರ್ಶಿ ಬಿ.ಎ.ಸೊಬಗಿನ ಅವರನ್ನು ಸಂರ್ಪಸಿದಾಗ, ‘ಹತ್ತಿ ಖರೀದಿಗಾಗಿ ದಲ್ಲಾಳಿಗಳು ಸೂಡಿ ಗ್ರಾಮಕ್ಕೆ ಬಂದಿರುವುದರಿಂದ ಹಮಾಲರು ಅವರ ಬಳಿ ಕೆಲಸಕ್ಕೆ ಹೋಗುತ್ತಿದ್ದಾರೆ. ಹೀಗಾಗಿ, ಬಂದ್ ಮಾಡಿದ್ದರಿಂದ ಖರೀದಿ ಪ್ರಕ್ರಿಯೆ ನಿಂತಿದೆ. ಬುಧವಾರದಿಂದ ಪ್ರಾರಂಭಿಸಲಾಗುತ್ತದೆ’ ಎಂದರು.

    ಸೂಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಡಲೆ ಖರೀದಿಯ ನೋಂದಣಿಗೆ ರೈತರಿಂದ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಪರಿಶೀಲನೆಗೆ ಸಂಬಂಧಪಟ್ಟ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತಕ್ಕೆ ಹಾಗೂ ಎಪಿಎಂಸಿ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ. ಕರೊನಾ ಹಿನ್ನೆಲೆಯಲ್ಲಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಲು ಆಗಿಲ್ಲ. ಶೀಘ್ರದಲ್ಲೇ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

    | ಜಿ.ಬಿ.ಜಕ್ಕಣಗೌಡರ, ತಹಸೀಲ್ದಾರ್ ರೋಣ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts