More

    ಐಶ್ವರ್ಯಾ, ಅರ್ಚಿತಾ, ಸೈಯದ್ ಜಿಲ್ಲೆಗೆ ಪ್ರಥಮ

    ಚಿತ್ರದುರ್ಗ: ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಕೆಲ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಟಾಪರ್‌ಗಳ ಪೈಕಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

    ಕಲಾ ವಿಭಾಗದಲ್ಲಿ ಚಳ್ಳಕೆರೆ ತಾಲೂಕು ನಾರಾಯಣಪುರ ಗ್ರಾಮದ ಎಸ್‌ಎಲ್‌ಕೆಎಚ್‌ಆರ್ ಸಂಯುಕ್ತ ಪಪೂ ಕಾಲೇಜಿನ ಜಿ.ಅರ್ಚಿತಾ 600ಕ್ಕೆ 582 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಆಂಜನೇಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಲ್ಫಿಯಾ ಬಾನು 579, ಹೊಸದುರ್ಗ ನಗರದ ಎಸ್‌ಜೆಎಂ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿ ಶರತ್‌ಕುಮಾರ್ 573 ಅಂಕಗಳಿಸಿ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.

    ವಾಣಿಜ್ಯ ವಿಭಾಗದಲ್ಲಿ ಚಳ್ಳಕೆರೆ ನಗರದ ಶ್ರೀನಿವಾಸ ಪಿಯು ಕಾಲೇಜಿನ ವಿದ್ಯಾರ್ಥಿ ಕೆ.ಸೈಯದ್ ಫೈಜಾನ್ 600ಕ್ಕೆ 593 ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಚಿತ್ರದುರ್ಗ ಹೊರಹೊಲಯದ ಸೀಬಾರದ ಗುತ್ತಿನಾಡು ವಿಶ್ವ ಮಾನವ ಸಂಯುಕ್ತ ಪಪೂ ಕಾಲೇಜಿನ ವಿದ್ಯಾರ್ಥಿನಿ ಡಿ.ಎಸ್.ರಮ್ಯಾ 584, ಹಿರಿಯೂರು ತಾಲೂಕಿನ ನಂದಿಹಳ್ಳಿ ಆದಿವಾಲ ಗ್ರಾಮದ ಆಸೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಡಿ.ನಜ್ಮುನ್ನಿಸ್ಸಾ 583 ಅಂಕಗಳಿಸಿ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಚಿತ್ರದುರ್ಗದ ಶ್ರೀರಂಗನಾಥ ಪಿಯು ಕಾಲೇಜಿನ ವಿದ್ಯಾರ್ಥಿನಿ ಜಿ.ಟಿ.ಐಶ್ವರ್ಯಾ 600ಕ್ಕೆ 587 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ. ಎಸ್‌ಆರ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಸ್.ನೇಹಾ 586, ಚಿನ್ಮೂಲಾದ್ರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಹುಸೇನ್ ಗರಿ ದಾಫಿಯಾ 585 ಅಂಕ ಗಳಿಸಿ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts