More

    ಐಟಿಐ ಕಾಲೇಜ್​ಗೆ 4 ಎಕರೆ ಜಾಗ ಮಂಜೂರು

    ಕುಮಟಾ: ಇಲ್ಲಿನ ಕೃಷಿ ಇಲಾಖೆಯ ಕೃಷಿ ಪಾಠಶಾಲೆ ಮತ್ತು ಬೀಜೋತ್ಪಾದನಾ ಕೇಂದ್ರವಿರುವ ಚಿಕ್ಕೊಳ್ಳಿ ಗ್ರಾಮದ ಸರ್ವೆ ನಂ. 4 ರಲ್ಲಿ 4 ಎಕರೆ ಜಾಗವನ್ನು ಸರ್ಕಾರಿ ಕೈಗಾರಿಕಾ ಸಂಸ್ಥೆ (ಐಟಿಐ) ಕಾಲೇಜ್ ಕಟ್ಟಡ ನಿರ್ವಿುಸಲು ಪ್ರಾಚಾರ್ಯರಿಗೆ ಹಸ್ತಾಂತರಿಸಿ ಸರ್ಕಾರ ಆದೇಶಿಸಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

    ಐಟಿಐ ಕಾಲೇಜಿಗೆ ಮಂಜೂರಾದ ಜಾಗವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಶುಕ್ರವಾರ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

    ಈಗಾಗಲೇ ಐಟಿಐ ಕಾಲೇಜ್ ಕಟ್ಟಡಕ್ಕೆ 2.5 ಕೋಟಿ ರೂ. ಮಂಜೂರಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಶೀಘ್ರ ಭೂಮಿಪೂಜೆ ನೆರವೇರಿಸಿ, ಕಾಮಗಾರಿ ಆರಂಭಿಸಲಾಗುವುದು ಎಂದರು.

    ಧಾರವಾಡ ಕೃಷಿ ವಿಶ್ವ ವಿದ್ಯಾಲಯಕ್ಕೆ ಸೇರಿದ ಈ ಜಾಗವೇ ಐಟಿಐ ಕಾಲೇಜ್​ಗೆ ಪ್ರಶಸ್ತವೆಂದು ಗುರುತಿಸಿ ಕೆಲ ತಿಂಗಳ ಹಿಂದಷ್ಟೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ವಿಶ್ವ ವಿದ್ಯಾಲಯದ ಅಭಿಪ್ರಾಯ ಪಡೆದು ಸರ್ಕಾರ ಈ ಜಾಗವನ್ನು ಐಟಿಐ ಕಾಲೇಜ್​ಗೆ ಷರತ್ತು ಬದ್ಧವಾಗಿ ಹಸ್ತಾಂತರಿಸಿ ಫೆ. 17ರಂದು ಆದೇಶಿಸಿದೆ. ಪಟ್ಟಣದ ಮಧ್ಯಭಾಗ ಬಸ್ ನಿಲ್ದಾಣದ ಪಕ್ಕದಲ್ಲಿ ಕಾಲೇಜ್ ನಿರ್ವಿುಸುವುದು ಎಲ್ಲ ರೀತಿಯಿಂದ ಅತ್ಯುತ್ತಮವಾಗಿದೆ ಎಂದರು.

    ಈ ವೇಳೆ ಜಿಪಂ ಸದಸ್ಯ ಗಜಾನನ ಪೈ, ಐಟಿಐ ಕಾಲೇಜ್ ಪ್ರಾಚಾರ್ಯ ಡಿ.ಟಿ. ನಾಯಕ, ಕೃಷಿ ಸಹಾಯಕ ನಿರ್ದೇಶಕಿ ರೇಷ್ಮಾ ಶಹಾಪುರಮಠ, ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಮುಖ್ಯಾಧಿಕಾರಿ ಎಂ.ಕೆ. ಸುರೇಶ, ಗಜಾನನ ಪೈ, ಜಿ.ಜಿ. ಗುನಗಾ, ವಿನಾಯಕ ನಾಯ್ಕ, ಸುಧೀರ ಪಂಡಿತ ಇತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts