More

    ಕಂದಾಯ ಇಲಾಖೆ ತಪ್ಪಿನಿಂದ ಪರಿಹಾರ ವಿಳಂಬ

    ಸಾಗರ: ಕಂದಾಯ ಇಲಾಖೆ ಮಾಡಿರುವ ಸಣ್ಣ ತಪ್ಪಿನಿಂದಾಗಿ ಮಂಗನ ಕಾಯಿಲೆಯಿಂದ ಮೃತಪಟ್ಟ ವ್ಯಕ್ತಿಗಳ ಅಷ್ಟೂ ಕುಟುಂಬಕ್ಕೆ ಪರಿಹಾರ ಸಿಗಲು ವಿಳಂಬವಾಗಿದೆ. ಈಗಾಗಲೆ 8 ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಮೊತ್ತ ತಲುಪಿದ್ದು ಉಳಿದ ಕುಟುಂಬಗಳಿಗೂ ಶೀಘ್ರ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ಭರವಸೆ ನೀಡಿದರು.

    ಉಪವಿಭಾಗೀಯ ಆಸ್ಪತ್ರೆಯಲ್ಲಿ ಶುಕ್ರವಾರ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಬಾನ್ಕುಳಿ ಗ್ರಾಪಂ ವ್ಯಾಪ್ತಿಯ ಗುಜರವಳ್ಳಿ ಗ್ರಾಮದ ಯುವಕ ಭರತ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ವೈದ್ಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೃತ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವಂತೆ ಸಿಎಂಗೆ ಕೋರಲಾಗಿತ್ತು. ಈ ನಿಟ್ಟಿನಲ್ಲಿ 2 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ ಎಂದರು.

    ತಾಲೂಕಿನಲ್ಲಿ ಕೆಎಫ್​ಡಿಗೆ ಸಂಬಂಧಿಸಿ 2 ಪ್ರಕರಣಗಳು ದಾಖಲಾಗಿದ್ದು, ಬಾನ್ಕುಳಿ ಗ್ರಾಪಂನ ಭರತ್ ಅವರಿಗೆ ಕೆಎಫ್​ಡಿ ಸೋಂಕಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ತುಮರಿ ಗ್ರಾಪಂ ಕಳೂರಿನ ಸೀಗೆಮಕ್ಕಿಯ 58 ವರ್ಷದ ಹೂವಮ್ಮ ಅವರು ಗುರುವಾರ ಶಂಕಿತ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬಂದಿದ್ದು ಅವರನ್ನು ಮಂಗಳೂರಿನ ವೆನ್​ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.

    ಕಳೆದ ವರ್ಷ ಮಣಿಪಾಲ್ ಆಸ್ಪತ್ರೆಯಲ್ಲಿ ಕೆಎಫ್​ಡಿಗೆ ಚಿಕಿತ್ಸೆ ಪಡೆಯಲು ದಾಖಲಾದ ಕೆಲವರಿಗೆ ಉಚಿತ ಚಿಕಿತ್ಸಾ ವ್ಯವಸ್ಥೆ ಸಿಕ್ಕಿಲ್ಲ. ಈ ಬಾರಿ ಅಂತಹ ತಪ್ಪು ನಡೆಯದಂತೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸುವ ನಿಟ್ಟಿನಲ್ಲಿ ಸಿಎಂ ಬಳಿ ರ್ಚಚಿಸಲಾಗುವುದು. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

    ಸಿವಿಲ್ ಸರ್ಜನ್ ಡಾ. ಕೆ.ಆರ್.ಪ್ರಕಾಶ್ ಬೋಸ್ಲೆ, ಡಾ. ವಾಸುದೇವ್, ಟಿ.ಡಿ.ಮೇಘರಾಜ್, ಬಿ.ಟಿ.ರವೀಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts