More

    ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಿನ್ನಡೆ

    ರಾಜೇಂದ್ರ ಶಿಂಗನಮನೆ ಶಿರಸಿ

    ಲಾಕ್​ಡೌನ್ ಸಂದರ್ಭದಲ್ಲಿ ತಾಲೂಕಿನಾದ್ಯಂತ ಸ್ಥಗಿತಗೊಂಡಿದ್ದ ಕಟ್ಟಡಗಳ ನಿರ್ಮಾಣ ಕಾರ್ಯ ಪುನರಾರಂಭಗೊಳ್ಳುತ್ತಿದೆ. ಆದರೆ, ಕಟ್ಟಡ ನಿರ್ವಣಕ್ಕೆ ಬೇಕಾದ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಇದರಿಂದಾಗಿ ಕಾಮಗಾರಿ ಆರಂಭಿಸುವವರು ಮತ್ತೊಮ್ಮೆ ಯೋಚಿಸುವಂತಾಗಿದೆ.

    ಮನೆ, ಮತ್ತಿತರ ಕಟ್ಟಡಗಳ ನಿರ್ವಣಕ್ಕೆ ಸಂಬಂಧಿಸಿ ಗುತ್ತಿಗೆದಾರರು, ಬಿಲ್ಡರ್​ಗಳು ಈಗಾಗಲೇ ಮಾಲೀಕರಿಂದ ಮುಂಗಡ ಹಣ ಪಡೆದು ಮನೆಗಳ ಮಾರಾಟಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಬೆಲೆ ಏರಿಕೆ ಆಗಿರುವುದರಿಂದ ಹಿಂದೆ ನಿಗದಿಪಡಿಸಿದ ದರದಲ್ಲಿಯೇ ಮನೆಗಳನ್ನು ನಿರ್ವಿುಸಿಕೊಡುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಇದರ ಜತೆಗೆ ಮನೆ ಮಾಲೀಕರಿಗೂ ವೆಚ್ಚ ಹೆಚ್ಚುವ ಆತಂಕ ಕಾಡತೊಡಗಿದೆ.

    ಲಾಕ್​ಡೌನ್​ಗಿಂತ ಮುನ್ನ ಒಂದು ಚೀಲ ಸಿಮೆಂಟ್​ಗೆ 310 ರೂ. ದರ ಇತ್ತು. ಈಗ ಇದರ ಬೆಲೆ 390ರಿಂದ 400 ರೂ. ಆಗಿದೆ. ಸ್ಟೀಲ್ ದರ ಪ್ರತಿ ಟನ್​ಗೆ 39 ಸಾವಿರ ರೂ. ಇತ್ತು. ಈಗ ಇದರ ಬೆಲೆ 50 ಸಾವಿರ ರೂ. ಆಗಿದೆ. ಟೈಲ್ಸ್, ಮತ್ತಿತರ ನಿರ್ಮಾಣ ಸಾಮಗ್ರಿಗಳ ಬೆಲೆಯಲ್ಲೂ ಹೆಚ್ಚಳವಾಗಿದೆ. ಸಿಮೆಂಟ್, ಮರಳು ಹಾಗೂ ಸ್ಟೀಲ್ ಮುಂತಾದ ವಸ್ತುಗಳು ನಿರ್ಮಾಣ ಕಾರ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತವೆ. ಇವುಗಳ ಬೆಲೆ ಹೆಚ್ಚಾದರೆ ನಿರ್ಮಾಣ ವೆಚ್ಚದಲ್ಲಿ ಶೇಕಡಾ 10ರಿಂದ 15ರಷ್ಟು ಹೆಚ್ಚಾಗುತ್ತದೆ. ಇದರಿಂದ ಹೆಚ್ಚಿನ ಹೊರೆ ಹೊರಲಾಗದ ಬಿಲ್ಡರ್​ಗಳು ಕೆಲಕಾಲ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

    500ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಬಾಕಿ:
    ಮೂಲಗಳ ಪ್ರಕಾರ ತಾಲೂಕಿನಲ್ಲಿ ಅಂದಾಜು 500ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣ ಕಾರ್ಯ ಬಾಕಿ ಉಳಿದಿದೆ. ಗ್ರಾಮೀಣ ಭಾಗದಲ್ಲಿನ ಕೆಲ ಮನೆಗಳು ಅರ್ಧ ಕಟ್ಟಿದ್ದು, ಮಳೆ ಹಿಡಿಯುವ ಮುನ್ನ ಪೂರ್ಣಗೊಳಿಸುವ ಸವಾಲು ಗುತ್ತಿಗೆದಾರರದ್ದಾಗಿದೆ. ಇನ್ನು ನಗರ ಭಾಗದಲ್ಲಿ ಹಾಗೂ ಅಪಾರ್ಟ್​ವೆುಂಟ್​ಗಳ ಕಾಮಗಾರಿಗಳು ಕೂಲಿ ಕಾರ್ವಿುಕರ ಕೊರತೆಯಿಂದ ನಿಂತ ನೀರಾಗಿದೆ. ಇದರಿಂದ ಮನೆ ಮಾಲೀಕರು ಹಾಗೂ ಗುತ್ತಿಗೆದಾರರು ಕಂಗಾಲಾಗಿದ್ದಾರೆ.

    ಈಗಾಗಲೇ ಮನೆ ನಿರ್ವಿುಸಲು ಮುಂಗಡವಾಗಿ ಗುತ್ತಿಗೆದಾರರಿಗೆ ಹಣ ನೀಡಲಾಗಿದೆ. ಆದರೆ, ಈಗ ಕಟ್ಟಡ ಸಾಮಗ್ರಿಗಳ ದರ ಹೆಚ್ಚಿದ್ದು, ನಾವು ನೀಡಿರುವ ಹಣ ಸಾಲುತ್ತಿಲ್ಲ. ಇದರಿಂದಾಗಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ.
    | ಸದಾಶಿವ ಭಟ್ಟ ಕಟ್ಟಡ ಮಾಲೀಕ

    ಲಾಕ್​ಡೌನ್ ಸಡಿಲಿಕೆ ನಂತರ ನಿವೇಶನ ಹಾಗೂ ಅಪಾರ್ಟ್​ವೆುಂಟ್​ಗಳಲ್ಲಿನ ಮನೆಗಳಿಗೆ ಬೇಡಿಕೆ ಕುಸಿದಿದೆ. ವಿಚಾರಣೆಗೆ ಕೂಡ ಗ್ರಾಹಕರು ಬರುತ್ತಿಲ್ಲ. ಕರೊನಾ ಹಾವಳಿಯಿಂದ ಜನರಲ್ಲಿ ಭವಿಷ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಅನಿಶ್ಚಿತತೆ ಮೂಡಿದೆ. ಹಾಗಾಗಿ ಜನರು ನಿತ್ಯದ ಬೇಡಿಕೆಗಳತ್ತ ಗಮನ ಹರಿಸುತ್ತಿದ್ದಾರೆಯೇ ಹೊರತು, ಆಸ್ತಿ ಖರೀದಿಗೆ ಹೆಚ್ಚಿನ ಆಸಕ್ತಿ ತೊರುತ್ತಿಲ್ಲ. ಹೀಗಾಗಿ, ಸರ್ಕಾರವೇ ಮುಂದಾಗಿ ಗ್ರಾಹಕರ ಕೈಗೆಟುಕುವ ದರದಲ್ಲಿ ಅಗತ್ಯ ವಸ್ತುಗಳ ದರ ನಿಗದಿ ಮಾಡಬೇಕು. ಈ ಮೂಲಕ ಗ್ರಾಹಕರಿಗೆ ಅವರ ಮನೆ ನಿರ್ವಣವಾದರೆ ಕಾರ್ವಿುಕರಿಗೆ ಕೆಲಸ ಲಭಿಸುತ್ತದೆ.
    | ಆನಂದ ಸಾಲೇರ ಗುತ್ತಿಗೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts