More

    ಮಾರುಕಟ್ಟೆಗೆ ಬಂತು ಸಕ್ಕರೆ ಆರತಿ

    ಪವನ ದೇಶಪಾಂಡೆ ಕೊಡೇಕಲ್: ಗೌರಿ ಹುಣ್ಣಿಮೆ ಎಂದರೆ ಉತ್ತರ ಕರ್ನಾಟಕ ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮ. ಮನೆಗಳಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಬಗೆ ಬಗೆಯ ಸಕ್ಕರೆ ಆರತಿ ಇಟ್ಟು ಆರಾಧನೆ ಮಾಡಲಾಗುತ್ತಿದೆ. ಅಲ್ಲದೆ ಮನೆಗೆ ಸೊಸೆಯಾಗಿ ಬರುವವಳು, ಅಕ್ಕ-ತಂಗಿಯರಿಗೆ ಸಕ್ಕರೆ ಆರತಿ ಕೊಡುವುದು ಹಿಂದಿನಿAದಲೂ ನಡೆದುಕೊಂಡು ಬಂದ ಸಂಪ್ರದಾಯ.

    ಈ ಹಬ್ಬದ ವಿಶೇಷ ಎಂದರೆ ಸಕ್ಕರೆ ಆರತಿ ಬೆಳಗುವುದು. ಅದರಲ್ಲೂ ಕೊಡೇಕಲ್‌ನಲ್ಲಿ ಗೌರಿ ಹುಣ್ಣಿಮೆಗೆ ಶ್ರೀ ಬಸವೇಶ್ವರ ಜಾತ್ರೋತ್ಸ ಕೂಡ ಆರಂಭವಾಗಲಿದ್ದು, ಸಕ್ಕರೆ ಆರತಿ ಜತೆ ಮಿಠಾಯಿಗಳ ತಯಾರಿಕೆಯೂ ಭರದಿಂದ ಸಾಗಿದೆ.

    ಸೋಮವಾರ (ನ.೨೭) ಗೌರಿ ಹುಣ್ಣಿಮೆ ನಿಮಿತ್ತ ಐದು ದಶಕಕ್ಕೂ ಅಧಿಕ ಅವಧಿಯಿಂದ ಮಿಠಾಯಿ ವ್ಯಾಪಾರ ನಡೆಸುತ್ತಿರುವ ಸ್ಥಳೀಯ ಅಂಗಡಿ ಮತ್ತು ಐಹೊಳೆ ಮನೆತನದವರು ಸಕ್ಕರೆ ಗೊಂಬೆ ಆರತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಕ್ಕರೆಯ ಆನೆ, ರಥ, ಶಿವ-ಪಾರ್ವತಿ, ಒಂಟೆ ಸೇರಿ ವಿವಿಧ ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತಿದ್ದು, ಮಾರುಕಟ್ಟೆಗೆ ಬರಲು ಸಿದ್ಧವಾಗಿವೆ.

    ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಮಿಠಾಯಿ ತಯಾರಿಕೆಯಲ್ಲಿ ಪ್ರಸಿದ್ಧರಾಗಿರುವ ಅಂಗಡಿ ಮತ್ತು ಐಹೊಳೆ ಕುಟುಂಬದವರು ಹಲವು ವರ್ಷಗಳಿಂದ ಸಿಹಿ ಜತೆಗೆ ಖಾರದ ತಿನಿಸು ತಯಾರಿಸುವುದರಲ್ಲಿ ಸಿದ್ಧಹಸ್ತರು. ಕಳೆದ ಒಂದು ವಾರದಿಂದ ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತಿರುವ ಈ ಕುಟುಂಬಗಳು ಹಗಲೂ ರಾತ್ರಿ ಎನ್ನದೆ ಕಾಯಕದಲ್ಲಿ ನಿರತರಾಗಿವೆ.

    ಗ್ರಾಮೀಣ ಭಾಗದ ಕೆಲ ಮನೆಗಳಲ್ಲಿ ಮಾತ್ರ ಈ ಹಬ್ಬ ಆಚರಿಸಲಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಸಕ್ಕರೆ ಆರತಿಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಸಕ್ಕರೆ ಗೊಂಬೆಗಳನ್ನು ತಯಾರಿಸುವವರು.

    ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಮಿಠಾಯಿ ಮಾಡುವ ವೃತ್ತಿಯನ್ನು ನಾವು ಮುಂದುವರಿಸಿದ್ದೇವೆ. ಗೌರಿ ಹಬ್ಬಕ್ಕೆಂದು ಈಗಾಗಲೇ ಸಕ್ಕರೆ ಗೊಂಬೆ ಆರತಿಗಳನ್ನು ತಯಾರಿಸಿದ್ದೇವೆ. ಮೊದಲಿನಂತೆ ಖರೀದಿ ಆಗುತ್ತಿವಾದರೂ ವೃತ್ತಿಯನ್ನು ಕೈಬಿಟ್ಟಿಲ್ಲ.
    | ರುದ್ರಪ್ಪ ಸಾಹುಕಾರ ಅಂಗಡಿ ಮಿಠಾಯಿ ವ್ಯಾಪಾರಸ್ಥ ಕೊಡೇಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts