More

    ಒಡಲು ತುಂಬಿದ ಕೃಷ್ಣೆಗೆ ಬಾಗಿನ ಯಾವಾಗ?

    ಕೊಡೇಕಲ್ : ಮಹಾರಾಷ್ಟç ಸೇರಿ ಕೃಷ್ಣಾ ಜಲಾನಯನ ಪ್ರದೇಶ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಸುರಿದ ವ್ಯಾಪಕ ಮಳೆಯಿಂದ ಜೀವಕಳೆ ಪಡೆದಿರುವ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಕೃಷ್ಣೆಗೆ ಬಾಗಿನ ಯಾವಾಗ ಎಂಬ ಪ್ರಶ್ನೆ ಎದುರಾಗಿದೆ.

    ೫.೨೭ ಲP್ಷÀ ಹೆಕ್ಟೇರ್‌ಗೆ ನೀರುಣಿಸುವ ಮೂಲಕ ಬಸವಸಾಗರ ಜಲಾಶಯ ರೈತರ ಜೀವನಾಡಿಯಾಗಿದೆ. ೧೫ ದಿನ ಹಿಂದೆ ನೀರಿಲ್ಲದೆ ಡೆಡ್ ಸ್ಟೋರೆಜ್ ಹಂತಕ್ಕೆ ತಲುಪುವ ಮೂಲಕ ಅನ್ನದಾತರ ಮುಖದಲ್ಲಿ ಆತಂಕ ಮೂಡಿತ್ತು. ಆದರೆ ಜು.೨೨ರಿಂದ ೧೦ ದಿನಗಳಲ್ಲಿ ೧೭.೦೧ ಟಿಎಂಸಿ ನೀರು ಸಂಗ್ರಹಗೊಳ್ಳುವ ಮೂಲಕ ಭರ್ತಿಯಾಗಿದೆ. ಜಲಾಶಯದಲ್ಲಿ ಸದ್ಯ ೩೧.೦೧ ಟಿಎಂಸಿ ನೀರಿಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

    ನೀರಿನ ಒಳ ಮತ್ತು ಹೊರಹರಿವಿನಲ್ಲಿ ಏರಿಳಿತ ಕಾಣುತ್ತಿರುವ ಜಲಾಶಯಕ್ಕೆ ಪ್ರಸ್ತುತ ೬೦ ಸಾವಿರ ಕ್ಯೂಸೆಕ್ ಒಳಹರಿವಿದೆ. ೩೦ ಮುಖ್ಯ ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ೮೫,೩೬೯ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದರಿಂದಾಗಿ ನೀರಿನ ಸಂಗ್ರಹದಲ್ಲೂ ಏರಿಳಿತವಾಗುತ್ತಿದೆ. ಇನ್ನು ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿಸುವ ಸಾಧ್ಯತೆ ಇರುವುದರಿಂದ ಬಸವಸಾಗರಕ್ಕೆ ಇನ್ನೂ ಹೆಚ್ಚಿನ ಒಳಹರಿವು ಉಂಟಾಗುವುದರಲ್ಲಿ ಸಂದೇಹವಿಲ್ಲ.
    ಹಲವು ಬಾರಿ ನಮ್ಮ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಮಹಾರಾಷ್ಟçದಲ್ಲಿ ಸುರಿಯುವ ಮಳೆಯಿಂದಾಗಿ ಭರ್ತಿಯಾಗುವ ಮೂಲಕ ರೈತರ ಹಿತ ಕಾಪಾಡುತ್ತಿರುವ ಜಲಾಶಯ ಈ ವರ್ಷ ತಡವಾಗಿಯಾದರೂ ಭರ್ತಿಯಾಗಿದೆ. ರೈತರು ಖುÄಷಿಯಿಂದಲೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೃಷ್ಣೆಗೆ ಬಾಗಿನ ಅರ್ಪಣೆ ಯಾವಾಗ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

    ಜಲಾಶಯ ಭರ್ತಿಯಾದಾಗ ನಿಗಮದ ಅಧಿಕಾರಿಗಳು ಸಂಪ್ರದಾಯದAತೆ ಗೇಟ್‌ಗಳಿಗೆ ಪೂಜಿಸುವ ಮೂಲಕ ನದಿಗೆ ನೀರು ಬಿಡುತ್ತಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಸ್ಥಳೀಯ ಶಾಸಕರಾಗಲಿ ಒಡಲು ತುಂಬಿರುವ ಕೃಷ್ಣೆಗೆ ಬಾಗಿನ ಸಲ್ಲಿಸಲು ದಿನಾಂಕ ನಿಗದಿಪಡಿಸಿಲ್ಲ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಳೆದ ವರ್ಷ ಹೊರತುಪಡಿಸಿದರೆ ಉಳಿದೆಲ್ಲ ವರ್ಷ ಮಾಜಿ ಶಾಸಕ ನರಸಿಂಹ ನಾಯಕ ಕೃಷ್ಣೆಗೆ ಬಾಗಿನ ಅರ್ಪಿಸಿರುವುದನ್ನು ಸ್ಮರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts