More

    ಐದು ಜನರಿಗೆ ಕರೊನಾ ಸೋಂಕು ದೃಢ

    ಕಾರವಾರ: ಜಿಲ್ಲೆಯಲ್ಲಿ ಮತ್ತೆ ಐವರಿಗೆ ಕರೊನಾ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ. ಜಿಲ್ಲೆಯ ಒಟ್ಟಾರೆ ಕರೊನಾ ರೋಗಿಗಳ ಸಂಖ್ಯೆ 114ಕ್ಕೆ ತಲುಪಿದೆ. ಮುಂಬೈನಿಂದ ಮರಳಿ ಹೊನ್ನಾವರದಲ್ಲಿ ಸರ್ಕಾರಿ ಕ್ವಾರಂಟೈನ್​ನಲ್ಲಿದ್ದ ಹೊನ್ನಾವರದ 65, 61 ಹಾಗೂ 35 ವರ್ಷದ ಮಹಿಳೆ (ಯುಕೆ- 113, ಯುಕೆ- 112, ಯುಕೆ- 111) ಹಾಗೂ 10 ವರ್ಷದ ಬಾಲಕನಲ್ಲಿ (ಯುಕೆ-110) ಸೋಂಕು ದೃಢವಾಗಿದೆ. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ಫಿಲಿಫೈನ್ಸ್​ನಿಂದ ಬೆಂಗಳೂರಿಗೆ ಬಂದಿಳಿದು ಅಲ್ಲಿ ಏಳು ದಿನ ಹೋಟೆಲ್ ಕ್ವಾರಂಟೈನ್ ಮುಗಿಸಿ, ಹಳಿಯಾಳದಲ್ಲಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ 34 ವರ್ಷದ ಪುರುಷನಲ್ಲಿ (ಯುಕೆ-114) ರೋಗ ಖಚಿತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts