More

    ಐಹೊಳೆಗೆ ಕರೆದೊಯ್ಯುವ ಚಾಲುಕ್ಯ ಶಿಲ್ಪಕಲೆ

    ಗದಗ: ಬಾದಾಮಿ ಚಾಲುಕ್ಯರ ಶಿಲ್ಪಕಲೆ ಕುರಿತಾದ ಅತ್ಯುತ್ತಮ ರಸಗ್ರಹಣ, ರಸಸ್ವಾದನೆ ‘ಚಾಲುಕ್ಯ ಶಿಲ್ಪಕಲೆ’ ಕೃತಿಯಿಂದ ಪ್ರಾಪ್ತವಾಗುತ್ತದೆ. ಕೃತಿಯಲ್ಲಿನ ಚಿತ್ರಗಳು ಓದುಗರನ್ನು ಐಹೊಳೆ, ಪಟ್ಟದಕಲ್ಲು, ಬಾದಾಮಿ, ಮಹಾಕೂಟ ದೇವಾಲಯಗಳಿಗೆ ಭೇಟಿ ನೀಡುವಂತೆ ಪ್ರೇರೇಪಿಸುತ್ತವೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

    ನಗರದ ಕೃಷಿ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಂಡಲೀಕ ಕಲ್ಲಿಗನೂರ ಅವರ ‘ಚಾಲುಕ್ಯ ಶಿಲ್ಪಕಲೆ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

    ಶಿಲ್ಪಕಲೆ ಕುರಿತಾದ ಅತ್ಯಂತ ಬಹುವರ್ಣದಲ್ಲಿ ಮೂಡಿ ಬಂದ ಇಂತಹ ಕೃತಿಗಳು ಮುಂದೆಯೂ ಬರಬೇಕು. ಗದಗನಲ್ಲಿ ಸಂಗೀತದ ಗುಂಜಾರವ ಮತ್ತೆ ಮೊಳಗಬೇಕು. ನಗರದ ಉದ್ಯಾನಗಳಲ್ಲಿ ಉದಯರಾಗ, ಸಂಧ್ಯಾರಾಗ ಕಾರ್ಯಕ್ರಮಗಳು ಆರಂಭವಾಗಬೇಕು. ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು.

    ಪುಣೆಯ ಓರಿಯಂಟಲ್ ಸಂಸ್ಥೆಯ ಶ್ರೀನಿವಾಸ ಪಾಡಿಗಾರ ಮಾತನಾಡಿ, ಬಾದಾಮಿ ಚಾಲುಕ್ಯರ ಶಿಲ್ಪಕಲೆಯ ಕೃತಿ ವಿಶಿಷ್ಟವಾದುದು. ಶಿಲ್ಪಕಲೆ ಕುರಿತಾದ ಅಧ್ಯಯನಕ್ಕೆ ಹೊಸ ಆಯಾಮ ಪರಿಚಯಿಸುತ್ತದೆ. ಸಂಶೋಧಕರಿಗೆ ವಿಭಿನ್ನವಾಗಿ ಕಲೆಯ ಆಸ್ವಾದನೆ ಮತ್ತು ರಸಗ್ರಹಣ ದೃಷ್ಟಿಯಿಂದ ಈ ಚಿತ್ರಗಳು ಬಹು ಮಹತ್ವಪೂರ್ಣವಾಗಿವೆ. ಕೃತಿಯು 520 ಪುಟಗಳು ಹಾಗೂ 1600ಕ್ಕೂ ಹೆಚ್ಚು ಚಿತ್ರಗಳನ್ನು ಒಳಗೊಂಡಿದೆ. ಪ್ರತಿಯೊಬ್ಬ ಇತಿಹಾಸ ಪ್ರೇಮಿಗಳಲ್ಲಿ ಇರಲೇಬೇಕಾದ ಪುಸ್ತಕ ಇದಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಚಾಲುಕ್ಯ ಶಿಲ್ಪಕಲೆ ಕೃತಿ ಓದುವುದರ ಮೂಲಕ ನಮ್ಮಲ್ಲಿ ಪ್ರಾಚ್ಯಪ್ರಜ್ಞೆ ಜಾಗೃತಗೊಂಡು ಶಿಲ್ಪಕಲಾ ದೇಗುಲಗಳನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಇದರಲ್ಲಿರುವ ಚಿತ್ರಗಳನ್ನು ಪಿಪಿಟಿ ಮೂಲಕ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ತೋರಿಸುವುದರಿಂದ ದೃಷ್ಟಿಕೋನ ಬದಲಾಗುತ್ತದೆ. ಇದರಿಂದ ದೇವಾಲಯಗಳನ್ನು ನೋಡುವ ಸಂಸ್ಕೃತಿ ತೋರಿಸಿದಂತಾಗುತ್ತದೆ ಎಂದರು.

    ಕೃತಿಕಾರ ಪುಂಡಲೀಕ ಕಲ್ಲಿಗನೂರ ಮಾತನಾಡಿದರು. ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ಜೆ.ಕೆ. ಜಮಾದಾರ, ಎಸ್.ಎನ್.ಬಳ್ಳಾರಿ, ಡಾ. ಕಿಶೋರಬಾಬು ನಾಗರಕಟ್ಟಿ, ಡಾ. ಎಚ್.ಬಿ. ಪೂಜಾರ, ಡಾ.ರಶ್ಮಿ ಅಂಗಡಿ, ಪ್ರೊ. ಬಿ.ಸಿ. ಹನುಮಂತಗೌಡ್ರ, ರಮಾಕಾಂತ ಕಮತಗಿ, ಡಾ. ಎಸ್.ಎಂ. ಮಠ, ಡಾ. ಬಿ.ಎಲ್. ಚವ್ಹಾಣ್, ಪ್ರೊ. ಜಿ.ಎಂ. ಹಕಾರಿ, ಪ್ರೊ. ವಿರೂಪಾಕ್ಷಪ್ಪ ಗೂರನವರ, ಪ್ರೊ. ರಮೇಶ ಕಲ್ಲನಗೌಡ್ರ, ಪ್ರೊ. ಬಿ.ಜಿ. ಗಿರಿತಿಮ್ಮಣ್ಣವರ, ಪ್ರೊ. ಎಸ್.ಎ. ಆವಾರಿ, ಕೆ.ಎಸ್. ಜಯದೇವಭಟ್, ಶೇಖಣ್ಣ ಕವಳಿಕಾಯಿ, ಅಶೋಕ ಬರಗುಂಡಿ, ಎಸ್.ಎಂ. ಕಾತರಕಿ, ಬಸವರಾಜ ಗಣಪ್ಪನವರ, ಅ.ದ. ಕಟ್ಟಿಮನಿ, ಎಸ್.ಎ. ಮತ್ತೂರ, ಶಿಲ್ಪಾ ಮ್ಯಾಗೇರಿ, ಜಿ.ಬಿ. ಹಾವಣಗಿ, ಶ್ರೀನಿವಾಸ ಕುಲಕರ್ಣಿ ಇದ್ದರು. ಡಾ. ದತ್ತಪ್ರಸನ್ನ ಪಾಟೀಲ, ಈರಣ್ಣ ಮಾದರ, ಶಿವಾನಂದ ಗಿಡ್ನಂದಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts