More

    ಒತ್ತಡದ ಬದುಕಿಗೆ ಧಾರ್ಮಿಕತೆ ಮದ್ದು

    ಯಾದಗಿರಿ: ಸಮಾಜದಲ್ಲಿ ಮಠ-ಮಾನ್ಯಗಳ ಕೊಡುಗೆ ಅಪಾರವಾಗಿದ್ದು, ಇದಕ್ಕೆ ತಕ್ಕಂತೆ ಸಮಾಜವೂ ಸಹ ತನು,ಮನ,ಧನದ ಸೇವೆಯೊಂದಿಗೆ ಮಠಗಳನ್ನು ಬೆಳಸಿಕೊಂಡು ಬರುತ್ತಿದೆ ಎಂದು ಬಾಳೆಹೊಸೂರಿನ ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಮಠದ ಪೀಠಾಪತಿ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ನುಡಿದರು.


    ಇಲ್ಲಿನ ಫಕೀರೇಶ್ವರ ಮಠದ ಆವರಣದಲ್ಲಿ ಪೀಠಾಪತಿ ಶ್ರೀ ಗುರುಪಾದೇಶ್ವರ ಸ್ವಾಮಿಗಳ 25ನೇ ಪಟ್ಟಾಕಾರದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿಶ್ವಧರ್ಮ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಹಿತೋಪದೇಶ ನೀಡಿ, ದೇಶದ ತ್ರಿವರ್ಣ ಧ್ವಜದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳು ಸ್ವಾತಂತ್ರ್ಯದ ನಂತರ ಬಂದಿವೆ. ಆದರೆ ಅನಾಕಾಲದಿಂದಲೂ ತ್ರಿವರ್ಣಗಳ ಸಾಮರಸ್ಯದೊಂದಿಗೆ ಮಠಗಳು ಸಮಾಜದಲ್ಲಿ ಕಾರ್ಯ ನಿರ್ವಹಿಸಿವೆ ಎಂದರು.
    ಇಂದಿನ ಆಧುನಿಕತೆಯ ದಿನಗಳಲ್ಲಿ ಮನುಷ್ಯನ ಜೀವನ ಯಂತ್ರದಂತಾಗಿದೆ. ಹೀಗಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾನೆ. ಒತ್ತಡದ ಬದುಕಿಗೆ ಧಾಮರ್ಿಕ ಚಿಂತನೆಯಿಂದ ಮಾತ್ರ ಮುಕ್ತಿ ಸಿಗಲು ಸಾಧ್ಯ. ಹೀಗಾಗಿ

    ಪ್ರತಿಯೊಬ್ಬರೂ ಧಾಮರ್ಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
    ಮಠಗಳಲ್ಲಿನ ಪ್ರತಿಯೊಬ್ಬ ಸನ್ಯಾಸಿಗಳು ಸಮಾಜದ ಪರಿವರ್ತನೆಗಾಗಿ ಮತ್ತು ಭಕ್ತಾಗಳನ್ನು ಧಾಮರ್ಿಕತೆಯತ್ತ ಸಾಗುವಂತೆ ಮಾಡುವ ಕೆಲಸ ಅಗತ್ಯವಾಗಿದೆ. ಸ್ವಾಮಿಗಳು ಕ್ರಿಯಾಶೀಲರಾದರೆ ಮಾತ್ರ ಮಠಗಳು ಬೆಳೆಯಲು ಸಾಧ್ಯ ಎಂದು ಹೇಳಿದರು.

    ಹಿರೇಮಠದ ಶ್ರೀಸೂಗೂರೇಶ್ವರ ಶಿವಾಚಾರ್ಯರು, ಗುಂಬಳಾಪುರ ಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಚನ್ನರುದ್ರಮನಿ ಶಿವಾಚಾರ್ಯರು, ಶ್ರೀ ಗುರುಪಾದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕಾಧ್ಯಕ್ಷ ಮಲ್ಲಣ್ಣ ಸಾಹು ಮಡ್ಡಿ, ಉಪಾಧ್ಯಕ್ಷ ಚಂದ್ರಶೇಖರ ಸಾಹು ಆರಬೋಳ, ಸಿದ್ದಲಿಂಗಣ್ಣ ಆನೆಗುಂದಿ, ಬಸವರಾಜ ಶಾಸ್ತ್ರೀಗಳು ಎಲೆಕೂಡಲಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts