More

    ಕಂಟೈನರ್ ತಡೆದು 15 ಗೋವುಗಳ ರಕ್ಷಣೆ

    ಚಿತ್ರದುರ್ಗ: ಚಳ್ಳಕೆರೆಯಿಂದ ದಾವಣಗೆರೆ ಮಾರ್ಗವಾಗಿ ಸಾಗಿಸುತ್ತಿದ್ದ ಗೋವುಗಳಿದ್ದ ಕಂಟೈನರ್ ಅನ್ನು ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಸಿನಿಮಿಯಾ ಶೈಲಿಯಲ್ಲಿ ಚೇಸ್ ಮಾಡಿ ತಡೆದಿದ್ದು, ಅದರಲ್ಲಿದ್ದ 15 ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಚಳ್ಳಕೆರೆಯಿಂದ ಕಂಟೈನರ್‌ನಲ್ಲಿ ರಾಸುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಕೂಡಲೇ ಕಾರ್ಯಪ್ರವೃತ್ತರಾದ ಸಂಘ ಪರಿವಾರದ ಕಾರ್ಯಕರ್ತರು ನಗರದ ಹೊರವಲಯ ಮದಕರಿಪುರದ ದಾವಣಗೆರೆ ಬೈಪಾಸ್ ಬಳಿ ಬೆನ್ನಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಕೂಡ ಧಾವಿಸಿದ್ದಾರೆ.

    ಕಾರ್ಯಕರ್ತರು ಹಾಗೂ ಪೊಲೀಸರನ್ನು ನೋಡಿದ ಕಂಟೈನರ್‌ನಲ್ಲಿದ್ದ ಚಾಲಕ ಮತ್ತಿತರರು ಪರಾರಿಯಾಗಿದ್ದಾರೆ. ಗೋವುಗಳನ್ನು ಎಲ್ಲಿಂದ ತರಲಾಗಿದೆ, ಎಲ್ಲಿಗೆ ಸಾಗಿಸಲಾಗುತ್ತಿತ್ತು, ಕಂಟೈನರ್ ಯಾರದ್ದು ಎಂಬಿತ್ಯಾದಿ ಮಾಹಿತಿ ಕುರಿತಂತೆ ತನಿಖೆ ನಡೆಸಬೇಕಿದೆ. ಇದಕ್ಕಾಗಿ ಸ್ವಯಂ ಆಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗೋವುಗಳನ್ನು ಚಳ್ಳಕೆರೆ ರಸ್ತೆಯಲ್ಲಿರುವ ಸರ್ಕಾರಿ ಗೋ ಶಾಲೆ ವಶಕ್ಕೆ ಒಪ್ಪಿಸಲಾಗಿದೆ ಎಂದು ಗ್ರಾಮಾಂತರ ಠಾಣೆ ಪಿಐ ಸುನೀಲ್‌ಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts