More

    ಏಜೆಂಟ್ ಮುಕ್ತ ಸಮಾಜ ರೂಪಿಸಲು ಆದ್ಯತೆ

    ಅಣ್ಣಿಗೇರಿ: ದೇಶಕ್ಕೆ ಅನ್ನ ನೀಡುವ ರೈತ ಸುಖವಾಗಿದ್ದರೆ ಎಲ್ಲರ ಬದುಕು ಸದಾ ಸಂತೋಷದಿಂದ ಇರಲು ಸಾಧ್ಯ. ರೈತರು ಬೆಳೆಗಳನ್ನು ಸರಳವಾಗಿ ಮನೆಗೆ ತರಲು ಅವಶ್ಯಕ ರಸ್ತೆಗಳ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸುತ್ತಿರುವುದು ನನ್ನ ಪುಣ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ 47.63 ಕೋಟಿ ರೂ. ಅನುದಾನದಲ್ಲಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

    ದೇಶದಲ್ಲಿ ಈ ಹಿಂದೆ ಪ್ರತಿ ಕಾರ್ಯವೂ ಏಜೆಂಟರ ಮೂಲಕ ನಡೆಯುತ್ತಿದ್ದವು. ಸದ್ಯ ಮೋದಿ ಸರ್ಕಾರ ಏಜೆಂಟ್ ಮುಕ್ತ ಸಮಾಜ ನಿರ್ವಣಕ್ಕೆ ಮುಂದಾಗಿದೆ. ಬಡವರು, ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರಸ್ತೆ, ಸಮುದಾಯ ಭವನಗಳನ್ನು ಆದಷ್ಟು ಬೇಗ ನಿರ್ವಿುಸಿ ಜನರಿಗೆ ಅನುಕೂಲ ಕಲ್ಪಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

    ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ ಚಕ್ಕಡಿ ರಸ್ತೆ, ಸಮುದಾಯ ಭವನಗಳನ್ನು ಅಚ್ಚುಕಟ್ಟಾಗಿ ನಿರ್ವಿುಸಿ ಮಾದರಿ ಕ್ಷೇತ್ರವನ್ನಾಗಿ ರೂಪಿಸಲಾಗುವುದು. 47.63 ಕೋಟಿ ರೂ. ಅನುದಾನದಲ್ಲಿ ನಾಗರಹಳ್ಳಿ-ಅಣ್ಣಿಗೇರಿ ರಸ್ತೆ, ಅಣ್ಣಿಗೇರಿ-ಭದ್ರಾಪುರ, ಶಲವಡಿ- ದಾಟನಾಳವರೆಗಿನ ರಸ್ತೆ, ಮೊರಬ ಗ್ರಾಮದಿಂದ ತಾಲೂಕಿನ ಗಡಿಯವರೆಗೆ ಹಾಗೂ ಕ್ಷೇತ್ರದ 44 ಹಳ್ಳಿಗಳಲ್ಲಿ ಸಮುದಾಯ ಭವನಗಳನ್ನು ನಿರ್ವಿುಸಲಾಗುವುದು ಎಂದರು.

    ಷಣ್ಮುಖ ಗುರಿಕಾರ, ಬಸವರಾಜ ಕುಂದಗೋಳಮಠ, ಶರಣಪ್ಪ ದಾನಪ್ಪಗೌಡರ, ಎ.ಬಿ. ಹಿರೇಮಠ, ಬಸವರಾಜ ಯಳವತ್ತಿ, ಬೋನಪ್ಪ ತಳವಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts