More

    ಒಳಚರಂಡಿ ಕಾಮಗಾರಿಯ ನ್ಯೂನತೆ ಸರಿಪಡಿಸಿ

    ಕೊಳ್ಳೇಗಾಲ: ಪಟ್ಟಣದಲ್ಲಿ ನಡೆದಿದ್ದ ಒಳಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ಸಾಕಷ್ಟು ನ್ಯೂನತೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಬುಧವಾರ ನಗರಸಭಾಧ್ಯಕ್ಷೆ ಆರ್.ಸುಶೀಲಾ ಶಾಂತರಾಜು ಪೈಪ್‌ಲೈನ್ ಕಾಮಗಾರಿಗಳನ್ನು ಪರಿಶೀಲಿಸಿದರು.


    ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇ ಉಮೇಶ್ ಹಾಗೂ ಗುತ್ತಿಗೆದಾರ ರಾಮೇಗೌಡ ಜತೆಗೂಡಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಅವರು, 2ನೇ ಹಂತದ ಒಳಚರಂಡಿ ಪೈಪ್‌ಲೈನ್ ಸಂಪರ್ಕ ಕಲ್ಪಿಸುವ ಕಾಮಗಾರಿ ಸ್ಥಳಗಳನ್ನು ವೀಕ್ಷಣೆ ಮಾಡಿದರು.


    ಒಳಚರಂಡಿ ಕಾಮಗಾರಿ ಕೆಲಸ ಮುಕ್ತಾಯವಾಗಿದ್ದರೂ, 80ಕ್ಕೂ ಹೆಚ್ಚು ಕಡೆಗಳಲ್ಲಿ ಒಂದಕ್ಕೊಂದು ಪೈಪ್‌ಗಳ ನಡುವೆ ಸಂಪರ್ಕ ಕಲ್ಪಿಸುವ ಕೆಲಸವಾಗಿರಲಿಲ್ಲ. ಪರಿಣಾಮ, ಒಳ ಚರಂಡಿ ನೀರು ಸಮರ್ಪಕವಾಗಿ ವೆಟ್‌ವೆಲ್ ಹಾಗೂ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಸೇರದೆ ರಸ್ತೆಗಳಲ್ಲಿರುವ ಮ್ಯಾನ್‌ಹೋಲ್ ಮೇಲೆ ಹರಿಯುತ್ತಿದ್ದು ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದರು.


    ಇದರ ಪರಿಣಾಮ, ಕೆಲ ದಿನಗಳಿಂದ ಪಟ್ಟಣದ ಹಲವೆಡೆ ಕೈಗೊಂಡಿದ್ದ ಒಳ ಚರಂಡಿ ಪೈಪ್‌ಲೈನ್ ಲಿಂಕ್ ಕಾಮಗಾರಿಗಳನ್ನು ಪರಿಶೀಲಿಸುವಂತೆ ಗುತ್ತಿಗೆದಾರ ರಾಮೇಗೌಡ ಹಾಗೂ ಒಳ ಚರಂಡಿ ಮಂಡಳಿಯ ಸಹಾಯಕ ಇಂಜಿನಿಯರ್ ಉಮೇಶ್ ಅವರು ಬುಧವಾರ ನಗರಸಭಾ ಕಚೇರಿಯಲ್ಲಿ ನಗರಸಭಾಧ್ಯಕ್ಷೆ ಹಾಗೂ ಇತರ ನಗರಸಭಾ ಸದಸ್ಯರಲ್ಲಿ ಮನವಿ ಮಾಡಿದ್ದರು.


    ಈ ನಡುವೆ ಕೆಲವೆಡೆ ಇನ್ನೂ ಬಳಕೆಯಲ್ಲಿರುವ ಹಳೇ ಒಳ ಚರಂಡಿ ಮ್ಯಾನ್‌ಹೋಲ್‌ಗಳಲ್ಲಿ ತ್ಯಾಜ್ಯ ನೀರು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಸಂಪರ್ಕವನ್ನು 2ನೇ ಹಂತದ ಒಳ ಚರಂಡಿ ಪೈಪ್‌ಲೈನ್‌ಗೆ ಸಂಪರ್ಕ ನೀಡುವ ಮೂಲಕ ಸಮಸ್ಯೆ ತಪ್ಪಿಸುವಂತೆ ನಗರಸಭಾ ಅಧ್ಯಕ್ಷೆ ಒಳ ಚರಂಡಿ ಮಂಡಳಿ ಎಇ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಇದಕ್ಕೆ ಎಇ ಪ್ರತಿಕ್ರಿಯಿಸಿ, ಹಳೇ ಮ್ಯಾನ್‌ಹೋಲ್ ಸಂಪರ್ಕವನ್ನು 2ನೇ ಹಂತದ ಒಳ ಚರಂಡಿ ಪೈಪ್ ಲೈನ್‌ಗೆ ಸಂಪರ್ಕ ಕಲ್ಪಿಸಲು ಅವಕಾಶವಿಲ್ಲ. ಹಾಗಿದ್ದರೂ ಸಾರ್ವಜನಿಕ ಹಿತದೃಷ್ಟಿಯಿಂದ ದುರಸ್ತಿ ಕಾಮಗಾರಿಗಳನ್ನು ತಿಂಗಳೊಳಗೆ ಕೈತ್ತಿಕೊಳ್ಳುವುದಾಗಿ ಭರವಸೆ ನೀಡಿದರು.ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್ ನಾರಾಯಣಗುಪ್ತ, ನಗರಸಭಾ ಸದಸ್ಯರಾದ ಸುಮಾ ಸುಬ್ಬಣ್ಣ, ಕವಿತಾ, ಎ.ಪಿ.ಶಂಕರ್, ಎಸ್.ರಾಘವೇಂದ್ರ, ಎಸ್.ಮಂಜುನಾಥ್, ನಗರಸಭಾ ಮಾಜಿ ಅಧ್ಯಕ್ಷ ಎಸ್.ರಮೇಶ್, ಮಾಜಿ ಉಪಾಧ್ಯಕ್ಷ ಅಕ್ಮಲ್‌ಪಾಷ, ಮನೋಹರ್, ನಟರಾಜು, ಸೋಮಣ್ಣ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts