More

    ಔರಾದ್ ವಿಧಾನಸಭೆ ಕ್ಷೇತ್ರಕ್ಕೆ 3 ಸಾವಿರ ಮನೆ

    ಕಮಲನಗರ: ಸ್ವಂತ ಮನೆಯಿಲ್ಲದ ಬಡವರಿಗೆ ಶಾಶ್ವತ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿ ಮತ್ತು ವಸತಿ ಸಚಿವರನ್ನು ಭೇಟಿಯಾಗಿ ಔರಾದ್(ಬಿ) ವಿಧಾನಸಭೆ ಕ್ಷೇತ್ರಕ್ಕೆ 3000 ಮನೆ ಮಂಜೂರು ಮಾಡಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
    ಗ್ರಾಮ ಸಂಚಾರ ನಿಮಿತ್ತ ಕಮಲನಗರ ತಾಲೂಕಿನ ಕೊಟಗ್ಯಾಳ, ರಾಂಪುರ, ಸೋನಾಳ, ಸೋನಾಳ ವಾಡಿ, ಕಾಳಗಾಪುರ, ಹುಲಸೂರ, ಖೇಡ್, ಸಂಗಮ್, ಸಾವಳಿ, ಹೊಳಸಮುದ್ರ, ಡಿಗ್ಗಿ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದ ಅವರು, ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳ ಪಾರದರ್ಶಕ ಆಯ್ಕೆ ಮಾಡಿ ಸೂರಿಲ್ಲದವರಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ. ಗ್ರಾಮ ಸಂಚಾರ ವೇಳೆ ಫಲಾನುಭವಿಗಳಿಗೆ ಮನೆ ನಿಮರ್ಾಣದ ಕಾಯರ್ಾದೇಶ ಪತ್ರ ಸಹ ವಿತರಿಸಲಾಗುತ್ತಿದೆ ಎಂದರು.
    ಉದ್ಯೋಗ ಖಾತ್ರಿ ಯೋಜನೆಯಡಿ ಅಂಗನವಾಡಿ ಕಟ್ಟಡಗಳ ನಿಮರ್ಾಣಕ್ಕೂ ಅವಕಾಶವಿದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆ ಅಂಗನವಾಡಿ ನಿಮರ್ಿಸಿಕೊಡಬೇಕೆಂದು ನಿದರ್ೇಶನ ನೀಡಿದರು.
    ವಿವಿಧ ಗ್ರಾಮಗಳಲ್ಲಿ 3.50 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು, ಸೋನಾಳ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಅಧಿಕಾರಿಗಳೊಂದಿಗೆ ಸುತ್ತಾಡಿ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿದರು.
    ಗ್ರಾಪಂ ಅಧ್ಯಕ್ಷ ರಾಜಕುಮಾರ ಅಲಬೀದೆ, ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಸೈಯದ್ ಫಜಲ್ ಮೆಹಮೂದ್, ಪಿಡಬು್ಲೃಡಿ ಎಇಇ ವೀರಶೆಟ್ಟಿ ರಾಠೋಡ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸುಭಾಷ ದಾಳಗುಂಡೆ, ಜೆಸ್ಕಾಂ ಎಇಇ ರವಿ ಕಾರಬಾರಿ, ಕೃಷಿ ಅಧಿಕಾರಿ ಇಂದಿರಾ ಅಕ್ಕಲಕೋಟ, ಮುಖಂಡರಾದ ವಸಂತ ವಕೀಲ್, ಸುರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಧೋಂಡಿಬಾ ನರೋಟೆ, ಸಚಿನ್ ರಾಠೋಡ್, ಖಂಡೋಬಾ ಕಂಗಟೆ, ಗಿರೀಶ ಒಡೆಯರ್, ಬಂಟಿ ರಾಂಪುರೆ, ದೇವಾನಂದ ಪಾಟೀಲ್, ಶಕುಂತಲಾ ಮುತ್ತಂಗೆ, ಶೇಷರಾವ್ ಕೋಳಿ ಇತರರಿದ್ದರು.

    ಶಿಥಿಲಾವಸ್ಥೆಯಲ್ಲಿರುವ ಶಾಲೆ ಮತ್ತು ಅಂಗನವಾಡಿಗಳ ಬಗ್ಗೆ ಇಲಾಖೆ ಅಧಿಕಾರಿಗಳಿಂದ ಪಟ್ಟಿ ಪಡೆದು ಅಗತ್ಯವಿರುವ ಕಡೆ ಹೊಸ ಕಟ್ಟಡ ನಿಮರ್ಿಸಿಕೊಡುತ್ತಿದ್ದೇನೆ. ಸಣ್ಣ-ಪುಟ್ಟ ದುರಸ್ತಿ ಕೆಲಸಗಳಿದ್ದಲ್ಲಿ ತಕ್ಷಣ ಮಾಡಿ ಮಕ್ಕಳಿಗೆ ಯಾವುದೇ ರೀತಿಯ ಅನನುಕೂಲ ಆಗದಂತೆ ನೋಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
    | ಪ್ರಭು ಚವ್ಹಾಣ್, ಪಶು ಸಂಗೋಪನೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts