More

    ಕಟ್ಟಡ ನಿರ್ಮಾಣ ಪರವಾನಗಿ ನೀಡಿ

    ಹುಬ್ಬಳ್ಳಿ: ಪಾಲಿಕೆಯಲ್ಲಿ ಕಟ್ಟಡ ನಿರ್ವಣಕ್ಕೆ ಪರವಾನಗಿ ನೀಡುವುದು ಕಳೆದ ಎರಡು ತಿಂಗಳಿಂದ ನಿಂತು ಹೋಗಿದೆ. ಆಫ್​ಲೈನ್​ನಲ್ಲಿ ಪರವಾನಗಿ ನೀಡಲು ಕ್ರಮ ಜರುಗಿಸಬೇಕು ಎಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ)ಹುಬ್ಬಳ್ಳಿ ಶಾಖೆ ಚೇರ್ಮನ್ ರಮನ್ ಸುರೇಶ ಕಿರೇಸೂರ ಆಗ್ರಹಿಸಿದ್ದಾರೆ. ನಿರ್ವಣ-2 ತಂತ್ರಾಂಶದಲ್ಲಿ ಆನ್​ಲೈನ್​ನಲ್ಲಿ ಪರವಾನಗಿ ನೀಡಲಾಗುತ್ತಿತ್ತು. ಬೆಂಗಳೂರಿನ ಐಡಿಬಿಐ ಟೆಕ್ನಾಲಾಜೀಸ್ ಪ್ರೖೆ. ಲಿಮಿಟೆಡ್ ಕಂಪನಿ ಇದನ್ನು ನಿರ್ವಹಿಸುತ್ತಿತ್ತು. ಇದೀಗ ಅವರು ಸೇವೆ ಸ್ಥಗಿತಗೊಳಿಸಿದ್ದಾರೆ. ಪರವಾನಗಿ ನೀಡುವುದು ಸ್ಥಗಿತಗೊಂಡಿರುವುದರಿಂದ ಕಟ್ಟಡ ಮಾಲೀಕರಿಗೆ, ಕಾರ್ವಿುಕರಿಗೆ, ಇಂಜಿನಿಯರ್​ಗಳಿಗೆ ತೀವ್ರ ತೊಂದರೆಯಾಗಿದೆ, ಮಹಾನಗರ ಪಾಲಿಕೆಗೆ ಆದಾಯ ಬರುವುದು ನಿಂತು ಹೋಗಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts