More

    ಕಕ ಶೈಕ್ಷಣಿಕ ಸುಧಾರಣೆಗೆ ಬ್ರೇಕ್

    ಜಯತೀರ್ಥ ಪಾಟೀಲ ಕಲಬುರಗಿ
    ದಕ್ಷ, ಪ್ರಾಮಾಣಿಕ ಮತ್ತು ಹಿಂದುಳಿದ ಪ್ರದೇಶದ ಬಗ್ಗೆ ಕಳಕಳಿ ಹೊಂದಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರೂ ಆಗಿರುವ ವಿದ್ಯಾಗಮ ಯೋಜನೆ ರೂವಾರಿ ನಲೀನ್ ಅತುಲ್ ಅವರನ್ನು ಸರ್ಕಾರ ಅವಧಿಗೆ ಮುನ್ನ ಎತ್ತಂಗಡಿ ಮಾಡಿ ಕಲ್ಯಾಣ ಕರ್ನಾಟಕಕ್ಕೆ ಮೊತ್ತೊಂದು ಹೊಡೆತ ನೀಡಿದೆ. ಈ ಮೂಲಕ ಶೈಕ್ಷಣಿಕ ಕ್ಷೇತ್ರದ ಸುಧಾರಣೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಬ್ರೇಕ್ ಹಾಕಿದೆ.
    ಒಬ್ಬ ಐಎಎಸ್, ಐಪಿಎಸ್ ಅಧಿಕಾರಿ ಒಂದು ಜಿಲ್ಲೆಯಲ್ಲಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಿದ ನಂತರ ವರ್ಗಾವಣೆ ಮಾಡಬೇಕೆಂಬುದು ಸರ್ಕಾರದ ನಿಯಮ. ಆದರೆ ಅವಧಿಗೆ ಮುನ್ನ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ. ಕಲಬುರಗಿ ಡಿಸಿ ಶರತ್ ಬಿ. ಮತ್ತು ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರ ವರ್ಗಾವಣೆ ಇದಕ್ಕೆ ನಿದರ್ಶನ. ಇದರ ಬೆನ್ನಿಗೆ ನಲೀನ್ ಅತುಲ್ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಉಪ ಕಾರ್ಯದರ್ಶಿ ಹುದ್ದೆಗೆ ವರ್ಗಾ ವಣೆ ಮಾಡಿರುವುದು ಚರ್ಚೆಗೆ ಗ್ರಾಸವೊದಗಿಸಿದೆ.
    ವರ್ಕ ಫ್ರಾಂ ಹೋಂ: ಕರೊನಾ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು ವರ್ಕ ಫ್ರಾಂ ಹೋಂ ಸಂದರ್ಭದಲ್ಲಿ ಮನೆಯಲ್ಲೇ ಮಾಡಬಹುದಾದ ಅನೇಕ ಚಟುವಟಿಕೆ ನೀಡಿದ್ದಾರೆ. ಈ ಪೈಕಿ ಶಾಲಾಭಿವೃದ್ದಿ ಯೋಜನೆ ತಯಾರಿ, ವಿದ್ಯಾರ್ಥಿಗಳ ಕೃತಿ ಸಂಪುಟ ರಚನೆ, ವ್ಯಕ್ತಿ ಅಧ್ಯಯನದ ಒಂದು ಮಾದರಿ ರಚನೆ, ಒಂದು ಪುಸ್ತಕದ ವಿಮಶರ್ೆ, ಒಂದು ಶೈಕ್ಷಣಿಕ ಲೇಖನ, ಇ-ತಂತ್ರಾಂಶ ತಯಾರಿಕೆ ಮೂಲಕ ಶಿಕ್ಷಕರನ್ನು ಅಣಿಗೊಳಿಸಲಾಗಿತ್ತು. ವಿದ್ಯಾಗಮ (ವಠಾರ ಶಾಲೆ) ಯೋಜನೆ ಕಲಬುರಗಿ ಶಿಕ್ಷಣ ಆಯುಕ್ತ ನಲೀನ್ ಅತುಲ್ ಕನಸಿನ ಕೂಸು. ಈ ಯೋಜನೆ ಇಡೀ ರಾಜ್ಯಕ್ಕೆ ಅಳವಡಿಸಲಾಯಿತು. ಇದೀಗ ಭಾರತದಲ್ಲೇ ಯೋಜನೆ ಅಳವಡಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಈಗಾಗಲೇ ಅನೇಕ ರಾಜ್ಯಗಳು ಅಳವಡಿಸಿಕೊಂಡಿವೆ.
    ಗ್ರಾಮ ಶಿಕ್ಷಣ ಪಡೆ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಶಿಕ್ಷಣ ಪಡೆ ರಚಿಸಲಾಗಿದೆ. ಗ್ರಾಪಂ ಅಧ್ಯಕ್ಷ/ಆಡಳಿತಾಧಿಕಾರಿ ಸಮಿತಿಗೆ ಅಧ್ಯಕ್ಷರಾಗಿದ್ದು, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಮುಖ್ಯ ಶಿಕ್ಷಕ ಸೇರಿ ಅನೇಕರು ಸದಸ್ಯರಾಗಿರುತ್ತಾರೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ಈ ಯೋಜನೆ ಜಾರಿಗೆ ತರಲಾಗಿದೆ. ಗ್ರಾಪಂ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸುವುದು, ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಲು ಈ ಸಮಿತಿ ರಚಿಸಲಾಗಿದೆ.
    ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲೇ ಅತ್ಯಂತ ಹಿಂದುಳಿದ, ರ್ಯಾಂಕಿಂಗ್ನಲ್ಲಿ ಕೊನೇ ಸ್ಥಾನದಲ್ಲಿರುವ ಈ ಭಾಗದಲ್ಲಿ ಸುಧಾಣೆಗೆ ದಿಟ್ಟ ಹೆಜ್ಜೆ ಇರಿಸಿದ್ದ ಮತ್ತು ಶಿಕ್ಷಕರು, ಜನರ ಮನಗೆದ್ದಿರುವ ಅಧಿಕಾರಿ ನಲೀನ್ ಅತುಲ್ ವರ್ಗಾವಣೆ ತಡೆಹಿಡಿದು ಶಿಕ್ಷಣ ಆಯುಕ್ತಾಲಯದಲ್ಲೇ ಮುಂದುವರಿಸಲು ಮರು ಪರಿಶೀಲನೆ ನಡೆಸುವ ಅಗತ್ಯವಿದೆ.

    ಶೈಕ್ಷಣಿಕ ಸುಧಾರಣೆಗೆ ಕ್ರಮ
    ನಲಿಕಲಿ ಶಿಕ್ಷಕರಿಗೆ ತರಬೇತಿ, ನಲಿಕಲಿ ಉದರ್ು, ಇಂಗ್ಲಿಷ್ ಶಿಕ್ಷಕರ ಪುನಶ್ಚೇತನ ತರಬೇತಿ, ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ತರಬೇತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಿಗೆ ತರಬೇತಿ, ಸಿಟಿಇ ಮತ್ತು ಡಯಟ್ ಉಪನ್ಯಾಸಕರ ಸಂಶೋಧನೆ ಅಧ್ಯಯನ ತರಬೇತಿ, 6ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬುನಾದಿ ತರಬೇತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 4 ಮತ್ತು 5ನೇ ತರಗತಿ ಬೋಧಿಸುವ ಶಿಕ್ಷಕರಿಗೆ ತರಬೇತಿ, 6ರಿಂದ 8ನೇ ವಿಷಯವಾರು ಶಿಕ್ಷಕರಿಗೆ ತರಬೇತಿ, ಚಿತ್ರಕಲಾ ಶಿಕ್ಷಕರಿಗೆ ತರಬೇತಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ತರಬೇತಿ, ಪ್ರೌಢ ಶಾಲಾ ಸಹ ಶಿಕ್ಷಕರಿಗೆ ತರಬೇತಿ, ಬಿಐಇಆರ್ಟಿ ತರಬೇತಿ, ಸಿಬ್ಬಂದಿಗೆ ಗಣಕಯಂತ್ರ ತರಬೇತಿ, ಮಕ್ಕಳಿಗೆ ಕಾ್ರೃಶ್ ಕೋರ್ಸ ತರಬೇತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts