More

    ಓಪಿಎಸ್ ಜಾರಿಗೆ ನೌಕರರ ಸಂಘದ ಆಗ್ರಹ

    ಶೃಂಗೇರಿ: ಹಳೇ ಪಿಂಚಣಿ ಮರುಜಾರಿಗೆ ಒತ್ತಾಯಿಸಿ ತಾಲೂಕು ರಾಜ್ಯ ಸರ್ಕಾರಿ ಎನ್​ಪಿಎಸ್ ನೌಕರರ ಸಂಘದ ಸದಸ್ಯರು ಶುಕ್ರವಾರ ಶೃಂಗೇರಿ ಶ್ರೀಮಠದಿಂದ ತಾಪಂ ತನಕ ಪಾದಯಾತ್ರೆ ನಡೆಸಿ ಶಾಸಕ ಟಿ.ಡಿ.ರಾಜೇಗೌಡಗೆ ಮನವಿ ಪತ್ರ ಸಲ್ಲಿಸಿದರು.

    ತಾಲೂಕು ಎನ್​ಪಿಎಸ್ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ನೂತನ ಪಿಂಚಣಿ ರದ್ದು ಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. 20006 ಏಪ್ರಿಲ್ ನಿಂದ ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಸರ್ಕಾರ ಜಾರಿಗೊಳಿಸಿರುವ ಹೊಸ ಪಿಂಚಣಿ ನಿವೃತ್ತಿ ನೌಕರರ ಬದುಕಿಗೆ ಮಾರಕವಾಗಿದೆ ಎಂದರು.

    ನೌಕರರ ವೇತನದಲ್ಲಿ ಶೇ.10 ರಷ್ಟು ಕಡಿತಗೊಳಿಸಿ ಸರ್ಕಾರ ಶೇ.14 ರಷ್ಟು ವಂತಿಗೆ ಸೇರಿಸಿ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಲಾಗುತ್ತಿದೆ. ಇದರಿಂದ ನಿವೃತ್ತ ನೌಕರರಿಗೆ ಪ್ರತಿ ತಿಂಗಳು ನಿಶ್ಚಿತ ಮೊತ್ತ ಸಿಗದೆ ಅರ್ಥಿಕ ಸಮಸ್ಯೆ ಉಂಟಾಗುತ್ತಿದೆ. ಕರೊನಾ ಸಂದರ್ಭದಲ್ಲಿ ಷೇರು ಮಾರುಕಟ್ಟೆ ಹೊಡೆತದಿಂದ ಎನ್​ಪಿಎಸ್ ಖಾತೆಯಲ್ಲಿ 60 ರಿಂದ 80 ಸಾವಿರ ರೂ. ಹಣವನ್ನು ನೌಕರರು ಕಳೆದುಕೊಂಡಿದ್ದಾರೆ ಎಂದ ಅವರು ನೌಕರರ ನೋವುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.

    ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ವಿರೋಧ ಪಕ್ಷನಾಯಕರ ಜತೆ ಒಗ್ಗೂಡಿ ವಿಧಾನಸಭೆಯಲ್ಲಿ ನೌಕರರ ಸಮಸ್ಯೆ ಕುರಿತು ರ್ಚಚಿಸಲಾಗುವುದು ಎಂದರು.

    ಸಂಘದ ಉಪಾಧ್ಯಕ್ಷ ಫರೂರು ದೊಡ್ಡವಾಡ, ಕೋಶಾಧ್ಯಕ್ಷ ಯಮನಪ್ಪ ತಳವಾರ್,ತಾಲೂಕು ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಗುರುಮೂರ್ತಿ, ತಾಪಂ ಸಿಬ್ಬಂದಿ ಪಾರ್ವತಿ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಮೈತ್ರಿ.ಎಚ್.ಎಸ್, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾಯ್್ಕ ಆಹಾರ ನಿರೀಕ್ಷಕ ನಾಗೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts