More

    ಏ.2ರಂದು ಅಹಿಂಸಾ ರನ್ ಕಾರ್ಯಕ್ರಮ

    ಬೆಳಗಾವಿ: ಶಾಂತಿ, ಅಹಿಂಸೆ ಕುರಿತಾದ ಸಂದೇಶ ಪ್ರಚಾರ ಮಾಡುವ ಏಕೈಕ ಉದ್ದೇಶದಿಂದ ಏ. 2ರಂದು ರಾಷ್ಟ್ರಾದ್ಯಂತ ‘ಅಹಿಂಸಾ ರನ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೈನ ಅಂತಾರಾಷ್ಟ್ರೀಯ ಟ್ರೇಡ್ ಸಂಸ್ಥೆ (ಜಿತೋ) ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ದೊಡ್ಡಣ್ಣವರ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿತೋ ಅಹಿಂಸಾ ರನ್ ಬೆಳಗಾವಿ ಸೇರಿ ದೇಶದ 65 ಪ್ರಮುಖ ನಗರ ಮತ್ತು ಇಂಗ್ಲೆಂಡ್, ಅಮೆರಿಕಾ ಸೇರಿ 20 ಅಂತಾರಾಷ್ಟ್ರೀಯ ನಗರಗಳಲ್ಲಿ ಕಾರ್ಯಕ್ರಮ ನಡೆಯಲಿದೆ. 2 ಸಾವಿರಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

    ಮಹಾವೀರ ತತ್ತ್ವಗಳಲ್ಲಿ ಒಂದಾದ ಬದುಕಿ ಮತ್ತು ಬದಕಲು ಬಿಡಿ ಎಂಬ ಸಂದೇಶ ಹೊತ್ತು ಈ ಅಹಿಂಸಾ ರನ್ ಕಾರ್ಯಕ್ರಮ ನಡೆಯಲಿದೆ. 3 ಕಿಮೀ, 5 ಕಿಮೀ ಮತ್ತು 10 ಕಿಮೀ ಅಂತರದ ಮ್ಯಾರಥಾನ್‌ಗೆ ಏ. 2ರಂದು ನಗರದ ಕ್ಯಾಂಪ್ ಪ್ರದೇಶದಲ್ಲಿ ಮರಾಠಿ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಕಮಾಂಡರ್ ಕರ್ನಲ್ ಮನೋಜ ಶರ್ಮಾ, ಡಿಸಿಪಿ ಪಿ.ವಿ.ಸ್ನೇಹಾ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

    ಕಾರ್ಯಕ್ರಮ ಸಂಯೋಜಿಕಿ ಡಾ. ಅಂಜನಾ ಬಾಗೇವಾಡಿ, ವಿನಯ ಬಾಳಿಕಾಯಿ, ಜಿತೋ ಲೇಡಿಸ್ ವಿಂಗ ಪ್ರಧಾನ ಕಾರ್ಯದರ್ಶಿ ರೋಶನಿ ಖೋಡಾ, ಭಾರತಿ ಹರದಿ, ಜಿತೋ ಚೇರ್ಮನ್ ಮುಕೇಶ ಪೋರವಾಲ, ನಿತಿನ ಪೋರವಾಲ, ಯೂತ್ ವಿಂಗ್ ಉಪಾಧ್ಯಕ್ಷ ದೀಪಕ ಸುಬೇದಾರ, ಪ್ರಧಾನ ಕಾರ್ಯದರ್ಶಿ ದೀಪಕ ಪೋರವಾಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts